ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಮತ್ತು ಅದಾನಿ ಎಂಟರ್‌ಪ್ರೈಸಸ್ ಸೇರಿದಂತೆ ಅದಾನಿ ಸಮೂಹದ ಷೇರುಗಳ ಮೇಲೆ ಪ್ರಸ್ತುತ ಅಧಿಕ ಫೋಕಸ್‌ನಲ್ಲಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ಸದಾ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಸ್ಟಾಕ್‌ಗಳ ಮೇಲೆ ಹೂಡಿಕೆದಾರರ ಚಿತ್ತ ನೆಟ್ಟಿದೆ.
ಸೋಮವಾರ, ಅರ್ಜಿದಾರರೊಬ್ಬರು ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವರ್ಷದ ಜನವರಿ 24 ರಂದು ಯುಎಸ್ ಮೂಲದ ಹಿಂಡನ್‌ಬರ್ಗ್ ವರದಿಯ ಮೇಲೆ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಈಗಾಗಲೇ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರೂಪಿಸುವಂತೆ ಮನವಿ ಮಾಡಲಾಗಿದೆ.

ಪ್ರಸ್ತುತ ಸೆಬಿಯು ಈ ಪ್ರಕರಣದಲ್ಲಿ ತನಿಖೆಯನ್ನು ನಡೆಸುತ್ತಾ ಬಂದಿದೆ. ಸೋಮವಾರ ಸಲ್ಲಿಸಲಾದ ಅರ್ಜಿಯಲ್ಲಿ ಹೆಸರಿಸಲಾದ ಮೂವರು ತಜ್ಞರಲ್ಲಿ ಒಪಿ ಭಟ್, ಕೆವಿ ಕಾಮತ್ ಮತ್ತು ಸೋಮಶೇಖರ್ ಸುಂದರೇಶನ್ ಸೇರಿದ್ದಾರೆ.
ಪ್ರಸ್ತುತ, ಆರು ಸದಸ್ಯರ ನ್ಯಾಯಾಲಯ ನೇಮಿಸಿದ ಸಮಿತಿಯು ಕೈಗಾರಿಕೋದ್ಯಮಿ ಒಪಿ ಭಟ್ (ಗ್ರೀನ್ಕೊ ಗುಂಪಿನ ಅಧ್ಯಕ್ಷ), ನ್ಯಾಯಮೂರ್ತಿ ಜೆಪಿ ದೇವಧರ್, ಹಿರಿಯ ಬ್ಯಾಂಕರ್ ಕೆವಿ ಕಾಮತ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ವಕೀಲ ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡಿದೆ. ಮಾಜಿ ಸುಪ್ರೀಂ ನ್ಯಾಯಾಧೀಶ ನ್ಯಾಯಮೂರ್ತಿ ಎಎಂ ಸಪ್ರೆ ಇದರ ಮುಖ್ಯಸ್ಥರಾಗಿದ್ದಾರೆ. ಅಕ್ಟೋಬರ್ 13 ರಂದು ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಅದಾನಿ ಗ್ರೀನ್ ಎನರ್ಜಿ
ಫ್ರೆಂಚ್ ತೈಲ ದೈತ್ಯ ಟೋಟಲ್ಎನರ್ಜಿಸ್ ಅದಾನಿ ಸಮೂಹದ ಇಂಧನ ಸಂಸ್ಥೆಯೊಂದಿಗೆ ಹೊಸ ಜಂಟಿ ಉದ್ಯಮ ಕಂಪನಿಯಲ್ಲಿ ಸುಮಾರು 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ. ಇದಾದ ಬಳಿಕ ಅದಾನಿ ಗ್ರೀನ್ ಎನರ್ಜಿಯ ಷೇರಿನ ಮೇಲೆ ಹೂಡಿಕೆದಾರರ ಚಿತ್ತವಿದೆ.
ಇಂದು ಮುಂಜಾನೆ 9:38 ಗಂಟೆಗೆ ವಹಿವಾಟಿನಲ್ಲಿ ಅದಾನಿ ಗ್ರೀನ್ ಎನರ್ಜಿಯ ಷೇರಿನ ಬೆಲೆಯು ಶೇಕಡ 0.78 ರಷ್ಟು ಇಳಿಕೆಯಾಗಿ ಪ್ರತಿ ಷೇರಿಗೆ 997.10 ರೂಪಾಯಿಯಂತೆ ವಹಿವಾಟು ಆರಂಭ ಮಾಡಿದೆ. ಅದಾನಿ ಗ್ರೀನ್ ಎನರ್ಜಿ ಷೇರು ಈ ಸಮಯಕ್ಕೆ ಶೇಕಡ 0.24 ರಷ್ಟು ಕುಸಿದು, 1,002.50 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ.
ಅದಾನಿ ಎಂಟರ್‌ಪ್ರೈಸಸ್
ಇಂದು, ಅದಾನಿ ಎಂಟರ್‌ಪ್ರೈಸಸ್‌ನ ಷೇರಿನ ಬೆಲೆಯು ಬೆಳಗ್ಗೆ 9:40 ಸಮಯಕ್ಕೆ ಪ್ರತಿ ಷೇರಿಗೆ 2,515.55 ರೂಪಾಯಿ ಆಗಿದೆ. ಸೋಮವಾರ, ಅದಾನಿ ಎಂಟರ್‌ಪ್ರೈಸಸ್ ಷೇರು ಸುಮಾರು ಶೇಕಡ 1.5 ರಷ್ಟು ಕುಸಿದು 2501.10 ರೂಪಾಯಿ ಆಗಿದೆ. ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಷೇರು ಸುಮಾರು ಶೇಕಡ 0.48 ರಷ್ಟು ಇಳಿದು, 2,490.35 ರೂಪಾಯಿ ಆಗಿದೆ.
ಅದಾನಿ ಟೋಟಲ್ ಗ್ಯಾಸ್
ಅದಾನಿ ಟೋಟಲ್ ಗ್ಯಾಸ್ ಷೇರುಗಳು ಇಂದು ಬೆಳಗ್ಗೆ 9:42 ಗಂಟೆಗೆ ಸರಿಯಾಗಿ ಸುಮಾರು ಶೇಕಡ 0.16 ರಷ್ಟು ಕಡಿಮೆಯಾಗಿ, ಪ್ರತಿ ಷೇರಿಗೆ 638.10 ರೂಪಾಯಿಯಂತೆ ವಹಿವಾಟು ನಡೆಸಿದೆ. ಈ ಸಮಯಕ್ಕೆ ಈ ಷೇರು ಸುಮಾರು ಶೇಕಡ 0.11 ರಷ್ಟು ಇಳಿಕೆಯಾಗಿ 638.45 ರಂತೆ ವಹಿವಾಟು ನಡೆಸುತ್ತಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನಿಂದ 130-150 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಗೆದ್ದಿದೆ ಎಂದು ಕಂಪನಿ ಘೋಷಿಸಿದ ನಂತರ ಅದಾನಿ ಟೋಟಲ್ ಗ್ಯಾಸ್ ಷೇರು ಬೆಲೆ ಸೋಮವಾರ ಲಾಭದೊಂದಿಗೆ ವಹಿವಾಟು ಕೊನೆ ಮಾಡಿದೆ.


Click it and Unblock the Notifications