For Quick Alerts
ALLOW NOTIFICATIONS  
For Daily Alerts

ಅದಾನಿ ಗ್ರೂಪ್ ಷೇರುಗಳಲ್ಲಿ ನಿಲ್ಲದ ಕುಸಿತ: ಹೂಡಿಕೆದಾರರಿಗೆ ಭಾರೀ ನಷ್ಟ

|

ಅದಾನಿ ಗ್ರೂಪ್‌ನ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ವಿದೇಶಿ ನಿಧಿಗಳ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಸ್ಥಗಿತಗೊಳಿಸಿದೆ ಎಂಬ ವರದಿಯನ್ನು ಅದಾನಿ ಗ್ರೂಪ್ ನಿರಾಕರಿಸಿದ್ದರೂ, ಅದಾನಿ ಗ್ರೂಪ್‌ ಬಹುತೇಕ ಷೇರುಗಳು ಮಂಗಳವಾರವೂ ಕುಸಿತ ಮುಂದುವರಿಸಿವೆ.

ಒಂದೇ ಒಂದು ಟ್ವೀಟ್‌: ಅದಾನಿ ಗ್ರೂಪ್ ಷೇರುಗಳು ಶೇಕ್..! ಅಂತದ್ದೇನಾಯ್ತು?ಒಂದೇ ಒಂದು ಟ್ವೀಟ್‌: ಅದಾನಿ ಗ್ರೂಪ್ ಷೇರುಗಳು ಶೇಕ್..! ಅಂತದ್ದೇನಾಯ್ತು?

ಅದಾನಿ ಗ್ರೂಪ್‌ನಲ್ಲಿ ಮೂರು ವಿದೇಶಿ ನಿಧಿಗಳು 43,500 ಕೋಟಿ ರೂ. ಹೂಡಿಕೆ ಮಾಡಿದ್ದು, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಲಾಭದಾಯಕ ಮಾಲೀಕತ್ವದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣ ಅವುಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹರಿದಾಡಿತ್ತು. ಪರಿಣಾಮ ನಂತರದಲ್ಲಿ ಅದಾನಿ ಗ್ರೂಪ್ ಷೇರುಗಳು ಭಾರೀ ಕುಸಿತ ಕಂಡಿದ್ದವು.

ಅದಾನಿ ಟ್ರಾನ್ಸ್‌ಮಿಶನ್ ಷೇರುಗಳು ಎನ್‌ಎಸ್‌ಇನಲ್ಲಿ ಶೇಕಡಾ 5ರಷ್ಟು ಕುಸಿದು 1,441.50 ರೂಪಾಯಿ , ಅದಾನಿ ಪವರ್ ಶೇಕಡಾ 4.97ರಷ್ಟು ಕುಸಿದು 133.90 ರೂಪಾಯಿ ಹಾಗೂ ಅದಾನಿ ಟೋಟಲ್ ಗ್ಯಾಸ್‌ ಶೇಕಡಾ 5ರಷ್ಟು ಇಳಿಕೆಗೊಂಡು 1,467.35 ರೂಪಾಯಿ ಮುಟ್ಟಿದೆ.

ಅದಾನಿ ಗ್ರೂಪ್ ಷೇರುಗಳಲ್ಲಿ ನಿಲ್ಲದ ಕುಸಿತ: ಹೂಡಿಕೆದಾರರಿಗೆ ನಷ್ಟ

''ಈ ವರದಿಗಳು ಸ್ಪಷ್ಟವಾಗಿ ತಪ್ಪಾಗಿದೆ ಮತ್ತು ಹೂಡಿಕೆ ಸಮುದಾಯವನ್ನು ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ನಾವು ವಿಷಾದಿಸುತ್ತೇವೆ. ಇದು ಹೂಡಿಕೆದಾರರಿಗೆ ಆರ್ಥಿಕ ಮೌಲ್ಯವನ್ನು ಸರಿಪಡಿಸಲಾಗದ ನಷ್ಟಕ್ಕೆ ಕಾರಣವಾಗುತ್ತಿದೆ ಮತ್ತು ಗ್ರೂಪ್‌ನ ಅಪಖ್ಯಾತಿಗೆ ಕಾರಣವಾಗಿದೆ "ಎಂದು ಅದಾನಿ ಗ್ರೂಪ್ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.

ಅದಾನಿ ಗ್ರೂಪ್‌ನ ಬಹುತೇಕ ಷೇರುಗಳು ಕುಸಿದಿದ್ದರೆ, ಅದಾನಿ ಗ್ರೀನ್ ಷೇರು ಶೇಕಡಾ 1 ರಷ್ಟು ಏರಿಕೆ ಕಂಡು 1,189.90 ರೂ. ತಲುಪಿದೆ.

ಸೋಮವಾರ, ದಿ ಎಕನಾಮಿಕ್ ಟೈಮ್ಸ್ ಮೂರು ವಿದೇಶಿ ನಿಧಿಗಳಾದ ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಖಾತೆಗಳನ್ನು ಎನ್‌ಎಸ್‌ಡಿಎಲ್‌ ಸ್ಥಗಿತಗೊಳಿಸಿದೆ ಎಂದು ವರದಿ ಮಾಡಿದೆ. ಈ ವಿದೇಶಿ ನಿಧಿಗಳು ಅದಾನಿ ಕಂಪನಿಗಳಲ್ಲಿ 43,500 ಕೋಟಿ ರೂ. ಮೌಲ್ಯದ ಷೇರು ಖರೀದಿಸಿವೆ.

English summary

Adani Group Stocks Down, 3 Hit Lower Circuit Limits

Most Adani Group stocks extended losses on Tuesday, with three counters hitting their lower circuit limits.
Story first published: Tuesday, June 15, 2021, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X