ಜನವರಿ ತಿಂಗಳು ಅಂತ್ಯವಾಗುತ್ತಾ ಬಂದ ಹಾಗೆ ಅದಾನಿ ಗ್ರೂಪ್ ನೆಗೆಟಿವ್ ಸುದ್ದಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಈ ಹಿಂದೆ ಅಧಿಕ ಲಾಭ ಗಳಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ ಅದಾನಿ ಗ್ರೂಪ್ ಈಗ ಅತೀ ಹೆಚ್ಚು ನಷ್ಟವನ್ನು ಕಂಡ ಸಂಸ್ಥೆಯ ಪಟ್ಟಿಯಲ್ಲಿ ಕಾಣಸಿಗುತ್ತಿದೆ. ಈಗ ಟಾಪ್ 10 ಕಾರ್ಪೋರೇಟ್ ತೆರಿಗೆದಾರರ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಅದಾನಿ ಗ್ರೂಪ್ ಹೆಸರು ಇಲ್ಲವೆಂದರೆ ಯಾವುದೇ ವ್ಯವಹಾರದ ಜ್ಞಾನವಿಲ್ಲದ ವ್ಯಕ್ತಿಗೂ ಕೂಡಾ ಆಶ್ಚರ್ಯವಾಗುವುದು ಖಂಡಿತ. ಹೌದು 2022ರಲ್ಲಿ ಅತೀ ಹೆಚ್ಚು ಲಾಭ ಪಡೆದ ಸಂಸ್ಥೆ ಟಾಪ್ 10 ಕಾರ್ಪೋರೇಟ್ ತೆರಿಗೆದಾರರ ಪಟ್ಟಿಯಲ್ಲಿಲ್ಲ!
ಕಾರ್ಪೋರೇಟ್ ತೆರಿಗೆದಾರರ ಟಾಪ್ 10 ಪಟ್ಟಿಯಲ್ಲಿ ಅದಾನಿ ಗ್ರೂಪ್ ಕಂಡು ಬಂದಿಲ್ಲ. ಈ ನಡುವೆ ಅದಾನಿ ಗ್ರೂಪ್ ತೆರಿಗೆ ಪಾವತಿ ಮಾಡುವಲ್ಲಿ ಹಿಂದೆ ಬಿದ್ದಿದೆಯೇ ಎಂಬ ಸುದ್ದಿಗಳು ಕೂಡಾ ಆಗುತ್ತಿದೆ. ದೇಶದಲ್ಲಿ ಅತೀ ಹೆಚ್ಚು ತೆರಿಗೆಯನ್ನು ಪಾವತಿ ಮಾಡಿದ ಕಾರ್ಪೋರೇಟ್ ಕಂಪನಿಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್‌ಟನ್ಸಿ ಸರ್ವೀಸ್ (ಟಿಸಿಎಸ್) ಕಂಡು ಬಂದಿದೆ. ಕಾರ್ಪೋರೇಟ್ ತೆರಿಗೆ ಪಾವತಿ ಮಾಡುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟಿಸಿಎಸ್ 1.4 ಬಿಲಿಯನ್ ಡಾಲರ್ ತೆರಿಗೆಯನ್ನು ಪಾವತಿ ಮಾಡಿದೆ.

ತೆರಿಗೆ ಪಾವತಿ ವಿಚಾರದಲ್ಲಿ ಟಿಸಿಎಸ್ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅನ್ನು ಹಿಂದಕ್ಕೆ ತಳ್ಳಿದೆ. ಅದಾನಿ ಗ್ರೂಪ್‌ನ ಗೌತಮ್ ಅದಾನಿ ಕೆಲವು ವರ್ಷಗಳ ಹಿಂದೆ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಾನಿ ಷೇರುಗಳು ನಿರಂತರವಾಗಿ ಲಾಭವನ್ನು ಪಡೆಯುತ್ತಾ ಬಂದಿದೆ. ಆದರೆ ನ್ಯೂಯಾರ್ಕ್ ಮೂಲದ ಥಿಂಕ್ ಟ್ಯಾಂಕ್ ಹಿಂಡನ್‌ಬರ್ಗ್ ಸಂಶೋಧನಾ ವರದಿಯನ್ನು ಪ್ರಕಟ ಮಾಡಿದ ಬಳಿಕ ಅದಾನಿ ಗ್ರೂಪ್ ಸಂಪೂರ್ಣವಾಗಿ ಕುಸಿದಿದೆ. ಜನವರಿ 24ರಂದು ಅದಾನಿ ಗ್ರೂಪ್ ವಿರುದ್ಧ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಆರೋಪವನ್ನು ಹಿಂಡನ್‌ಬರ್ಗ್ ಮಾಡಿದೆ.
