ದೇಶದ ಅತೀ ದೊಡ್ಡ ಉದ್ಯಮಿ ಗೌತಮ್ ಅದಾನಿಯ ಅದಾನಿ ಗ್ರೂಪ್ಸ್ ಮಂಗಳವಾರ ನ್ಯೂಡೆಲ್ಲಿ ಟೆಲಿವಿಷನ್‌ಗೆ (ಎನ್‌ಡಿಟಿವಿ) ಓಪನ್ ಆಫರ್ ನೀಡಿದೆ. ಟಿವಿ ಪ್ರಸಾರ ಮತ್ತು ಸಾಫ್ಟ್‌ವೇರ್ ಉತ್ಪಾದನಾ ಕಂಪನಿಯ ಷೇರನ್ನು ಖರೀದಿ ಮಾಡುವ ಆಫರ್ ಅನ್ನು ಅದಾನಿ ಸಂಸ್ಥೆ ನೀಡಿದೆ. ಈ ಬೆನ್ನಲ್ಲೇ ಬುಧವಾರ ಷೇರು ಮಾರುಕಟ್ಟೆಯಲ್ಲಿ ಎನ್‌ಡಿಟಿವಿ ಷೇರು 14 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.
ನವದೆಹಲಿ ಟೆಲಿವಿಷನ್ (ಎನ್‌ಡಿಟಿವಿ) ಷೇರುಗಳು 5 ಶೇಕಡ ಐದರಷ್ಟು ಏರಿಕೆಯಾಗಿ, ಬುಧವಾರ ಬಿಎಸ್‌ಇಯಲ್ಲಿ 14 ವರ್ಷಗಳ ಗರಿಷ್ಠ ಮಟ್ಟವಾದ 384.50 ರೂ.ಗೆ ತಲುಪಿದೆ. ಬೆಳಿಗ್ಗೆ 09:16 ರವರೆಗೆ 1.16 ಮಿಲಿಯನ್ ಈಕ್ವಿಟಿ ಷೇರುಗಳ ವಹಿವಾಟು ನಡೆದಿದೆ. ಇನ್ನು ಎನ್‌ಎಸ್‌ಇ ಹಾಗೂ ಬಿಎಸ್‌ಇಯಲ್ಲಿ 98,170 ಷೇರುಗಳಿಗೆ ಖರೀದಿ ಆದೇಶಗಳು ಬಾಕಿ ಉಳಿದಿವೆ. ಇನ್ನು ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 0.12 ರಷ್ಟು ಏರಿಕೆಯಾಗಿ 59,099 ಅಂಕಗಳಿಗೆ ತಲುಪಿದೆ.
ಎನ್‌ಡಿಟಿವಿ ಸ್ಟಾಕ್ ಆಗಸ್ಟ್ 2008ರ ಬಳಿಕ ಮೊದಲ ಬಾರಿಗೆ ಅತ್ಯುನ್ನತ ಮಟ್ಟದಲ್ಲಿ ವಹಿವಾಟು ನಡೆಸಿದೆ. ಕಳೆದ ಮೂರು ತಿಂಗಳುಗಳಲ್ಲಿ, ಎನ್‌ಡಿಟಿವಿ ಸ್ಟಾಕ್ ಬೆಲೆಯು ಸುಮಾರು ಶೇಕಡ 140ರಷ್ಟು ಹೆಚ್ಚಳವಾಗಿದೆ. ಇನ್ನು ಬಿಎಸ್ಇ ಸೆನ್ಸೆಕ್ಸ್‌ನಲ್ಲಿ ಎಸ್&ಪಿ ಷೇರು ಶೇಕಡ 8ರಷ್ಟು ಹೆಚ್ಚಳವಾಗಿದೆ.

ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ (ಎಎಂಎನ್‌ಎಲ್) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ವಿಶ್ವಪ್ರಧನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ RRPRH) ನ ವಾರಂಟ್‌ಗಳನ್ನು ಹೊಂದಿದೆ.
ಎಷ್ಟು ಪಾಲು ಖರೀದಿಸುವ ಆಫರ್?
ಅದಾನಿ ಎಂಟರ್‌ಪ್ರೈಸಸ್ ಮಂಗಳವಾರ ತನ್ನ ಮಾಧ್ಯಮ ಘಟಕವು ನವದೆಹಲಿ ಟೆಲಿವಿಷನ್ ಲಿಮಿಟೆಡ್‌ನಲ್ಲಿ ಪರೋಕ್ಷವಾಗಿ ಶೇಕಡಾ 29.18 ಪಾಲನ್ನು ಖರೀದಿಸಲಿದೆ ಮತ್ತು ಮೀಡಿಯಾ ಹೌಸ್‌ನಲ್ಲಿ ಶೇ 26ರಷ್ಟು ಪಾಲನ್ನು ಖರೀದಿಸಲು ಓಪನ್ ಆಫರ್ ನೀಡಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅದಾನಿ ಸ್ವಾಮ್ಯದ AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ (AMNL) ಓಪನ್ ಆಫರ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮಾಧ್ಯಮ ಕಂಪನಿಯಲ್ಲಿ ಪರೋಕ್ಷವಾಗಿ ಶೇಕಡಾ 29.18 ಪಾಲನ್ನು ಪಡೆದುಕೊಳ್ಳುತ್ತದೆ.
NDTV ಯ ಪ್ರವರ್ತಕ ಸಮೂಹ ಕಂಪನಿಯಾಗಿರುವ RRPR, NDTV ನಲ್ಲಿ 29.18% ಪಾಲನ್ನು ಹೊಂದಿದೆ. VCPL, AMNL & AEL (ಕನ್ಸರ್ಟ್‌ನಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು) ಜೊತೆಗೆ SEBI ಯ (ಷೇರುಗಳು ಮತ್ತು ಸ್ವಾಧೀನಗಳ ಗಣನೀಯ ಸ್ವಾಧೀನ) ನಿಯಮಗಳು, 2011 ರ ಅಗತ್ಯತೆಗಳಿಗೆ ಅನುಗುಣವಾಗಿ NDTV ಯಲ್ಲಿ 26% ವರೆಗೆ ಪಾಲನ್ನು ಪಡೆಯಲು ಓಪನ್ ಆಫರ್ ನೀಡಿದೆ.


Click it and Unblock the Notifications