ಅದಾನಿ ಗ್ರೂಪ್‌ನ ಅದಾನಿ ಟ್ರಾನ್ಸ್‌ಮಿಷನ್ ಪವರ್ ಟ್ರಾನ್ಸ್‌ಮಿಷನ್ ಕ್ಷೇತ್ರದಲ್ಲಿ ಭಾರತದಲ್ಲೇ ಅತೀ ಪ್ರಮುಖವಾದ ಸಂಸ್ಥೆಯಾಗಿದೆ. ಆದರೆ ಈಗ ಈ ಸಂಸ್ಥೆಯು ತನ್ನ ಹೆಸರನ್ನು ಅದಾನಿ ಎನರ್ಜಿ ಸೊಲ್ಯಷನ್ ಎಂದು ಬದಲಾವಣೆ ಮಾಡಿಕೊಂಡಿದೆ. ಜುಲೈ 27ರಿಂದ ಜಾರಿಗೆ ಬರುವಂತೆ ಹೆಸರನ್ನು ಬದಲಾವಣೆ ಮಾಡಲಾಗಿದೆ.
ಅದಾನಿ ಟ್ರಾನ್ಸ್‌ಮಿಷನ್ ಎಂದು ಪಟ್ಟಿ ಮಾಡಲಾದ ಈ ಅದಾನಿ ಸ್ಟಾಕ್ ಕಂಪನಿಯ ಹೆಸರಿನ ಬದಲಾವಣೆಗೆ ಶುಕ್ರವಾರ ಸ್ಟಾಕ್ ಮಾರುಕಟ್ಟೆಯಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಕಂಡು ಬಂದಿದೆ. ಬಿಎಸ್‌ಇಯಲ್ಲಿ ಶೇಕಡ 1.5ಕ್ಕಿಂತ ಅಧಿಕ ವಹಿವಾಟು ನಡೆಸಿದೆ. ಈ ಸಮಯಕ್ಕೆ ಅದಾನಿ ಟ್ರಾನ್ಸ್‌ಮಿಷನ್ ಸ್ಟಾಕ್ ಶೇಕಡ 1.63ರಷ್ಟು ಜಿಗಿತ ಕಂಡು, 818.15 ರೂಪಾಯಿಗೆ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ ಸ್ಟಾಕ್ ಏರಿಕೆ
ಆರಂಭಿಕ ವಹಿವಾಟಿನಲ್ಲಿ ಸ್ಟಾಕ್ ಶೇಕಡ 1.56ರಷ್ಟು ಏರಿ, 817.90 ರೂಪಾಯಿಗೆ ತಲುಪಿದೆ. ಸ್ಟಾಕ್ ಸಹ ಅದರ ಹಿಂದಿನ ದಿನದ ಮುಕ್ತಾಯದ ಬೆಲೆ 805.30 ರೂಪಾಯಿಯಿಂದ 810 ರೂಪಾಯಿಗೆ ಏರಿಕೆಯಾಗಿದೆ. ಕಂಪನಿಯು ತನ್ನ ನಿಯಂತ್ರಕ ಫೈಲಿಂಗ್‌ನಲ್ಲಿ, "ಕಂಪನಿಯ ಹೆಸರನ್ನು 'ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್' ನಿಂದ 'ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್' ಎಂದು 27 ಜುಲೈ, 2023 ರಿಂದ ಬದಲಾಯಿಸಲಾಗಿದೆ ಎಂದು ನಾವು ತಿಳಿಸುತ್ತೇವೆ," ಎಂದು ಹೇಳಿದೆ.
ಅದಾನಿ ಟ್ರಾನ್ಸ್‌ಮಿಷನ್ ಬಗ್ಗೆ ಅಧಿಕ ಮಾಹಿತಿ
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಇದನ್ನು ಖಚಿತಪಡಿಸಿದೆ. ಮೂಲತಃ, ಕಂಪನಿಯು ಅದಾನಿ ಟ್ರಾನ್ಸ್‌ಮಿಷನ್ ಹೆಸರನ್ನು ಹೊಂದಿದೆ. ಇದು ಅದಾನಿ ಪೋರ್ಟ್‌ಫೋಲಿಯೊದ ಇ-ಟ್ರಾನ್ಸ್‌ಮಿಷನ್ ಮತ್ತು ವಿತರಣಾ ವ್ಯಾಪಾರ ವಿಭಾಗವಾಗಿದೆ. ಅದಾನಿ ಟ್ರಾನ್ಸ್‌ಮಿಷನ್ ದೇಶದ ಅತಿ ದೊಡ್ಡ ಖಾಸಗಿ ಟ್ರಾನ್ಸ್‌ಮಿಷನ್ ಸಂಸ್ಥೆಯಾಗಿದ್ದು, ಭಾರತದ 14 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ.
