For Quick Alerts
ALLOW NOTIFICATIONS  
For Daily Alerts

ಒಂದೇ ಒಂದು ಟ್ವೀಟ್‌: ಅದಾನಿ ಗ್ರೂಪ್ ಷೇರುಗಳು ಶೇಕ್..! ಅಂತದ್ದೇನಾಯ್ತು?

|

ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಸುದ್ದಿ ಹೊರಬೀಳುತ್ತಿದ್ದಂತೆ ಅದಾನಿ ಷೇರುಗಳು ಕುಸಿಯಲಾರಂಭಿಸಿದೆ. ಅದರಲ್ಲೂ ಪತ್ರಕರ್ತೆ ಸುಚೇತ ದಲಾಲ್ ಒಂದು ಟ್ವೀಟ್ ಅದಾನಿ ಮಾರುಕಟ್ಟೆಯನ್ನ ಅಲುಗಾಡಿಸಿದೆ.

 

ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) 3 ವಿದೇಶಿ ನಿಧಿಗಳಾದ ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ನಾಲ್ಕು ಅದಾನಿ ಗ್ರೂಪ್ ಕಂಪನಿಗಳಲ್ಲಿ 43,500 ಕೋಟಿ ರೂ. ಹೂಡಿಕೆ ಮಾಡಿದ್ದು, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಲಾಭದಾಯಕ ಮಾಲೀಕತ್ವದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣ ಈ ಮೂರು ಖಾತೆಗಳನ್ನು ಅಮಾನತುಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆಬಿ ಸಾಮನ್ಯವಾಗಿ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ. ಆದರೆ ಹೂಡಿಕೆದಾರರಿಂದ ಪ್ರತಿಕ್ರಿಯೆ ಬರದಿದ್ದಲ್ಲಿ ಖಾತೆಗೆಳನ್ನು ಸ್ಥಗಿತಗೊಳಿಸಬಹುದು.

ಅದಾನಿ ಷೇರುಗಳು ಶೇಕಡಾ 5ರಿಂದ 25ರಷ್ಟು ಕುಸಿತ

ಅದಾನಿ ಷೇರುಗಳು ಶೇಕಡಾ 5ರಿಂದ 25ರಷ್ಟು ಕುಸಿತ

ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದ ವಿದೇಶಿ ನಿಧಿಗಳನ್ನು ಸ್ಥಗಿತಗೊಳಿಸಿದ ಪರಿಣಾಮ ಅದಾನಿ ಷೇರುಗಳು ಶೇಕಡಾ 5ರಿಂದ 25ರಷ್ಟು ಕುಸಿತಗೊಂಡಿವೆ. ಕಂಪನಿಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಮೂರು ವಿದೇಶಿ ನಿಧಿಗಳ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಸ್ಥಗಿತಗೊಳಿಸಿದ ನಂತರ ಅದಾನಿ ಕಂಪೆನಿಗಳ ಷೇರುಗಳು ತೀವ್ರ ಕುಸಿತಗೊಂಡಿವೆ.

ಷೇರುಗಳ ಮಾರಾಟ ಮತ್ತು ಖರೀದಿ ಸಾಧ್ಯವಿಲ್ಲ!

ಷೇರುಗಳ ಮಾರಾಟ ಮತ್ತು ಖರೀದಿ ಸಾಧ್ಯವಿಲ್ಲ!

ಅಸ್ತಿತ್ವದಲ್ಲಿರುವ ಸೆಕ್ಯೂರಿಟಿಗಳನ್ನು (ಷೇರುಗಳು ಇತ್ಯಾದಿ) ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಯಾವುದೇ ಹೊಸ ಸೆಕ್ಯೂರಿಟಿಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಈ ಮೂರು ನಿಧಿಗಳ ಹಣವನ್ನು ಸೆಬಿಯಲ್ಲಿ ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರು (ಎಫ್‌ಪಿಐ) ಎಂದು ನೋಂದಾಯಿಸಲಾಗಿದೆ ಮತ್ತು ಮಾರಿಷಸ್ ಮೂಲದವಾಗಿದೆ.

ಈ ನಿಧಿಗಳು ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಶೇ 6.82, ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಶೇ 8.03, ಅದಾನಿ ಟೋಟಲ್ ಗ್ಯಾಸ್‌ ಶೇ 5.92 ಮತ್ತು ಅದಾನಿ ಗ್ರೀನ್‌ನಲ್ಲಿ ಶೇ 3.58 ರಷ್ಟು ಪಾಲನ್ನು ಹೊಂದಿವೆ.

