ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಏರೋ ಇಂಡಿಯಾ 2025 ಇದೇ ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿದೆ. ಸ್ವದೇಶೀ ಉದ್ಯಮಕ್ಕೆ ಹೆಚ್ಚು ಅವಕಾಶಗಳನ್ನು ಸೃಷ್ಠಿಸುವುದು ಇದರ ಉದ್ದೇಶವಾಗಿದೆ. ಬನ್ನಿ, ಈ ಬಾರಿಯ ಏರೋ ಇಂಡಿಯಾ 2025 ವಿಶೇಷತೆಗಳೇನು? ಎಷ್ಟು ದಿನ ಏರ್ ಶೋ ನಡೆಯಲಿದೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಹೌದು, ಈ ಬಾರಿಯ ಏರೋ ಶೋ ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಕಾರ್ಯಕ್ರಮದ ಅಡಿ ಜಾಗತಿಕ ಹಾಗೂ ಭಾರತೀಯ ಏರೋಸ್ಪೇಸ್ ಉದ್ಯಮಗಳಲ್ಲಿನ ಪ್ರಗತಿಗಾಗಿ ಪಾಲುದಾರಿಕೆಗಳನ್ನು ಉತ್ತೇಜಿಸುವುದರೊಂದಿಗೆ ಸ್ವದೇಶೀ ಉದ್ಯಮಕ್ಕೆ ಹೆಚ್ಚು ಅವಕಾಶಗಳನ್ನು ಸೃಷ್ಠಿಸುವ ಉದ್ದೇಶವನ್ನು ಇಟ್ಟುಕೊಂಡು ಕಾರ್ಯಕ್ರಮನ್ನು ಆಯೋಜಿಸಲಾಗಿದೆ.ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬಹಳ ವಿಶೇಷವಾಗಿ ಇರಲಿದೆ.

ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ
ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು.ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ.
ಈ ಬಾರಿಯ ಏರ್ ಶೋ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆ ರೂಪಿಸಲು ಮತ್ತು ದೇಶೀಯ ಪ್ರಕ್ರಿಯೆಯನ್ನು ವೇಗವಾಗಿ ಹುಡುಕಲು ಕೆಲವು ಯೋಜನೆ ರೂಪಿಸಲಾಗಿದೆ. ಈ ಭಾಗವಾಗಿ ರಕ್ಷಣಾ ಸಚಿವರ ಕಾನ್ಕ್ಲೇವ್, ಉದ್ಯಮ ಸಂಸ್ಥೆಗಳಲ್ಲಿನ ಸಿಇಒಗಳ ಚಿಂತನ ಮಂಥನ ಸಭೆ ಹಾಗೂ ದೇಶೀಯ ಉತ್ಪನ್ನ ಸಾಮರ್ಥ್ಯಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಏರ್ ಶೋ ವೇಳೆಯಲ್ಲಿ ಭಾರತದ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಕ್ಷೇತದ ಸಹಭಾಗಿತ್ವದ ಕುರಿತು ಬಿಆರ್ಐಡಿಜಿಇ ಅಂತರ್‌ರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕದ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದಕ್ಕಾಗಿ ಸಮಾವೇಶವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ಏರ್ ಶೋಗೆ ವಾಯು ಸೇನೆಯು ಹೆಚ್ಚಿನ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಬಾರಿಯ ಏರ್ ಶೋ ವಿಶ್ವಕ್ಕೆ ಮೇಕ್-ಇನ್-ಇಂಡಿಯಾ ಯೋಜನಗೆ ತನ್ನ ಕಾರ್ಯಬದ್ದತೆಯನ್ನು ತೋರಿಸಲಿದೆ.ರಕ್ಷಣಾ ಉತ್ಪಾದನಾ ಸಾಮರ್ಥ್ಯ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಹ ಈ ವೇಳೆ ಪ್ರದರ್ಶನ ಮಾಡಲಾಗುತ್ತದೆ. ಭಾರತದ ಹೊಸ ಸ್ಟಾರ್ಟ್-ಅಪ್‌ಗಳ ಕುರಿತು ಪ್ರಚಾರವನ್ನು ಸಹ ಇರಲಿದೆ. ಈ ಸಲ ರಕ್ಷಣಾ ಇಲಾಖೆಯು 2024 ರ ಆವೃತ್ತಿಯ ಸಾಧನೆಗಳನ್ನು ಮೀರಿಸುವ ಗುರಿಯನ್ನು ಹೊಂದಿದೆ.
ಏರೋ ಶೋ ಹಿಂದಿನ ಆವೃತ್ತಿಗಳು 7 ಲಕ್ಷಕ್ಕೂ ಅಧಿಕ ವೀಕ್ಷಕಕರು ಹಾಗೂ 98 ದೇಶಗಳಿಂದ ಗಣ್ಯರು ಮತ್ತು ಉದ್ಯಮಿಗಳು, ಹೂಡಿಕೆದಾರರು,ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್‌ಎಂಇಗಳು ಸೇರಿ 809ಕ್ಕೂ ಅಧಿಕ ಪ್ರದರ್ಶಕರ ಗಮನವನ್ನು ಕಳೆದ ಬಾರಿಯ ಏರೋ ಶೋ ಸಳೆದಿತು. ಅದೇ ಕಾರ್ಯಕ್ರಮದಲ್ಲಿ 201 ಒಡಂಬಡಿಕೆಗಳಿಗೆ ಸಹಿ, ಪ್ರಮುಖ ಘೋಷಣೆ, ಉತ್ಪನ್ನ ಬಿಡುಗಡೆ, 75 ಸಾವಿರ ಕೋಟಿಗೂ ಅಧಿಕ ಮೌಲ್ಯದ ತಂತ್ರಜ್ಞಾನ ವರ್ಗಾವಣೆಗಳು ಸಹ ನಡೆದಿದೆ.
ಈ ಸಲ ಏರೋ ಶೋ ಹಲವಾರು ಹೊಸ ಹೊಸ ಯೋಜನೆಗಳು, ಸ್ವದೇಶಿ ಉದ್ಯಮಕ್ಕೆ ಬೆಂಬಲ,ಮೇಕ್ ಇನ್ ಇಂಡಿಯಾ, ಹೀಗೆ ಹಲವಾರು ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ.ಈ ಮೂಲಕ 15ನೇ ಆವೃತ್ತಿಯು ಈ ಬಾರಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.


Click it and Unblock the Notifications