ಸಂಸ್ಥೆಯು ವಿತರಣಾ ವ್ಯವಹಾರವನ್ನು ಕೂಡಾ ನಿರ್ವಹಣೆ ಮಾಡುತ್ತದೆ. ಮುಂಬೈ ಮತ್ತು ಮುಂದ್ರಾ ಎಸ್‌ಇಝೆಡ್‌ನಲ್ಲಿ 12 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ, ಅದಾನಿ ಟ್ರಾನ್ಸ್‌ಮಿಷನ್ ತನ್ನ ಸಿಸ್ಟಮ್ ಲಭ್ಯತೆಯನ್ನು ಶೇಕಡ 9.77ರಷ್ಟು ಹೆಚ್ಚಿಸಿಕೊಂಡಿದೆ.
ಇನ್ನು ಕಂಪನಿಯು ಆಂಧ್ರಪ್ರದೇಶದಲ್ಲಿ ಮೂರು ಸ್ಮಾರ್ಟ್ ಮೀಟರಿಂಗ್ ಯೋಜನೆಗಳಿಗೆ ಎಲ್‌ಒಎ ಪಡೆದುಕೊಂಡಿದೆ. ನೌಕರನ ಸ್ಥಾನಮಾನವನ್ನು ಉಳಿಸಿಕೊಂಡು ಒಬ್ಬನು ಅವನ/ಅವಳ ಪ್ರಾಥಮಿಕ ಕೆಲಸದಿಂದ ದೂರವಿರಬೇಕಾದ ಅವಧಿಯನ್ನು ಎಲ್‌ಒಎ ಎಂದು ಕರೆಯಲಾಗುತ್ತದೆ. ಇದು ಸುಮಾರು 2.7 ಮಿಲಿಯನ್ ಸ್ಮಾರ್ಟ್ ಮೀಟರ್‌ಗಳ ತ್ರೈಮಾಸಿಕದಲ್ಲಿ 37 ಬಿಲಿಯನ್ ರೂಪಾಯಿಯ ಒಪ್ಪಂದವಾಗಿದೆ.
ತ್ರೈಮಾಸಿಕ ವರದಿ ಏನು ಹೇಳುತ್ತದೆ?
ಇನ್ನು ಕಂಪನಿಯ ತ್ರೈಮಾಸಿಕ ಡೇಟಾವನ್ನು ನಾವು ನೋಡಿದಾಗ ಸಂಸ್ಥೆಯ ನಷ್ಟವು ಸ್ಥಿರವಾಗಿ ಸುಧಾರಿಸುತ್ತಿದೆ. ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 4.85ಕ್ಕೆ ನಷ್ಟ ತಲುಪಿದ್ದು, ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 6.95 ಆಗಿತ್ತು. ನಷ್ಟವು ಸಾಮಾನ್ಯವಾಗಿರುವ ನಷ್ಟಕ್ಕಿಂತ ಕಡಿಮೆಯಾಗಿದೆ.
ಜೂನ್ 30, 2023 (Q1FY24) ಅವಧಿಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಅದಾನಿ ತನ್ನ ಒಟ್ಟಾರೆ ಹಣಕಾಸು ಫಲಿತಾಂಶಗಳನ್ನು ಜುಲೈ 31 ರಂದು ಪ್ರಕಟಿಸುತ್ತದೆ. ಕಳೆದ ಐದು ವಹಿವಾಟು ಅವಧಿಗಳಲ್ಲಿ, ಅದಾನಿ ಟ್ರಾನ್ಸ್‌ಮಿಷನ್‌ನ ಷೇರುಗಳು ಸುಮಾರು ಶೇಕಡ 5ರಷ್ಟು ಗಳಿಕೆ ಕಂಡಿದೆ. ಜನವರಿಯ ಅಂತ್ಯದಲ್ಲಿ ಹಿಂಡನ್‌ಬರ್ಗ್ ವರದಿಯ ಕಾರಣದಿಂದಾಗಿ ಅದಾನಿ ಸ್ಟಾಕ್ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುತ್ತಾ ಬಂದಿದೆ. ಬಿಎಸ್‌ಇಯಲ್ಲಿ ಈವರೆಗೆ ಸ್ಟಾಕ್ ಶೇಕಡ 68ಕ್ಕಿಂತ ಅಧಿಕ ಕುಸಿತವಾಗಿದೆ. ಅದಾನಿ ಸಂಸ್ಥೆಗಳು ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂಬ ಆರೋಪವನ್ನು ಹಿಂಡನ್‌ಬರ್ಗ್ ವರದಿ ಮಾಡಿದೆ.


Click it and Unblock the Notifications