 

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆದ ಸುಚೇತ ಟ್ವೀಟ್
 

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆದ ಸುಚೇತ ಟ್ವೀಟ್

ವಾಣಿಜ್ಯ ಪತ್ರಕರ್ತೆ ಸುಚೇತ ದಲಾಲ್ ಅವರು ಕಂಪನಿಯ ಹೆಸರನ್ನು ಉಲ್ಲೇಖಿಸದೇ ಕಂಪನಿಯ ಒಳಗೆ ನಡೆದಿರುವ ಲಾಭಿ ಕುರಿತು ಹಾಗೂ ಷೇರುಗಳ ಪರವಾಗಿ ಸಂಭವನೀಯ ಹಗರಣದ ಬಗ್ಗೆ ಸುಳಿವಿರುವ ಸಂದೇಶವನ್ನು ಜೂನ್ 12ರಂದು ನೀಡಿದ್ದಾರೆ. ಈ ಟ್ವೀಟ್‌ನಲ್ಲಿ ಕಂಪನಿಯ ಹೆಸರು ಉಲ್ಲೇಖಿಸದೇ ಇದ್ದರೂ ಮೇಲ್ನೋಟಕ್ಕೆ ಅದಾನಿ ಗ್ರೂಪ್ ಎಂಬ ಸಂದೇಶವಿದೆ. ಅದಾನಿ ಗ್ರೂಪ್‌ಗಳಲ್ಲಿ ಹೂಡಿಕೆದಾರ ನಿಧಿಗಳು ಸ್ಥಗಿತಗೊಳಿಸಿದ ಬಳಿಕ ಸುಚೇತ ಅವರ ಟ್ವೀಟ್ ಸಾಕಷ್ಟು ಟ್ರೆಂಡ್ ಸೃಷ್ಟಿಸಿದೆ.

ಎಲೋನ್‌ ಮಸ್ಕ್‌ ಟ್ವೀಟ್‌ ಮೀರಿಸುವ ಅಲೆ

ಎಲೋನ್‌ ಮಸ್ಕ್‌ ಟ್ವೀಟ್‌ ಮೀರಿಸುವ ಅಲೆ

ಟ್ವಿಟ್ಟರ್‌ನಲ್ಲಿ ಸಾಕಷ್ಟು ರೀಟ್ವೀಟ್‌ ಮೂಲಕ ಸಾಕಷ್ಟು ಟ್ರೆಂಡ್‌ ಸೃಷ್ಟಿಸಿರುವ ಸುಚೇತ ದಲಾಲ್, ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್‌ ಬಿಟ್‌ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಕುರಿತು ಮಾಡುವ ಟ್ವೀಟ್‌ಗಿಂತ ಪವರ್‌ಫುಲ್‌ ಆಗಿದೆ ಎಂದು ಟ್ವಿಟ್ಟರ್ ಬಳಕೆದಾರರು ಮೀಮ್ಸ್‌ ಸಂದೇಶಗಳನ್ನ ಹರಿಬಿಟ್ಟಿದ್ದಾರೆ. ಎಲೋನ್‌ ಮಸ್ಕ್‌ ಕ್ರಿಪ್ಟೋಕರೆನ್ಸಿ ಕುರಿತು ಮಾಡುವ ಟ್ವೀಟ್‌ಗಳು ಡಿಜಿಟಲ್ ಕರೆನ್ಸಿಗಳ ಮಾರುಕಟ್ಟೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ಅದಾನಿ ಗ್ರೂಪ್‌

ಅದಾನಿ ಗ್ರೂಪ್‌

ಅದಾನಿ ಗ್ರೂಪ್‌ನ 6 ಪಟ್ಟಿಮಾಡಿದ ಕಂಪನಿಗಳಿವೆ. ಇವುಗಳಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ ಸೇರಿವೆ. 2019 ರಲ್ಲಿ, ಕ್ಯಾಪಿಟಲ್ ಮಾರ್ಕೆಟ್ಸ್ ರೆಗ್ಯುಲೇಟರ್ ಪಿಎಂಎಲ್‌ಎಗೆ ಅನುಗುಣವಾಗಿ ಎಫ್‌ಪಿಐಗಳಿಗಾಗಿ ಕೆವೈಸಿಯನ್ನು ಸುಧಾರಿಸಿತ್ತು. ಹೊಸ ಮಾನದಂಡಗಳನ್ನು ಅನುಸರಿಸಲು 2020 ರವರೆಗೆ ಹಣವನ್ನು ನೀಡಲಾಯಿತು, ಅದು ವಿಫಲವಾದರೆ ಅವರ ಡಿಮ್ಯಾಟ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿತ್ತು.

