ಕೊರೊನಾ ವಿರುದ್ಧ ಹೋರಾಟಕ್ಕೆ ಎಡಿಬಿಯಿಂದ 11,400 ಕೋಟಿ ಮಂಜೂರು

ಕೊರೊನಾ ವೈರಾಣು ವಿರುದ್ಧ ಹೋರಾಡುವ ಸಲುವಾಗಿ ಭಾರತಕ್ಕೆ 1.5 ಬಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಮಂಜೂರು ಮಾಡಿದೆ ಎಂದು ಮಂಗಳವಾರ ಹೇಳಿದೆ. ಭಾರತದ ರುಪಾಯಿಗಳಲ್ಲಿ ಇವತ್ತಿನ ಲೆಕ್ಕಕ್ಕೆ ಹೇಳಬೇಕು ಅಂದರೆ, ಸಾಲದ ಮೊತ್ತ 11,400 ಕೋಟಿ ಆಗುತ್ತದೆ.

ಕಾಯಿಲೆಯ ನಿಯಂತ್ರಣ ಹಾಗೂ ತಡೆಯನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಂಡು ಈ ಸಾಲವನ್ನು ಮಂಜೂರು ಮಾಡಲಾಗಿದೆ. ಇದರ ಜತೆಗೆ ಬಡವರಿಗೆ ಹಾಗೂ ಆರ್ಥಿಕವಾಗಿ ದುರ್ಬಲರಾದವರಿಗೆ ಸಾಮಾಜಿಕ ರಕ್ಷಣೆ ದೊರೆಯಬೇಕು ಎಂಬ ಉದ್ದೇಶ ಕೂಡ ಇದೆ. ಹಿಂದೆಂದೂ ಕಂಡಿರದ ಸನ್ನಿವೇಶ ಎದುರಿಸುತ್ತಿರುವ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಲು ಬದ್ಧರಿದ್ದೇವೆ ಎಂದು ಎಡಿಬಿ ತಿಳಿಸಿದೆ.

ಇಂಥ ದೊಡ್ಡ ಮೊತ್ತದ ಪ್ಯಾಕೇಜ್ ಅನ್ನು ಶೀಘ್ರದಲ್ಲಿ ವಿತರಣೆ ಮಾಡಲಾಗುತ್ತದೆ. ಅದಕ್ಕಾಗಿ ಸರ್ಕಾರ ಮತ್ತು ಇತರ ಅಭಿವೃದ್ಧಿಪರ ಸಂಸ್ಥೆಗಳ ಸಹಯೋಗದಲ್ಲಿ ಸಮನ್ವಯ ನಡೆಸುತ್ತೇವೆ ಎಂದು ಕೂಡ ಎಡಿಬಿ ಮಾಹಿತಿ ನೀಡಿದೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಎಡಿಬಿಯಿಂದ 11,400 ಕೋಟಿ ಮಂಜೂರು

ಕೊರೊನಾ ವಿರುದ್ಧದ ಭಾರತದ ಕಾರ್ಯಕ್ರಮಗಳಿಗೆ ಬೆಂಬಲಿಸಲು ನಾವು ನಿರ್ಧರಿಸಿದ್ದೇವೆ. ಜನರಿಗೆ ಪರಿಣಾಮಕಾರಿಯಾದ ಬೆಂಬಲ ನೀಡಿರುವುದನ್ನು ಅದರಲ್ಲೂ ಬಡವರು, ಆರ್ಥಿಕವಾಗಿ ದುರ್ಬಲರಿಗೆ ನೆರವಾಗುವುದನ್ನು ಭಾರತ ಖಾತ್ರಿಪಡಿಸಬೇಕು ಎಂದು ಹೇಳಿಕೆಯಲ್ಲಿ ಎಡಿಬಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+