ಬೆಂಗಳೂರು, ಮೇ 29: ಭಾರತದ ಹಿರಿಯ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಇದೀಗ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಪ್ರವೇಶಿಸಲು ತಯಾರಾಗಿದೆ ಎಂದು ವರದಿಯಾಗಿದೆ.
ಫೈನಾನ್ಷಿಯಲ್ ಟೈಮ್ಸ್ (ಎಫ್‌ಟಿ) ಪ್ರಕಾರ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತದಲ್ಲಿ ಈಗಾಗಲೇ ಈ ಕ್ಷೇತ್ರದಲ್ಲಿ ನೆಲೆಯೂರಿರುವ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗೆ ಪ್ರತಿಸ್ಪರ್ಧಿಯಾಗಿ ಡಿಜಿಟಲ್ ಕಂಪನಿಯನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಅದಾನಿ ಗ್ರೂಪ್ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರವನ್ನು ಪ್ರವೇಶಿಸುವ ಪ್ರಯತ್ನದಲ್ಲಿದೆ.

ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಸಾರ್ವಜನಿಕ ಡಿಜಿಟಲ್ ಪಾವತಿ ಜಾಲವಾಗಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ನಲ್ಲಿ ಕಾರ್ಯನಿರ್ವಹಿಸಲು ಪರವಾನಗಿ ಪಡೆಯಲು ಕಂಪನಿಯು ಗಂಭೀರವಾಗಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಯುಪಿಐ, ಕ್ರೆಡಿಟ್ ಕಾರ್ಡ್ ಮತ್ತು ONDC ಮೂಲಕ ಆನ್‌ಲೈನ್ ಶಾಪಿಂಗ್ ಕ್ಷೇತ್ರವನ್ನು ಪ್ರವೇಶಿಸಲು ಅದಾನಿ ಗ್ರೂಪ್ ಯೋಜಿಸಿದೆ. ಈ ಸೇವೆಯನ್ನು "ಅದಾನಿ ಒನ್" ಅಪ್ಲಿಕೇಶನ್ ಮೂಲಕ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇದರೊಂದಿಗೆ, ಅನೇಕ ಬ್ಯಾಂಕುಗಳು ಬ್ರಾಂಡ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಹ-ಬ್ರಾಂಡೆಡ್ ಅದಾನಿ ಕ್ರೆಡಿಟ್ ಕಾರ್ಡ್ ಯೋಜನೆಗಳನ್ನು ಅಂತಿಮಗೊಳಿಸಲು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದಲ್ಲದೇ ಕಂಪನಿಯ ಕಣ್ಣು (ONDC) ಡಿಜಿಟಲ್ ಕಮರ್ಷಿಯಲ್ ಗಾಗಿ ಓಪನ್ ನೆಟ್‌ವರ್ಕ್ ಮೂಲಕ ಆನ್‌ಲೈನ್ ಶಾಪಿಂಗ್ ಒದಗಿಸಲು ಇದು ಮಾತುಕತೆ ನಡೆಸುತ್ತಿದೆ. ONDC ಸರ್ಕಾರದ ಬೆಂಬಲಿತ ಇ-ಕಾಮರ್ಸ್ ವೇದಿಕೆಯಾಗಿದೆ. ಇದು ಮಾರಾಟಗಾರ ಮತ್ತು ಖರೀದಿದಾರರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ONDC ಭಾರತ ಸರ್ಕಾರದಿಂದ ಬೆಂಬಲಿತವಾಗಿದ್ದು ಇದು ವೇಗವಾಗಿ ಬೆಳೆಯುತ್ತಿದೆ
ಇನ್ನು ಅದಾನಿ ಗ್ರೂಪ್ ಯುಪಿಐ ಸೇವೆಗಳನ್ನು ಶೀಘ್ರ ಆರಂಭಿಸುವ ಇರಾದೆ ಹೊಂದಿದ್ದು, ಹೀಗಾಗಿ ಯುಪಿಐ ಸೇವೆಗಳನ್ನು ಪ್ರಸ್ತುತ ನೀಡುತ್ತಿರುವ ಸಂಸ್ಥೆಗಳಾದ ರಿಲಯನ್ಸ್ ಮತ್ತು ಗೂಗಲ್ ಇದಕ್ಕೆ ನೇರ ಪ್ರತಿಸ್ಪರ್ಧಿಯಾಗಿರಬಹುದು.
ಈಗಾಗಲೇ ಅದಾನಿ ಒನ್ ಅಪ್ಲಿಕೇಶನ್‌ನಿಂದ ಅನೇಕ ಸೇವೆಗಳನ್ನು ನೀಡುತ್ತಿದ್ದು, ಮುಂದೆ ಅದಾನಿ ಒನ್ ಮೂಲಕ ಯುಪಿಐ ಮತ್ತು ಇ-ಕಾಮರ್ಸ್ ಸೇವೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಅದಾನಿ ಒನ್ ಅಪ್ಲಿಕೇಶನ್ ಅನ್ನು 2022 ರಲ್ಲಿ ಪ್ರಾರಂಭಿಸಲಾಗಿದ್ದು ಇದು ಪ್ರಸ್ತುತ ಹೋಟೆಲ್ ಮತ್ತು ಫ್ಲೈಟ್ ಬುಕಿಂಗ್‌ನಂತಹ ಸೇವೆಗಳನ್ನು ಒದಗಿಸುತ್ತದೆ.
ಅದಾನಿ ಗ್ರೂಪ್ ಆರಂಭದಲ್ಲಿಇ-ಕಾಮರ್ಸ್ ಮತ್ತು ಪಾವತಿಗಳ ಕೊಡುಗೆಗಳು ಮೊದಲು ಅದರ ಪ್ರಸ್ತುತ ಗ್ರಾಹಕರಿಗೆ ಮಾತ್ರ ನೀಡಬಹುದು. ಇದರ ನಂತರ, ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣ, ಅನಿಲ ಮತ್ತು ವಿದ್ಯುತ್ ಸೇವೆಗಳಿಗೆ ಸಂಪರ್ಕ ಹೊಂದಿದ ಗ್ರಾಹಕರನ್ನು ತನ್ನ ವ್ಯಾಪ್ತಿಗೆ ತರಲು ಪ್ರಯತ್ನಿಸಬಹುದು. ಮಾತ್ರವಲ್ಲದೇ ವಿವಿಧ ಪಾವತಿಗಳಲ್ಲಿ ಅವರಿಗೆ ಲಾಯಲ್ಟಿ ಪಾಯಿಂಟ್‌ಗಳನ್ನು ನೀಡಬಹುದು. ಆನ್‌ಲೈನ್ ಶಾಪಿಂಗ್ ಮತ್ತು ಡ್ಯೂಟಿ ಫ್ರೀ ಖರೀದಿಗಳ ಸಮಯದಲ್ಲಿ ಇವುಗಳನ್ನು ಬಳಕೆ ಮಾಡುವ ಆಫರ್ ಗಳನ್ನು ನೀಡುವ ಸಾಧ್ಯತೆ ಇದೆ.
FT ಯ ಸುದ್ದಿ ವರದಿಯ ಪ್ರಕಾರ, ಅದಾನಿ ಗ್ರೂಪ್ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳ ಹೀಗೆ ಬಹುದೊಡ್ಡ ಜಾಲ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಹೀಗಾಗಿ ಇದರ ಅಸ್ತಿತ್ವದಲ್ಲಿರುವ ಗ್ರಾಹಕರೇ ನೂರಾರು ಮಿಲಿಯನ್ ಗಳಷ್ಟಿದ್ದಾರೆ.


Click it and Unblock the Notifications