ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಏರೋ ಇಂಡಿಯಾ 2025 ಇದೇ ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿದೆ ಇದರ ಪ್ರಯಕ್ತ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಪಾರ್ಕಿಂಗ್ ಸ್ಥಳದಿಂದಲೇ ಬಿಎಂಟಿಸಿ ಬಸ್ ಸೇವೆ ಒದಗಿಸಲು ಬೆಂಗಳೂರು ಮಹಾನಗರ ಸಾರಿಗೆ ನಿರ್ಧಾರ ಮಾಡಿದೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇದೇ ಫೆಬ್ರವರಿ 10ರಿಂದ 14ರವರೆಗೆ ಲೋಹದ ಹಕ್ಕಿಗಳ ಕಲರವ ಏರೋ ಇಂಡಿಯಾ 2025 (ಏರ್ ಶೋ) ನಡೆಯಲಿದೆ. ಇನ್ನೂ ಏರ್‌ಶೋ ವೀಕ್ಷಣೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಇಲ್ಲಿಗೆ ಆಗಮಿಸಲಿದ್ದು,ಸಾರ್ವಜನಿಕರ ಅನುಕೂಲವಾಗಲು ಎಂದು ಬಿಎಂಟಿಸಿ ಬಸ್ ಸೇವೆ ಕೂಡ ಒದಗಿಸುತ್ತಿದೆ.

ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲು ಸಂಚಾರ ಪೊಲೀಸರ ಹೊಸ ಪ್ಲ್ಯಾನ್
ಏರ್‌ಶೋ ನೋಡಲು ಬರುವವರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಸಿಕೋಂಡುವುದೇ ಸಂಚಾರ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಆದ್ದರಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಈ ಬಾರಿ ಏರ್‌ಶೋಗೆ ಬರುವವರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲು ಸಂಚಾರ ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಜಿಕೆವಿಕೆ ಆವರಣದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸುವಂತೆ ವೀಕ್ಷಕರಿಗೆ ಸೂಚನೆ ನೀಡಲಾಗಿದೆ.
ಬಿಎಂಟಿಸಿ ಬಸ್ ಶಟಲ್ ಬಸ್ ವ್ಯವಸ್ಥೆ
ಜಿಕೆವಿಕೆ ಆವರಣದಿಂದ ಯಲಹಂಕ ಏರ್ ಶೋ ನಡೆಯುವ ವಾಯುನೆಲೆಗೆ ಸಾಕಷ್ಟು ದೂರವಿದೆ.ಸಾರ್ವಜನಿಕರಿಗಾಗಿ ಮತ್ತೊಂದು ರೀತಿಯಲ್ಲಿ ಸೇವೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಏರ್ ಶೋಗೆ ಬರುವವರು ಜಿಕೆವಿಕೆ ಬಳಿ ವಾಹನ ನಿಲ್ಲಿಸಿದ ನಂತರ ಅಲ್ಲಿಂದ ಏರ್‌ಶೋ ನಡೆಯುವ ಜಾಗಕ್ಕೆ ಬಿಎಂಟಿಸಿ ಬಸ್ ಶಟಲ್ ಬಸ್ ವ್ಯವಸ್ಥೆಯನ್ನು ಮಾಡಿದ್ದಾರೆ.
ಹಾಗಾಗಿ ಗಾಡಿಗಳನ್ನು ಪಾರ್ಕ್ ಮಾಡಿ ಅಲ್ಲಿಂದಲೇ ಬಿಎಂಟಿಸಿ ಬಸ್ ಹತ್ತಿ ಏರ್ ಶೋ ನಡೆಯುವ ಸ್ಥಳಕ್ಕೆ ಪ್ರಯಾಣಿಕರು ತಲುಪಬಹುದಾಗಿದೆ.
ಏರ್‌ಶೋ ಟಿಕೆಟ್‌ಗಳನ್ನು ಬಳಕೆ
ಏರ್‌ಶೋ ನೋಡಲು ಬಂದವರು ಜಿಕೆವಿಕೆ ಆವರಣದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಅಲ್ಲಿಂದ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಲು ಸಾರ್ವಜನಿಕರು ಏರ್‌ಶೋ ಟಿಕೆಟ್‌ಗಳನ್ನು ಬಳಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 13 ಮತ್ತು 14ರಂದು ಸಾರ್ವಜನಿಕರಿಗೆ ಪ್ರವೇಶ
ಏರ್‌ಶೋ ಮೊದಲ ಮೂರು ದಿನಗಳಾದ ಫೆಬ್ರವರಿ 10 ರಿಂದ 12 ರವರೆಗೆ ಉದ್ಯಮಿಗಳು, ವೃತ್ತಿಪರರು ಹಾಗೂ ಹೂಡಿಕೆದಾರರಿಗಾಗಿ ಕಾಯ್ದಿರಿಸಲಾಗಿದೆ. ಬಳಿಕ ಕೊನೆಯ ಎರಡು ದಿನಗಳು ಫೆಬ್ರವರಿ 13 ಮತ್ತು 14ರಂದು ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿದೆ.
ಏರ್ ಶೋ ಸೆರೆಹಿಡಿಯಲು ಕ್ಯಾಮರಾಗಳಿಗೆ ಮಾತ್ರ ಅವಕಾಶ
ಏರ್ ಶೋ ವೀಕ್ಷಿಸಲು ಬರುವವರಿಗೆ ಜಿಕೆವಿಕೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದೆ. ವೀಕ್ಷಕರು ಏರ್ ಶೋ ಸೆರೆಹಿಡಿಯಲು ಕ್ಯಾಮರಾಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಏರ್ ಶೋನಲ್ಲಿ ಡ್ರೋನ್‌ಗಳಿಗೆ ಇಲ್ಲ ಅವಕಾಶ
ಏರ್ ಶೋನಲ್ಲಿ ಯಾವುದೇ ಕಾರಣಕ್ಕೂ ಡ್ರೋನ್‌ಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಆಯೋಜಕರು ಖಡಕ್ ಆಗಿ ತಿಳಿಸಿದ್ದಾರೆ. ಯಲಹಂಕ ವಾಯುನೆಲೆ ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಿರುವುದರಿಂದ ಏರ್ ಶೋ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಿದ್ದಾರೆ.
ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ
ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು.ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ.


Click it and Unblock the Notifications