ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂಬ ಆರೋಪದ ಬಳಿಕ ಷೇರುಪೇಟೆಯಲ್ಲಿ ಅದಾನಿ ಸ್ಟಾಕ್‌ಗಳು ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಾರುಕಟ್ಟೆಯಲ್ಲಿ ಯಾವುದೇ ನಕಲಿ ಟ್ರೇಡಿಂಗ್ ಕಂಡಿಲ್ಲ ಎಂದು ಹೇಳಿದೆ. ಇದಾದ ಬಳಿಕ ಅದಾನಿ ಸ್ಟಾಕ್ ಏರಿಕೆ ಕಾಣುತ್ತಿದೆ. ಈಗ ಅದಾನಿ ಗ್ರೂಪ್ ಸ್ಟಾಕ್ ಮರುಪಾವತಿಸಿದ ಬಳಿಕವೂ ಸ್ಟಾಕ್ ಹೆಚ್ಚಳವಾಗಿದೆ.
ಅದಾನಿ ಗ್ರೂಪ್ ಸ್ಟಾಕ್ ಇಂದು ಏರಿಕೆಯಾಗಿದೆ. ಪ್ರಮುಖವಾಗಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್, ಅದಾನಿ ವಿಲ್ಮಾರ್ ಲಿಮಿಟೆಡ್, ಅದಾನಿ ಟೋಟಲ್ ಗ್ಯಾಸ್ ಮತ್ತು ಎನ್‌ಡಿಟಿವಿ ಸ್ಟಾಕ್‌ಗಳು ಏರಿಕೆಯಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಪ್ಯಾನೆಲ್ ಅದಾನಿ ಗ್ರೂಪ್ ಕಂಪನಿಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಮ್ಯಾನಿಪುಲೇಷನ್ ಮಾಡಿದ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ಹೇಳಿದೆ. ಇನ್ನು ಹೂಡಿಕೆದಾರರ ವಿಶ್ವಾಸ ಗಳಿಸುವ ಭಾಗವಾಗಿ ಅದಾನಿ ಗ್ರೂಪ್ ಸಾಲ ಮರುಪಾವತಿ, ಪೂರ್ವಪಾವತಿಯ ಕ್ರಮವನ್ನು ಕೈಗೊಂಡಿದೆ. ಅದಾನಿ ಗ್ರೂಪ್ 2.65 ಬಿಲಿಯನ್ ಡಾಲರ್ ಮೌಲ್ಯದ ಸಾಲ ಮರುಪಾವತಿ ಮಾಡಿದೆ ಎಂದು ವರದಿಯಾಗಿದೆ.
ಅದಾನಿ ಸ್ಟಾಕ್‌ಗಳು ಏರಿಕೆ
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್: ಇಂದು ವಹಿವಾಟಿನ ಮಧ್ಯದಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 3ರಷ್ಟು ಏರಿಕೆಯನ್ನು ಕಂಡಿದ್ದು 2,507 ರೂಪಾಯಿಗೆ ತಲುಪಿದೆ. ಪ್ರಸ್ತುತ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಮೌಲ್ಯವು ಶೇಕಡ 0.16ರಷ್ಟು ಇಳಿಕೆಯಾಗಿ 2,430.05 ರೂಪಾಯಿ ಆಗಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್: ಅದಾನಿ ಗ್ರೂಪ್‌ನ ಇನ್ನೊಂದು ಸ್ಟಾಕ್ ಆದ ಅದಾನಿ ಗ್ರೀನ್ ಎನರ್ಜಿ ಜೂನ್ 6ರಂದು ಏರಿಕೆಯಾಗಿದೆ. ಅದಾನಿ ಗ್ರೀನ್ ಎನರ್ಜಿಯ ಸ್ಟಾಕ್ ಮಾರುಕಟ್ಟೆ ಮೌಲ್ಯವು ಶೇಕಡ 0.38ರಷ್ಟು ಏರಿಕೆಯಾಗಿ 991.65 ರೂಪಾಯಿ ಆಗಿದೆ.
ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್: ಮಂಗಳವಾರ ಮಧ್ಯಂತರ ವಹಿವಾಟಿನಲ್ಲಿ ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಸ್ಟಾಕ್ ಶೇಕಡ 1.21ರಷ್ಟು ಇಳಿಕೆಯಾಗಿದ್ದು, ಪ್ರತಿ ಷೇರಿನ ಬೆಲೆಯು 819.55 ರೂಪಾಯಿ ಆಗಿದೆ. ಅದಾನಿ ಟ್ರಾನ್ಸ್‌ಮಿಷನ್‌ನ ಪ್ರಸ್ತುತ ಶೇಕಡ 1.43ರಷ್ಟು ಏರಿಕೆಯಾಗಿ ಮಾರುಕಟ್ಟೆ ಬೆಲೆಯು 816.20 ರೂಪಾಯಿ ಆಗಿದೆ.