ಹೊಸ ನಿಯಮಗಳ ಪ್ರಕಾರ, ಎಫ್‌ಪಿಐಗಳು ಸಾಮಾನ್ಯ ಮಾಲೀಕತ್ವವನ್ನು ಒಳಗೊಂಡಂತೆ ನಿಧಿಯ ವ್ಯವಸ್ಥಾಪಕರಂತಹ ನಿಧಿಯ ಪ್ರಮುಖ ಉದ್ಯೋಗಿಗಳ ವೈಯಕ್ತಿಕ ವಿವರಗಳನ್ನು ಒಳಗೊಂಡಂತೆ ಕೆಲವು ಹೆಚ್ಚುವರಿ ವಿವರಗಳನ್ನು ಸಲ್ಲಿಸಬೇಕಾಗಿತ್ತು.

 

ಕಳೆದ 1 ವರ್ಷದಲ್ಲಿ 1000% ಏರಿಕೆಗೊಂಡಿರುವ ಅದಾನಿ ಷೇರುಗಳು!

ಕಳೆದ 1 ವರ್ಷದಲ್ಲಿ 1000% ಏರಿಕೆಗೊಂಡಿರುವ ಅದಾನಿ ಷೇರುಗಳು!

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಶೇ 200 ರಿಂದ 1000 ರಷ್ಟು ಏರಿಕೆ ಕಂಡ ಅದಾನಿ ಗ್ರೂಪ್‌ನ ಷೇರುಗಳಲ್ಲಿ ಬೆಲೆ ನಿಜಕ್ಕೂ ಮೌಲ್ಯಯುತವಾಗಿವೆ ಎಂದು ಸೆಬಿ ಪರಿಶೀಲಿಸುತ್ತಿದೆ. ಸೆಬಿ 2020 ರಲ್ಲಿ ತನಿಖೆಯನ್ನು ಪ್ರಾರಂಭಿಸಿತು, ಅದು ಇನ್ನೂ ಮುಂದುವರೆದಿದೆ.

ಅದಾನಿ ಷೇರುಗಳು ಒಂದು ವರ್ಷದಲ್ಲಿ ಭರ್ಜರಿ ಲಾಭಗಳಿಸಿವೆ

ಅದಾನಿ ಷೇರುಗಳು ಒಂದು ವರ್ಷದಲ್ಲಿ ಭರ್ಜರಿ ಲಾಭಗಳಿಸಿವೆ

ಅದಾನಿ ಟ್ರಾನ್ಸ್‌ಮಿಷನ್ ಶೇ 669, ಅದಾನಿ ಟೋಟಲ್ ಗ್ಯಾಸ್ ಶೇ 349, ಅದಾನಿ ಎಂಟರ್‌ಪ್ರೈಸಸ್ ಶೇ 972 ಮತ್ತು ಅದಾನಿ ಗ್ರೀನ್ ಕಳೆದ ಒಂದು ವರ್ಷದಲ್ಲಿ ಶೇ 254 ರಷ್ಟು ಲಾಭ ಗಳಿಸಿದೆ. ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ ಈ ಅವಧಿಯಲ್ಲಿ ಕ್ರಮವಾಗಿ ಶೇ. 147 ಮತ್ತು ಶೇ. 295 ರಷ್ಟು ಲಾಭಗಳಿಸಿವೆ. ಅದಾನಿ ಸಮೂಹದ ಒಟ್ಟು ಮಾರುಕಟ್ಟೆ ಕ್ಯಾಪ್ ಶುಕ್ರವಾರ 9.5 ಲಕ್ಷ ಕೋಟಿ ರೂ.ಗೆ ಏರಿದೆ. ಈ ಮೂಲಕ ಅದರ ಅಧ್ಯಕ್ಷ ಗೌತಮ್ ಅದಾನಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

English summary

Adani Shares Drop Big: Here The Reason Behind This Mega Fall

Adani Group shares today dropped between 5 per cent and 18 per cent. The big drop in the shares of Asia’s second Richest man Gautam Adani’s group fell reasons here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X