ಅದಾನಿ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿದ ಬಳಿಕ ಸಂಸ್ಥೆಯ ಸ್ಟಾಕ್ ಮಾರುಕಟ್ಟೆಯಲ್ಲಿ ನಷ್ಟವನ್ನು ಕಾಣುತ್ತಾ ಬಂದಿದೆ. ಈ ನಷ್ಟವನ್ನು ಕಡಿಮೆ ಮಾಡಲು ಹೂಡಿಕೆದಾರರ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅದಾನಿ ಸಂಸ್ಥೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಅದರಲ್ಲಿ ಸಾಲ ಪೂರ್ವಪಾವತಿ ಆಗಿದೆ.
ಈಗ ಅದಾನಿ ಸಂಸ್ಥೆಯು ಸಾಲ ಮರುಪಾವತಿ ಮಾಡಲೆಂದರು ಅದಾನಿ ಸಂಸ್ಥೆಯ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್‌ನ ಷೇರುಗಳನ್ನು ಮರುಖರೀದಿ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಜುಲೈ 2024ರ ಒಳಗೆ ಕೆಲವೊಂದು ಸಾಲಗಳನ್ನು ಮರುಪಾವತಿ ಮಾಡಬೇಕಾಗಿದೆ. ಅದರ ಮರುಪಾವತಿಗಾಗಿ ಸಂಸ್ಥೆಯು ಈ ಕ್ರಮವನ್ನು ಕೈಗೊಂಡಿದೆ ಎಂದು ಹೇಳಿದೆ.

2024 ರಲ್ಲಿ ಬಾಕಿ ಇರುವ ಸಾಲವನ್ನು ಭಾಗಶಃ ಪೂರ್ವಪಾವತಿಸಲು 130 ಮಿಲಿಯನ್ ಡಾಲರ್‌ವರೆಗೆ ಬಾಕಿ ಇರುವ ಸಾಲಕ್ಕೆ ಟೆಂಡರ್ ಅನ್ನು ಹೊರಡಿಸಲಾಗಿದೆ. ಷೇರುಗಳನ್ನು ಮರು ಖರೀದಿ ಮಾಡಲಾಗುತ್ತದೆ ಎಂದು ಏಪ್ರಿಲ್ 24 ರಂದು ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ಅದಾನಿ ಪೋರ್ಟ್ಸ್ ಹೇಳಿದೆ.
ಗುಂಪಿನ ಒಟ್ಟಾರೆ ಸಾಲದ ಸರಿಸುಮಾರು ಶೇಕಡ 39ರಷ್ಟು ವಿದೇಶಿ ಕರೆನ್ಸಿ ಬಾಂಡ್‌ಗಳನ್ನು ಒಳಗೊಂಡಿದೆ. ವಿದೇಶಿ ಮತ್ತು ಭಾರತೀಯ ಬ್ಯಾಂಕ್‌ಗಳ ಟರ್ಮ್ ಲೋನ್‌ಗಳು ಅತೀ ದೊಡ್ಡ ಮೊತ್ತವಾಗಿದೆ. ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ (APSEZ) ತನ್ನ ಮಂಡಳಿಯು 2024 ರಲ್ಲಿ ಬಾಕಿ ಇರುವ ನೋಟುಗಳಿಗೆ ಟೆಂಡರ್ ಅನ್ನು ಅಧಿಕೃತಗೊಳಿಸಿದೆ ಎಂದು ದೃಢಪಡಿಸಿದೆ.
ಅದಾನಿ ಗ್ರೂಪ್ ವಿರುದ್ಧದ ಆರೋಪ, ಬೆಳವಣಿಗೆ
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.
ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.
ಇನ್ನು ಅದಾನಿ ಗ್ರೂಪ್ ಕಾರ್ಪೋರೇಟ್ ತೆರಿಗೆದಾರರ ಪಟ್ಟಿಯಲ್ಲಿಯೂ ಹಿಂದೆ ಉಳಿದಿದೆ. ಕಾರ್ಪೋರೇಟ್ ತೆರಿಗೆದಾರರ ಟಾಪ್ 10 ಪಟ್ಟಿಯಲ್ಲಿ ಅದಾನಿ ಗ್ರೂಪ್ ಕಂಡು ಬಂದಿಲ್ಲ. ಈ ನಡುವೆ ಅದಾನಿ ಗ್ರೂಪ್ ತೆರಿಗೆ ಪಾವತಿ ಮಾಡುವಲ್ಲಿ ಹಿಂದೆ ಬಿದ್ದಿದೆಯೇ ಎಂಬ ಸುದ್ದಿಗಳು ಕೂಡಾ ಆಗುತ್ತಿದೆ.
ದೇಶದಲ್ಲಿ ಅತೀ ಹೆಚ್ಚು ತೆರಿಗೆಯನ್ನು ಪಾವತಿ ಮಾಡಿದ ಕಾರ್ಪೋರೇಟ್ ಕಂಪನಿಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್‌ಟನ್ಸಿ ಸರ್ವೀಸ್ (ಟಿಸಿಎಸ್) ಕಂಡು ಬಂದಿದೆ. ಕಾರ್ಪೋರೇಟ್ ತೆರಿಗೆ ಪಾವತಿ ಮಾಡುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟಿಸಿಎಸ್ 1.4 ಬಿಲಿಯನ್ ಡಾಲರ್ ತೆರಿಗೆಯನ್ನು ಪಾವತಿ ಮಾಡಿದೆ.


Click it and Unblock the Notifications