ಹಿಂಡನ್‌ಬರ್ಗ್ ವರದಿಯ ಬಳಿಕ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಸಿಯುತ್ತಿದೆ. ಹಿಂಡನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಈವರೆಗೆ ಅದಾನಿ ಸಂಸ್ಥೆ ಸ್ಟಾಕ್ 108 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಕಂಡಿದೆ. ಗುರುವಾರ ಒಂದು ದಿನದಲ್ಲೇ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಮಾಧ್ಯಮವು ವರದಿ ಮಾಡಿದೆ.
ಗ್ಲೋಬಲ್ ಇಂಡೆಕ್ಸ್ ಎಸ್&ಪಿ ಡವ್ ಜಾನ್ಸ್ ತನ್ನ ಪಟ್ಟಿಯಿಂದ ಅದಾನಿ ಎಂಟರ್‌ಪ್ರೈಸಸ್ ಷೇರುಗಳನ್ನು ತೆಗೆದುಹಾಕುವುದಾಗಿ ಹೇಳಿದೆ. ಜನವರಿ 7ರಿಂದ ಜಾರಿಗೆ ಬರುವಂತೆ ಸಂಸ್ಥೆಯು ಈ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದೆ. ಇದಾದ ಬಳಿಕ ಅದಾನಿ ಗ್ರೂಪ್ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ.
ಈ ನಡುವೆ ಸ್ಟಾಕ್ ಎಕ್ಸ್‌ಚೇಂಜ್ ಆದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಸಿ) ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ಸ್ ಸ್ಟಾಕ್‌ಗಳ ಮೇಲೆ ಅಧಿಕ ಗಮನಹರಿಸುವಂತಹ ಕ್ರಮಗಳನ್ನು (ಎಎಸ್‌ಎಂ) ಕೈಗೊಂಡಿದೆ ಎಂದು ಹೇಳಿದೆ. ಅಂದರೆ ಈ ಸ್ಟಾಕ್‌ಗಳ ಮೇಲೆ ಅಧಿಕ ನಿಯಮಗಳು ಇರಲಿದೆ ಎಂದರ್ಥವಾಗಿದೆ. ಹಾಗೆಯೇ ಕೆಲವು ವಹಿವಾಟುಗಳಿಂದ ಈ ಸ್ಟಾಕ್‌ಗಳನ್ನು ಹೊರಕ್ಕಿಡಲಾಗುತ್ತದೆ.

ಹಿಂಡನ್‌ಬರ್ಗ್ ವರದಿಯಾದ ಬಳಿಕ ಈವರೆಗೆ ಒಟ್ಟು ಎಷ್ಟು ನಷ್ಟ?
ಯುಎಸ್‌ನ ಸಂಸ್ಥೆ ಹಿಂಡನ್‌ಬರ್ಗ್ ಅದಾನಿ ಗ್ರೂಪ್ ವಂಚನೆಯನ್ನು ಮಾಡಿದೆ ಎಂಬ ವರದಿಯನ್ನು ಮಾಡಿದ ಬಳಿಕ ಅದಾನಿ ಗ್ರೂಪ್ ಮೌಲ್ಯದಲ್ಲಿ ಅರ್ಧದಷ್ಟು ನಷ್ಟ ಉಂಟಾಗಿದೆ. ಸುಮಾರು 120 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟವಾಗಿದೆ.
ಅದಾನಿ ಗ್ರೂಪ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವಿನ ನಂಟಿನ ಬಗ್ಗೆಯೂ ವರದಿಗಳಾಗುತ್ತಿದೆ. ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅದಾನಿ ಸಹಾಯ ಮಾಡಿದ್ದರು ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಆದರೆ ಈ ಆರೋಪಗಳನ್ನು ಅದಾನಿ ಗ್ರೂಪ್ ಮಾತ್ರ ಅಲ್ಲಗಳೆದಿದೆ. ಈ ಹಿಂದೆ ಹಿಂಡನ್‌ಬರ್ಗ್ ವರದಿಯನ್ನು ಕೂಡಾ ಅದಾನಿ ಗ್ರೂಪ್ ತಳ್ಳಿಹಾಕಿದೆ. "ಇದು ಸುಳ್ಳು ಆರೋಪ ಎಂದು ಅದಾನಿ ಶುಕ್ರವಾರ ಹೇಳಿದ್ದಾರೆ. ಸುಲಭವಾಗಿ ಟಾರ್ಗೆಟ್ ಮಾಡಲು ಸಾಧ್ಯವಾಗುವುದಕ್ಕೆ ಈ ರೀತಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಇಂದು ಅದಾನಿ ಸ್ಟಾಕ್ ವಹಿವಾಟಿನ ಆರಂಭದಲ್ಲೇ ಶೇಕಡ 10ರಷ್ಟು ಕುಸಿತ ಕಂಡಿದ್ದು ಟ್ರೇಡಿಂಗ್ ಅನ್ನೇ ನಿಲ್ಲಿಸಲಾಗಿದೆ. ಅದಾನಿ ಟ್ರಾನ್ಸ್‌ಮಿಷನ್ ಸ್ಟಾಕ್ ಅನ್ನು ವಹಿವಾಟಿನಿಂದ ತೆಗೆದುಹಾಕಲಾಗಿದೆ. ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಕಳೆದ ಕೆಲವು ವರ್ಷಗಳಿಂದ ಶೇಕಡ 1000ದಷ್ಟು ಕುಸಿದಿದೆ ಎಂದು ವರದಿಯಾಗಿದೆ.
ಏನಿದು ಹಿಂಡನ್‌ಬರ್ಗ್ ವರದಿ?
ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ. ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಕೂಡ ಹಿಂಡನ್‌ಬರ್ಗ್ ತನಿಖಾ ವರದಿ ಮಾಡಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications