ಅದಾನಿ ಪೋರ್ಟ್ಸ್ ಅತಿದೊಡ್ಡ ದೇಶೀಯ ಬಾಂಡ್ ಅನ್ನು ಪಡೆದುಕೊಂಡಿದೆ. ಎಲ್ಐಸಿಯಿಂದ (LIC) ಬರೋಬ್ಬರಿ 5000 ಕೋಟಿ ರೂ.ಗಳ ಬಾಂಡ್ ಮತ್ತು 5 ವರ್ಷಗಳ ಎನ್ಸಿಡಿ (NCD) ನೀಡಲಾಗಿದೆ. ಈ ಮೂಲಕ ಅದಾನಿ ಪೋರ್ಟ್ಸ್ ತನ್ನ ಜಾಲವನ್ನು ಇನ್ನಷ್ಟು ವಿಸ್ತರಿಸುತ್ತಿದೆ.
ಹೌದು,ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ (APSEZ) 15 ವರ್ಷಗಳ ನಾನ್-ಕನ್ವರ್ಟಿಬಲ್ ಡಿಬೆಂಚರ್ (NCD) ಮೂಲಕ ಬರೋಬ್ಬರಿ 5,000 ಕೋಟಿ ರೂ.ಗಳನ್ನು ಸಂಗ್ರಹಿಸಿರುವುದಾಗಿ ನಿನ್ನೆ(ಮೇ.30) ಘೋಷಣೆಯನ್ನು ಮಾಡಿದೆ.

ಡಿಬೆಂಚರ್‌ಗಳು ದೀರ್ಘಾವಧಿಯ ಹಣಕಾಸು ಸಾಧನಗಳಾಗಿದ್ದು,ಕಂಪನಿಗಳು ಹೂಡಿಕೆದಾರರಿಂದ ಹೆಚ್ಚಿನ ಹಣವನ್ನು ಸಂಗ್ರಹಿಸಲು ಇದನ್ನು ಬಿಡುಗಡೆ ಮಾಡಲಾಗುತ್ತದೆ.ಈ ಡಿಬೆಂಚರ್‌ಗಳನ್ನು ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾಗುವುದು ಮತ್ತು ಅದಾನಿ ಪೋರ್ಟ್ಸ್‌ನ 'ಎಎಎ/ಸ್ಥಿರ' ದೇಶೀಯ ಕ್ರೆಡಿಟ್ ರೇಟಿಂಗ್‌ನಿಂದ ಶೇಕಡಾ 7.75 ಕೂಪನ್ ದರದಲ್ಲಿ ಲಾಕ್ ಮಾಡಲಾಗಿದೆ ಎಂದು ಕಂಪನಿಯು ವಿನಿಮಯ ಕೇಂದ್ರಗಳಿಗೆ ಮಾಹಿತಿಯನ್ನು ತಿಳಿಸಿವೆ.
ಅದಾನಿ ಗ್ರೂಪ್ ಕಂಪನಿಯು NCD ಸಂಚಿಕೆಯು ಆಕರ್ಷಕ ಬೆಲೆಯಲ್ಲಿ ವೈವಿಧ್ಯಮಯ ಮೂಲಗಳಿಂದ ದೀರ್ಘಾವಧಿಯ ಬಂಡವಾಳಕ್ಕೆ APSEZನ ಪ್ರವೇಶವನ್ನು ಮತ್ತು APSEZ ನ ಸಾಲ ಮುಕ್ತಾಯದ ಪ್ರೊಫೈಲ್ ಅನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಿಕೊಂಡಿದೆ.
ಇದು ಕೇವಲ ಹಣಕಾಸು ಚಟುವಟಿಕೆಯಲ್ಲ
ಇದು APSEZ ಗಾಗಿ ಅಭಿವೃದ್ಧಿಪಡಿಸಲಾದ ಬಂಡವಾಳ ನಿರ್ವಹಣಾ ಯೋಜನೆಯ ಪೂರ್ವಭಾವಿಯಾಗಿ ಕಾರ್ಯಗತವಾಗಿದೆ. ಹತೋಟಿ ಕಾಯ್ದುಕೊಳ್ಳುವುದು, ಸಾಲ ಮುಕ್ತಾಯ ಅವಧಿಯ ಪ್ರೊಫೈಲ್ ಅನ್ನು ವಿಸ್ತರಿಸುವುದು, ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಹಣಕಾಸಿನ ಮೂಲಗಳನ್ನು ವೈವಿಧ್ಯಗೊಳಿಸುವುದರ ಮೇಲೆ ಇದು ಅವಲಂಭಿತವಾಗಿದೆ.
ವಿಶ್ವದ ಅತಿದೊಡ್ಡ ಸಮಗ್ರ ಸಾರಿಗೆ ಉಪಯುಕ್ತತೆಯಾಗಲು APSEZ ತನ್ನ ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಬೆಂಬಲಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು APSEZ ನ ಪೂರ್ಣಾವಧಿ ನಿರ್ದೇಶಕಿ ಮತ್ತು CEO ಅಶ್ವನಿ ಗುಪ್ತಾ ಅವರು ಮಾಹಿತಿಯನ್ನು ತಿಳಿಸಿದ್ದಾರೆ.
APSEZ 2030 ರ ವೇಳೆಗೆ 1 ಬಿಲಿಯನ್ ಟನ್ ಸರಕುಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ, ಇದು 2024-25 ರ ಸಂಖ್ಯೆಯನ್ನು 2 ಪಟ್ಟು ಹಚ್ಚು ಇದೆ
ಈ ವಿಸ್ತಾರವಾದ ಬದರು ಜಾಲವು ಕರಾವಳಿ ಪ್ರದೇಶಗಳು ಮತ್ತು ಒಳನಾಡಿನಿಂದ ಬರುವ ಅತಿ ಹೆಚ್ಚು ಪ್ರಮಾಣದ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಿಂದ ಆಚೆಗೂ ಕಂಪನಿಯು ಶ್ರೀಲಂಕಾದ ಕೊಲಂಬೊದಲ್ಲಿ ಟ್ರಾನ್ಸ್‌ಶಿಪ್‌ಮೆಂಟ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಇಸ್ರೇಲ್‌ನ ಹೈಫಾ ಬಂದರು ಮತ್ತು ಟಾಂಜಾನಿಯಾದ ದಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ 2 ಅನ್ನು ನಿರ್ವಹಿಸುತ್ತಿದೆ, ಇದು ತನ್ನ ಅಂತರರಾಷ್ಟ್ರೀಯ ಸರಕುಗಳನ್ನು ಹೆಚ್ಚಸಲು ಕಾರಣವಾಗುತ್ತದೆ.
ಅದಾನಿ ಪೋರ್ಟ್ಸ್‌ನ 5,000 ಕೋಟಿ ಬಾಂಡ್‌ಗಳು ನೀವು ಇದನ್ನುತಿಳಿದುಕೊಳ್ಳಲೇಬೇಕು
- ಅದಾನಿ ಬಂದರಿನ ಯುಎಸ್ ಡಾಲರ್ ಬಾಂಡ್‌ಗಳ ಪ್ರಸ್ತಾವಿತ ಮರುಖರೀದಿಗೆ (buyback) ಬಳಸಲಾಗುವುದು. ಈ ಮರುಖರೀದಿ ಪ್ರಸ್ತಾವನೆಗೆ ಮೇ 31, 2025ರಂದು ನಡೆಯುವ ಮಂಡಳಿಯ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಗುತ್ತದೆ ಇದು ಇನ್ನೂ ಬಾಕಿ ಇದೆ.
