ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಆರೋಪ ಮಾಡಿ ಜನವರಿಯಲ್ಲಿ ಹಿಂಡನ್‌ಬರ್ಗ್ ವರದಿ ಮಾಡಿದೆ. ಇದಾದ ಬಳಿಕ ಷೇರುಪೇಟೆಯಲ್ಲಿ ಅದಾನಿ ಸ್ಟಾಕ್‌ಗಳು ಭಾರೀ ಕುಸಿತವನ್ನು ಕಂಡಿದೆ. ಈ ನಡುವೆ ಅದಾನಿ ಸಂಸ್ಥೆಯ ವಿರುದ್ಧ ತನಿಖೆಯ ಆಗ್ರಹವೂ ಕೇಳಿಬಂದಿದೆ. ತಜ್ಞರ ಸಮಿತಿಯನ್ನು ಕೂಡಾ ನೇಮಿಸಲಾಗಿದೆ.
ಅದಾನಿ ಗ್ರೂಪ್‌ನ ಸುತ್ತಲಿನ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ. ಸ್ಟಾಕ್ ಬೆಲೆ ಮ್ಯಾನಿಪ್ಯುಲೇಟ್ ಮಾಡಿದ ಬಳಿಕ ನಿಯಂತ್ರಕರಿಗೆ ಯಾವುದೇ ಸಾಕ್ಷಿ ಲಭ್ಯವಾಗದಿದ್ದರೆ, ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ನಡೆದಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

"ಈ ಹಂತದಲ್ಲಿ, ಪ್ರಾಯೋಗಿಕ ದತ್ತಾಂಶದಿಂದ ಬೆಂಬಲಿತವಾದ ಸೆಬಿ ಒದಗಿಸಿದ ವಿವರಣೆಗಳನ್ನು ಗಣನೆಗೆ ತೆಗೆದುಕೊಂಡು, ಪ್ರಾಥಮಿಕವಾಗಿ, ಸ್ಟಾಕ್ ಬೆಲೆ ಮ್ಯಾನಿಪ್ಯುಲೇಷನ್ ಸುತ್ತ ನಿಯಂತ್ರಣ ವೈಫಲ್ಯವಿದೆ ಎಂದು ಸಮಿತಿಯು ತೀರ್ಮಾನಿಸಲು ಸಾಧ್ಯವಾಗುವುದಿಲ್ಲ," ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸಮಿತಿಯು ಹೇಳಿದೆ. ಈ ಎಲ್ಲ ಬೆಳವಣಿಗೆ ಬಳಿಕ ಸ್ಟಾಕ್ ಮಾರುಕಟ್ಟೆ ಹೇಗಿದೆ ತಿಳಿಯಿರಿ...
ಅದಾನಿ ಸ್ಟಾಕ್‌ಗಳು ಹೇಗಿದೆ ನೋಡಿ
1. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್: ಸುಪ್ರೀಂ ಕೋರ್ಟ್ ಪ್ಯಾನೆಲ್‌ನ ಹೇಳಿಕೆಯ ಬಳಿಕ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್‌ಗಳು ಏರಿಕೆಯಾಗಿದೆ. ಸ್ಟಾಕ್ ಸುಮಾರು ಶೇಕಡ 3.54ರಷ್ಟು ಏರಿಕೆಯಾಗಿ, 1954.90 ಕ್ಕೆ ವಹಿವಾಟು ಅಂತ್ಯ ಮಾಡಿದೆ. ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು 2,22,858.82 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
2. ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಇಕಾನಮಿಕ್ ಜೋನ್ ಲಿಮಿಟೆಡ್: ಅದಾನಿ ಪೋರ್ಟ್ಸ್ ಷೇರು ಸುಮಾರು ಶೇಕಡ 3.93ರಷ್ಟು ಏರಿಕೆಯಾಗಿದೆ. ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಸ್ಟಾಕ್ ಲಾಭದೊಂದಿಗೆ 690.00 ರೂಪಾಯಿಗೆ ವಹಿವಾಟು ಅಂತ್ಯ ಮಾಡಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು 1,49,049.59 ಕೋಟಿ ರೂಪಾಯಿ ಆಗಿದೆ.
3. ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್: ಶುಕ್ರವಾರ ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಷೇರುಗಳು ಶೇಕಡ 5ರಷ್ಟು ಏರಿಕೆಯನ್ನು ದಾಖಲು ಮಾಡಿದೆ. ಅದಾನಿ ಟ್ರಾನ್ಸ್‌ಮಿಷನ್‌ನ ಷೇರು ಮೌಲ್ಯ 788.90 ರೂಪಾಯಿ ಆಗಿದೆ. ಹಾಗೆಯೇ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 88,001.22 ಕೋಟಿ ರೂಪಾಯಿ ಆಗಿದೆ.
4. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್: ಶುಕ್ರವಾರ ಅದಾನಿ ಸ್ಟಾಕ್‌ನ ಅದಾನಿ ಗ್ರೀನ್ ಸ್ಟಾಕ್ ಏರಿಕೆಯಾಗಿದೆ. ಅದಾನಿ ಗ್ರೀನ್ ಸ್ಟಾಕ್ ಶೇಕಡ 5ರಷ್ಟು ಏರಿಕೆಯಾಗಿ, 904.55 ರೂಪಾಯಿಗೆ ತಲುಪಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು 1,43,283.66 ಕೋಟಿ ರೂಪಾಯಿ ಆಗಿದೆ.
5. ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್: ಅದಾನಿ ಟೋಟಲ್ ಗ್ಯಾಸ್‌ನ ಷೇರು ಶೇಕಡ 3.05ರಷ್ಟು ಏರಿಕೆಯಾಗಿ, 687.00 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಏರಿಕೆ, ಇಳಿಕೆ ಎರಡನ್ನೂ ಕಂಡಿದೆ. ಇನ್ನು ಸಂಸ್ಥೆಯ ಮಾರುಕಟ್ಟೆ ಮೌಲ್ಯವು 75,556.95 ಕೋಟಿ ರೂಪಾಯಿ ಆಗಿದೆ.
6. ಅದಾನಿ ವಿಲ್ಮಾರ್ ಲಿಮಿಟೆಡ್: ಶುಕ್ರವಾರ ವಹಿವಾಟಿನ ಮಧ್ಯೆ ಅದಾನಿ ವಿಲ್ಮಾರ್ ಲಿಮಿಟೆಡ್ ಶೇಕಡ 6.87ರಷ್ಟು ಏರಿಕೆಯಾಗಿದೆ. ಮೌಲ್ಯವು 6.90 ಪಟ್ಟು ಜಿಗಿದಿದೆ. ಅದಾನಿ ವಿಲ್ಮಾರ್ ಲಿಮಿಟೆಡ್ ಮಾರುಕಟ್ಟೆ ಮೌಲ್ಯವು 52,507.02 ಕೋಟಿ ರೂಪಾಯಿ ಆಗಿದೆ.
7. ಅದಾನಿ ಪವರ್ ಲಿಮಿಟೆಡ್: ಅದಾನಿ ಪವರ್ ಲಿಮಿಟೆಡ್ ಷೇರು ಮೌಲ್ಯವು ಶೇಕಡ 5ರಷ್ಟು ಏರಿಕೆಯಾಗಿ, 236.35 ರೂಪಾಯಿಗೆ ತಲುಪಿದೆ. ಬಿಎಸ್‌ಇಯಲ್ಲಿ ಮಧ್ಯಂತರ ವಹಿವಾಟಿನಲ್ಲಿ ಸ್ಟಾಕ್ ಅದಕ್ಕೂ ಅಧಿಕ ಹೆಚ್ಚಳವಾಗಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು 91,158.75 ಕೋಟಿ ರೂಪಾಯಿ ಆಗಿದೆ.


Click it and Unblock the Notifications