ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚಣೆಯನ್ನು ಮಾಡಿದೆ ಎಂಬ ವರದಿಗಳ ಬಳಿಕ ಸಂಸ್ಥೆಯ ಸ್ಟಾಕ್‌ಗಳು ಭಾರೀ ಇಳಿದಿದೆ. ಈ ನಡುವೆ ತಮ್ಮ ಪ್ರಾಯೋಜಕರು 1,114 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಿ, ಗ್ರೂಪ್‌ನ ಸಂಸ್ಥೆಗಳ ಷೇರುಗಳನ್ನು ರಿಲೀಸ್ ಮಾಡುತ್ತಾರೆ ಎಂದು ಸೋಮವಾರ ಅದಾನಿ ಎಂಟರ್‌ಪ್ರೈಸಸ್‌ನ ಮೂಲ ಸಂಸ್ಥೆ ಅದಾನಿ ಗ್ರೂಪ್ ಹೇಳಿಕೊಂಡಿದೆ.
ಮಾರುಕಟ್ಟೆಯಲ್ಲಿನ ಅಸ್ಥಿರತೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೂಡಾ ಸಂಸ್ಥೆ ಹೇಳಿದೆ. ಈ ಬಗ್ಗೆ ಅದಾನಿ ಎಂಟರ್‌ಪ್ರೈಸಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಪ್ರಾಯೋಜಕರು ಸಾಲವನ್ನು ಪೂರ್ವಪಾವತಿ ಮಾಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
"ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮತ್ತು ಅದಾನಿ ಸಂಸ್ಥೆಯ ಷೇರುಗಳ ಮೇಲಿನ ಪ್ರಾಯೋಜಕರ ಹತೋಟಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರವರ್ತಕರ ಬದ್ಧತೆಯೊಂದಿಗೆಯೇ ಪ್ರಾಯೋಜಕರು ಸೆಪ್ಟೆಂಬರ್ 2024ರ ಮೆಚ್ಯೂರಿಟಿ ಸಮಯಕ್ಕಿಂತ ಮುಂಚಿತವಾಗಿ 1,114 ಮಿಲಿಯನ್ ಯುಎಸ್ ಡಾಲರ್ ಅನ್ನು ಪೂರ್ವಪಾವತಿ ಮಾಡಲಿದ್ದಾರೆ," ಎಂದು ಹೇಳಿದೆ.

ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ 168.27 ಮಿಲಿಯನ್ ಷೇರುಗಳು, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ 27.56 ಮಿಲಿಯನ್ ಷೇರುಗಳು ಮತ್ತು ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್‌ನ 11.77 ಮಿಲಿಯನ್ ಷೇರುಗಳನ್ನು ಪ್ರಾಯೋಜಕರು ಸಾಲ ಪೂರ್ವಪಾವತಿ ಮಾಡಿದ ಬಳಿಕ ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.
ಎಷ್ಟು ಪ್ರಯೋಜನ ಉಂಟಾಗಲಿದೆ?
ಎಲ್ಲ ಷೇರು ಆಧಾರದಲ್ಲಿ ಸಾಲವನ್ನು ಪ್ರಾಯೋಜಕರ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಅದಾನಿ ಗ್ರೂಪ್‌ನ ಷೇರುಗಳ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದೆ. ಈ ನಡುವೆ ಅದಾನಿ ಗ್ರೂಪ್ ಈ ಕ್ರಮವನ್ನು ಕೈಗೊಂಡಿದೆ. ಈ ಸಾಲ ಪೂರ್ವಪಾವತಿಯಿಂದಾಗಿ ಬಿಡುಗಡೆಯಾಗುವ ಷೇರುಗಳಿಂದಾಗಿ ಅದಾನಿ ಪೋರ್ಟ್ಸ್ ಹಾಗೂ ಎಸ್‌ಇಝೆಡ್‌ಗಳಿಗೆ ಶೇಕಡ 9ರಷ್ಟು ಪ್ರಯೋಜನ ಉಂಟಾಗಲಿದೆ.
ಅದಾನಿ ಎಂಟರ್‌ಪ್ರೈಸಸ್ ಕೂಡಾ ಉತ್ತಮ ವಹಿವಾಟಿಗೆ ಇಳಿಯುವ ಸಾಧ್ಯತೆಯಿದೆ. ಆದರೆ ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮಾರ್ ಷೇರುಗಳು ಮಾತ್ರ ಇಳಿಕೆಯಾಗಿಯೇ ಇದೆ. ಇನ್ನು ಅದಾನಿ ಗ್ರೂಪ್ ಹಿಂಡನರ್‌ಬರ್ಗ್ ವರದಿಯ ಬಳಿಕ ಸುಮಾರು ಅರ್ಧಕ್ಕೂ ಅಧಿಕ ತನ್ನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. 100 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟವನ್ನು ಕಂಡಿದೆ.
ಷೇರು ಮಾರುಕಟ್ಟೆಯಲ್ಲಿ ಅದಾನಿ ಷೇರುಗಳು ಭಾರೀ ಕುಸಿತ ಕಾಣುತ್ತಿದ್ದಂತೆ ಸಂಸ್ಥೆಯು ಸುಮಾರು 20,000 ಕೋಟಿ ಮೌಲ್ಯದ ಫಾಲೋ-ಆನ್ ಪಬ್ಲಿಕ್ ಆಫರ್ / ಎಫ್‌ಪಿಒ ಅನ್ನು ವಿತ್‌ಡ್ರಾ ಮಾಡಿಕೊಂಡಿದೆ. ಇನ್ನು ವರದಿಗಳ ಪ್ರಕಾರ ಹಲವಾರು ವಿದೇಶಿ ಬ್ಯಾಂಕ್‌ಗಳು ಅದಾನಿ ಗ್ರೂಪ್‌ನ ಡಾಲರ್ ಬಾಂಡ್‌ಗಳ ಮೇಲಾಧಾರದಲ್ಲಿ ಸಾಲವನ್ನು ನೀಡುವುದನ್ನು ನಿಲ್ಲಿಸಿದೆ.


Click it and Unblock the Notifications