For Quick Alerts
ALLOW NOTIFICATIONS  
For Daily Alerts

ಕೊರೊನಾ ಹೋರಾಟ: ಭಾರತಕ್ಕೆ 16,731 ಕೋಟಿ ನೀಡುವ ಭರವಸೆ ನೀಡಿದ ಏಷ್ಯಾ ಬ್ಯಾಂಕ್

|

130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಕೊರೊನಾ ಸಂಕಷ್ಟ ನಿವಾರಣೆಗೆ 2.2 ಬಿಲಿಯನ್ ಡಾಲರ್(ಭಾರತದ ರುಪಾಯಿಗಳಲ್ಲಿ ಸುಮಾರು 16,731 ಕೋಟಿ) ಪ್ಯಾಕೇಜ್ ನೀಡುವುದಾಗಿ ಏಷ್ಯಾ ಡೆವಲಪ್‌ಮೆಂಟ್ ಬ್ಯಾಂಕ್ ಭರವಸೆ ನೀಡಿದೆ.

ಎಡಿಬಿ ಅಧ್ಯಕ್ಷ ಮಸತ್ಸುಗು ಅಸಕಾವಾ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನಡುವೆ ಗುರುವಾರ ದೂರವಾಣಿ ಸಂಭಾಷಣೆಯ ನಂತರ ಎಡಿಬಿ ಬ್ಯಾಂಕ್ ಈ ಭರವಸೆಯನ್ನು ನೀಡಿದೆ. ರೋಗವನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸಲು ಮತ್ತು ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಬಲಪಡಿಸಲು ಭಾರತಕ್ಕೆ ಕಳೆದ ವಾರ ವಿಶ್ವ ಬ್ಯಾಂಕ್ ಅನುಮೋದಿಸಿದ ಒಂದು ಬಿಲಿಯನ್ ಡಾಲರ್ ಸಹಾಯದ ಜೊತೆಗೆ ಏಷ್ಯಾ ಡೆವಲಪ್‌ಮೆಂಟ್ ಬ್ಯಾಂಕ್ ಕೂಡ ಸಹಾಯ ಮಾಡಲಿದೆ.

ಭಾರತಕ್ಕೆ 16,731 ಕೋಟಿ ನೀಡುವ ಭರವಸೆ ನೀಡಿದ ಏಷ್ಯಾ ಬ್ಯಾಂಕ್

"ಭಾರತದ ತುರ್ತು ಅಗತ್ಯಗಳನ್ನು ಬೆಂಬಲಿಸಲು ಎಡಿಬಿ ಬದ್ಧವಾಗಿದೆ. ನಾವು ಈಗ ಆರೋಗ್ಯ ಕ್ಷೇತ್ರಕ್ಕೆ ತಕ್ಷಣದ ಸಹಾಯಕ್ಕಾಗಿ 2.2 ಬಿಲಿಯನ್ ಸಿದ್ಧಪಡಿಸುತ್ತಿದ್ದೇವೆ ಮತ್ತು ಬಡವರ ಮೇಲೆ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ನಿವಾರಿಸಲು ಸಹಾಯ ಮಾಡುತ್ತೇವೆ. ಅನೌಪಚಾರಿಕ ಕಾರ್ಮಿಕರು,ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಮತ್ತು ಹಣಕಾಸು ವಲಯ ಸಮಸ್ಯೆ ಸುಧಾರಣೆಗೆ ಪ್ರಯತ್ನ ನಡೆಸುತ್ತೇವೆ ಎಂದು "ಅಸಕಾವಾ ಹೇಳಿದರು.

"ಅಗತ್ಯವಿದ್ದರೆ ಭಾರತಕ್ಕೆ ಎಡಿಬಿ ನೆರವು ಮತ್ತಷ್ಟು ಹೆಚ್ಚಿಸಲಾಗುವುದು. ತುರ್ತು ನೆರವು, ನೀತಿ ಆಧಾರಿತ ಸಾಲಗಳು ಮತ್ತು ಎಡಿಬಿ ನಿಧಿಗಳ ತ್ವರಿತ ವಿತರಣೆಗೆ ಅನುಕೂಲವಾಗುವಂತೆ ಬಜೆಟ್ ಬೆಂಬಲ ಸೇರಿದಂತೆ ಭಾರತದ ಅಗತ್ಯತೆಗಳನ್ನು ಪೂರೈಸಲು ನಮ್ಮೊಂದಿಗೆ ಲಭ್ಯವಿರುವ ಎಲ್ಲಾ ಹಣಕಾಸು ಆಯ್ಕೆಗಳನ್ನು ನಾವು ಪರಿಗಣಿಸುತ್ತೇವೆ ಎಂದು ಎಡಿಬಿ ಬ್ಯಾಂಕ್ ಹೇಳಿದೆ.

English summary

ADB Assures 2.2 Billion Dollar Package For India To Fight Coronavirus

The Asian Development Bank (ADB) on Friday assured India of $2.2 billion assistance in its fight against the covid-19
Story first published: Friday, April 10, 2020, 17:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X