- ಈ ವಿತರಣೆಯ ಸಂಪೂರ್ಣ ಚಂದಾದಾರಿಕೆಯು ಕಂಪನಿಯ ಸಾಲದ ಪ್ರೊಫೈಲ್‌ನ್ನು ಸುಧಾರಿಸಿ, ಸರಾಸರಿ ಸಾಲದ ಅವಧಿಯನ್ನು 4.8 ವರ್ಷಗಳಿಂದ 6.2 ವರ್ಷಗಳವರೆಗೆ ಹೆಚ್ಚಳ ಮಾಡಲು ಸಹಾಕವಾಗುತ್ತದೆ.
- ಅದಾನಿ ಪೋರ್ಟ್ಸ್ ಅಂಡ್ ಸೆಝ್ ಸಂಸ್ಥೆಯು FY30 (2029-30 ಹಣಕಾಸು ವರ್ಷ)ಕ್ಕೆ 1 ಬಿಲಿಯನ್ ಟನ್ (100 ಕೋಟಿ ಟನ್) ಸರಕುಗಳನ್ನು ನಿರ್ವಹಣೆ ಮಾಡುವಂತಹ ಗುರಿಯನ್ನು ಹೊಂದಿದೆ. ಇದು FY25 (2024-25 ಹಣಕಾಸು ವರ್ಷ)ನಲ್ಲಿ ಅವರ ನಿರ್ವಹಣೆಯಾದ ಸರಕು ಪ್ರಮಾಣದಲ್ಲಿ ಎರಡು ಪಟ್ಟು ಹೆಚ್ಚಾಗುತ್ತದೆ.
- ಅದಾನಿ ಪೋರ್ಟ್ಸ್ ಸಂಸ್ಥೆಯು ತನ್ನ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಮತ್ತು ಮುಂದಿನ ದೀರ್ಘಕಾಲಿಕ ವಿಸ್ತರಣಾ ಯೋಜನೆಗಳಿಗೆ ನೆರವಾಗುವಂತೆ ತಯಾರಿ ಮಾಡಿಕೊಳ್ಳುತ್ತಿರುವ ಬಗ್ಗೆ ಸ್ಪಷ್ಟವಾಗಿ ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ. ಇದರಲ್ಲಿ ಅವರು ಸಾಲ ಮರುಪಾವತಿ, ಸಮಯಾವಧಿ ಮತ್ತು ಬಂಡವಾಳದ ವೆಚ್ಚವನ್ನು ಸುಧಾರಿಸುವುದು. ಜೊತೆಗೆ ದೀರ್ಘಾವಧಿಯ ಯೋಜನೆಗಳಿಗೆ ದೊಡ್ಡ ಪ್ರಮಾಣದ ಬಂಡವಾಳವನ್ನು ಹೂಡಿಕೆಗಳನ್ನು ಗಮನಹರಿಸಿದೆ.
- APSEZ ಪಶ್ಚಿಮ ಕರಾವಳಿಯಲ್ಲಿ ಏಳು ಮತ್ತು ಪೂರ್ವ ಕರಾವಳಿಯಲ್ಲಿ ಎಂಟು ಸ್ಥಳಗಳಲ್ಲಿ ಬಂದರುಗಳು ಮತ್ತು ಟರ್ಮಿನಲ್‌ಗಳನ್ನು ಹೊಂದಿದೆ. ಇದು ದೇಶದ ಒಟ್ಟು ಬಂದರು ಸರಕು ನಿರ್ವಹಣಾ ಪರಿಮಾಣದ ಶೇಕಡಾ ಶೇ. 27 ರಷ್ಟು ಹಂಚಿಕೆಯುಳ್ಳ ಅತ್ಯಂತ ದೊಡ್ಡ ಖಾಸಗಿ ಬಂದರು ಆಪರೇಟರ್ ಆಗಿ ಮುಂಚೂಣಿಯಲ್ಲಿ ಇದೆ.


Click it and Unblock the Notifications