ಅದಾನಿ ವಿಲ್ಮಾರ್ ಲಿಮಿಟೆಡ್: ವಹಿವಾಟಿನ ಮಧ್ಯದಲ್ಲಿ ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 1.21ರಷ್ಟು ಏರಿಕೆಯಾಗಿ, 437.50 ರೂಪಾಯಿಗೆ ತಲುಪಿದೆ. ವಹಿವಾಟಿನ ಅಂತ್ಯದಲ್ಲಿ ಅದಾನಿ ವಿಲ್ಮಾರ್ ಲಿಮಿಟೆಡ್ ಸ್ಟಾಕ್ ಶೇಕಡ 0.61ರಷ್ಟು ಇಳಿಕೆಯಾಗಿ 429.60 ರೂಪಾಯಿಗೆ ತಲುಪಿದೆ.
ಅದಾನಿ ಟೋಟಲ್ ಗ್ಯಾಸ್: ಮಂಗಳವಾರ ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಏರಿಕೆಯಾಗಿದೆ. ವಹಿವಾಟಿನ ಮಧ್ಯದಲ್ಲಿ ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಶೇಕಡ 0.03ರಷ್ಟು ಹೆಚ್ಚಳವಾಗಿ, 681.70 ರೂಪಾಯಿಗೆ ತಲುಪಿದೆ. ಜೂನ್ 6ರಂದು ಷೇರು ಮೌಲ್ಯ ಶೇಕಡ 0.36ರಷ್ಟು ಇಳಿಕೆಯಾಗಿ, 679.05 ರೂಪಾಯಿಗೆ ತಲುಪಿದೆ.
ಅದಾನಿ ಪವರ್ ಲಿಮಿಟೆಡ್: ಜೂನ್ 2ರಂದು ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ವಹಿವಾಟಿನ ಮಧ್ಯದಲ್ಲಿ ಶೇಕಡ 0.46ರಷ್ಟು ಹೆಚ್ಚಳವಾಗಿ 260.65 ರೂಪಾಯಿಗೆ ತಲುಪಿದೆ. ವಹಿವಾಟಿನ ಅಂತ್ಯದಲ್ಲಿ ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ಶೇಕಡ 0.36ರಷ್ಟು ಇಳಿಕೆಯಾಗಿ 679.05 ರೂಪಾಯಿಗೆ ತಲುಪಿದೆ.
ಎನ್‌ಡಿಟಿವಿ: ಬಿಎಸ್‌ಇಯಲ್ಲಿ ನ್ಯೂ ದೆಲ್ಲಿ ಟೆಕಿವಿಜನ್ ಲಿಮಿಟೆಡ್‌ನ ಷೇರುಗಳು ಶೇಕಡ 0.20ರಷ್ಟು ಇಳಿಕೆಯಾಗಿದ್ದು ರೂಪಾಯಿ 238.70ಕ್ಕೆ ತಲುಪಿದೆ. ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಎನ್‌ಡಿಟಿವಿ ಷೇರು ಶೇಕಡ 0.92ರಷ್ಟು ಇಳಿಕೆಯಾಗಿ, 236.70 ರೂಪಾಯಿಗೆ ತಲುಪಿದೆ.
ಅಂಬುಜಾ ಸಿಮೆಂಟ್: ಜೂನ್ 2ರಂದು ವಹಿವಾಟಿನ ಮಧ್ಯದಲ್ಲಿ ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 3.58ರಷ್ಟು ಹೆಚ್ಚಳವಾಗಿ 454.70 ರೂಪಾಯಿಗೆ ತಲುಪಿದೆ. ವಹಿವಾಟಿನ ಅಂತ್ಯದಲ್ಲಿ ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 4.41ರಷ್ಟು ಏರಿಕೆಯಾಗಿ 458.40 ರೂಪಾಯಿಗೆ ತಲುಪಿದೆ.
ಎಸಿಸಿ: ಜೂನ್ 2ರಂದು ವಹಿವಾಟಿನ ಮಧ್ಯದಲ್ಲಿ ಎಸಿಸಿ ಸ್ಟಾಕ್ ಶೇಕಡ 2.26ರಷ್ಟು ಹೆಚ್ಚಳವಾಗಿ 1851.90 ರೂಪಾಯಿಗೆ ತಲುಪಿದೆ. ಇನ್ನು ವಹಿವಾಟಿನ ಅಂತ್ಯದಲ್ಲಿ ಎಸಿಸಿ ಸ್ಟಾಕ್ ಶೇಕಡ 2.57ರಷ್ಟು ಏರಿಕೆಯಾಗಿ 1,857.00 ರೂಪಾಯಿಗೆ ತಲುಪಿದೆ.


Click it and Unblock the Notifications