ಹಲವಾರು ಕ್ಷೇತ್ರಗಳಲ್ಲಿ ವಿಸ್ತಾರವಾಗಿರುವ ಅದಾನಿ ಗ್ರೂಪ್
ಅದಾನಿ ಗ್ರೂಪ್ ಗ್ರೀನ್ ಎನರ್ಜಿಯಿಂದ ಹಿಡಿದು ಶಿಪ್ಪಿಂಗ್, ಪವರ್ ಇತರೆ ಹಲವಾರು ವಲಯಗಳಲ್ಲಿ ತನ್ನ ಕಬಂಧ ಬಾಹುವನ್ನು ಚಾಚಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೊಸದಾಗಿ ಹೂಡಿಕೆ ಮಾಡಲು ಕೂಡಾ ಮುಂದಾಗಿತ್ತು. ಆದರೆ ನಷ್ಟದಲ್ಲಿರುವ ಸಂಸ್ಥೆ ಎಲ್ಲ ಯೋಜನೆಗಳನ್ನು ಕೈಬಿಡುತ್ತಿದೆ. 2022ರಲ್ಲಿ ಅತೀ ಹೆಚ್ಚು ಲಾಭವನ್ನು ಕಂಡ ಸಂಸ್ಥೆ ಅದಾನಿ ಗ್ರೂಪ್ ಆಗಿದೆ. ಆದರೆ ಈ ವರ್ಷ ಅತೀ ಹೆಚ್ಚು ನಷ್ಟ ಕಂಡ ಸಂಸ್ಥೆಗಳ ಪಟ್ಟಿಯಲ್ಲಿಯೂ ಅದಾನಿ ಗ್ರೂಪ್ ಕಾಣಿಸಿಕೊಂಡಿದೆ.
ಟಾಪ್ 10 ಕಾರ್ಪೋರೇಟ್ ತೆರಿಗೆ ಪಾವತಿಸಿದ ಸಂಸ್ಥೆಗಳು
1. ಟಿಸಿಎಸ್: 1404 ಮಿಲಿಯನ್ ಡಾಲರ್
2. ರಿಲಯನ್ಸ್ ಇಂಡಸ್ಟ್ರೀಸ್: 937.7 ಮಿಲಿಯನ್ ಡಾಲರ್
3. ಇನ್ಫೋಸಿಸ್: 883.3 ಮಿಲಿಯನ್ ಡಾಲರ್
4. ಐಸಿಐಸಿಐ ಬ್ಯಾಂಕ್: 844.9 ಮಿಲಿಯನ್ ಡಾಲರ್
5. ಐಟಿಸಿ: 580.9 ಮಿಲಿಯನ್ ಡಾಲರ್
6. ಎಚ್‌ಸಿಎಲ್: 417.3 ಮಿಲಿಯನ್ ಡಾಲರ್
7. ಎಚ್‌ಯುಎಲ್: 355.6 ಮಿಲಿಯನ್ ಡಾಲರ್
8. ಬಜಾಜ್ ಫೈನಾನ್ಸ್: 272.2 ಮಿಲಿಯನ್ ಡಾಲರ್
9. ಲಾರ್ಸೆನ್ & ಟೌಬ್ರೊ: 261.9 ಮಿಲಿಯನ್ ಡಾಲರ್
10. ಅಲ್ಟ್ರಾಟೆಕ್ ಸಿಮೆಂಟ್: 149.3 ಮಿಲಿಯನ್ ಡಾಲರ್
ಹಿಂಡನ್‌ಬರ್ಗ್ ವರದಿ
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ ಎಂದು ಹೇಳಿದೆ. ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.


Click it and Unblock the Notifications