ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಅದಾನಿ ಗ್ರೂಪ್ ಹೊಸ ಘೋಷಣೆ ಮಾಡಿದೆ. ಈ ಘೋಷಣೆ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ್ದರಿಂದ ಸಂತಸ ಮನೆ ಮಾಡಿದೆ. ಈ ಮೂಲಕ ಅದಾನಿ ಗ್ರೂಪ್ ಸ್ವಾವಲಂಬಿ ಭಾರತದ ಕನಸನ್ನು ಚಿಗುರಿಸಿದೆ.
ಅದಾನಿ ಗ್ರೂಪ್ ದೇಶದಲ್ಲಿ ಹಲವು ಪ್ರತಿಷ್ಠಿತ ಯೋಜನೆಗಳನ್ನು ಮಾಡಿ ಸೈ ಎನಿಸಿಕೊಂಡಿದೆ. ಈಗ ಮತ್ತೊಂದು ಮಹತ್ವ ಪ್ರಾಜಕ್ಟ್‌ಗೆ ಕೈ ಹಾಕಿದೆ. ಈ ಮೂಲಕ ವಿಶ್ವದ ಗಮನವನ್ನು ತನ್ನತ್ತ ಸೆಳೆಯಲು ತಯಾರಿ ನಡೆಸಿದೆ. ಇದರಿಂದ ಭಾರತಕ್ಕೆ ಮತ್ತೊಂದು ಹೆಮ್ಮೆಯನ್ನು ಕಂಪನಿ ತಂದಿದೆ.

ಅದಾನಿ ಗ್ರೂಪ್ ಎಲ್ಲಿ ಹೂಡಿಕೆ?
ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ರಕ್ಷಣಾ ವಲಯದಲ್ಲಿ ದೊಡ್ಡ ಹೂಡಿಕೆ ಮಾಡಲಿದೆ. ಅದಾನಿ ಗ್ರೂಪ್ 3000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಎರಡು ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಸ್ಥಾಪಿಸಲಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಕಾರ್ಖಾನೆಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.
ಈ ಕಾರ್ಖಾನೆಯಿಂದ ಏನು ಉಪಯೋಗ?
ಈ ಕಾರ್ಖಾನೆಯ ಮೂಲಕ ಮದ್ದುಗುಂಡುಗಳನ್ನು ತಯಾರಿಸಲಾಗುವುದು. ಈ ಕಾರ್ಖಾನೆಗಳಲ್ಲಿ ವಾರ್ಷಿಕವಾಗಿ ಸುಮಾರು 15 ಕೋಟಿ ಮದ್ದುಗುಂಡುಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಇದು ಭಾರತೀಯ ಸೇನೆಯ ಒಟ್ಟು ಅವಶ್ಯಕತೆಯ ನಾಲ್ಕನೇ ಒಂದು ಭಾಗವಾಗಿದೆ. ಇದು ದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ಈ ಕಾರ್ಖಾನೆ ಸ್ಥಾಪನೆಯಿಂದ ಎಷ್ಟು ಉದ್ಯೋಗ ಸೃಷ್ಟಿ?
ಈ ಕಾರ್ಖಾನೆ ಸ್ಥಾಪನೆಯಿಂದ 4,000 ಉದ್ಯೋಗಗಳಿಗೆ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಲಾಗಿದೆ. ಇದರೊಂದಿಗೆ, ಪರೋಕ್ಷವಾಗಿ ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಸ್ಥಳೀಯ ಕಂಪನಿಗಳಲ್ಲಿ 20,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಕಾರ್ಖಾನೆ ಯಾವಾಗ ನಿರ್ಮಾಣ? ಇದರ ವಿಶೇಷಗಳು ಏನು?
ಕೇವಲ 15 ತಿಂಗಳಲ್ಲಿ 5 ಸಾವಿರ ಎಕರೆಯಲ್ಲಿ ನಿರ್ಮಾಣವಾಗಲಿದೆ. ಅದಾನಿ ಸಮೂಹದ ಈ ಉತ್ಪಾದನಾ ಸಂಕೀರ್ಣವು ದಕ್ಷಿಣ ಏಷ್ಯಾದ ಅತಿದೊಡ್ಡ ಯುದ್ಧಸಾಮಗ್ರಿ ಉತ್ಪಾದನಾ ಸಂಕೀರ್ಣವಾಗಲಿದೆ ಎಂದು ಅದಾನಿ ಪೋರ್ಟ್ಸ್ ಮತ್ತು ಎಸ್‌ಇಜೆಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರಣ್ ಅದಾನಿ ಹೇಳಿದ್ದಾರೆ.

ಕಾರ್ಖಾನೆಯಲ್ಲಿ ಯಾವ ಶಸ್ತ್ರಾಸ್ತ್ರಗಳು ತಯಾರಾಗುತ್ತವೆ?
ರೈಫಲ್‌ಗಳು, ಲೈಟ್ ಮೆಷಿನ್ ಗನ್ (ಎಲ್‌ಎಂಜಿ), ಎಕೆ -47 ಮತ್ತು ಕಾರ್ಬೈನ್‌ಗಳಿಗೆ ಬುಲೆಟ್‌ಗಳನ್ನು ಇಲ್ಲಿ ತಯಾರಿಸಲಾಗುವುದು. ಇದರ ನಂತರ, ಮುಂದಿನ ಹಂತದಲ್ಲಿ, ಫಿರಂಗಿ ಬಂದೂಕುಗಳು, ಮದ್ದುಗುಂಡುಗಳು, ಫಿರಂಗಿಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಸೇನಾ ಸಿಬ್ಬಂದಿಗೆ ವಿವಿಧ ರೀತಿಯ ಶಸ್ತ್ರಾಸ್ತ್ರಗಳು ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸಲಾಗುವುದು.


Click it and Unblock the Notifications