ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ! ಹೌದು,ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಫೆಬ್ರವರಿ 8 ರಂದು ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದ್ದು,ತನಿಖೆ ಆರಂಭವಾಗಿದೆ. ಸೋಮವಾರ ನಗರದಲ್ಲಿ ಏರೋ ಇಂಡಿಯಾ 2025 ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಬಾಂಬ್ ಬೆದರಿಕೆಯ ಸಂದೇಶ [email protected] ನಿಂದ ಬಂದಿದೆ, ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಬರುವ ವಿಮಾನಗಳ ಮೇಲೆ ಡ್ರೋನ್ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದೆ.

ಇಮೇಲ್‌ನಲ್ಲಿ ಇರುವ ಸಂದೇಶವೇನು?
ಬಸವರಾಜ್ ಬೊಮ್ಮಾಯಿ (ಸಂಸದ ಮಾಜಿ ಮುಖ್ಯಮಂತ್ರಿ ಕರ್ನಾಟಕ) ಅವರಿಂದ ನನ್ನ ಪತ್ರಕ್ಕೆ ಯಾವುದೇ ಉತ್ತರ ಸಿಗದಿದ್ದರೆ, ಬೆಂಗಳೂರು, ಚೆನ್ನೈ ಅಥವಾ ಕೇರಳ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಮೇಲೆ ಡ್ರೋನ್ ದಾಳಿ ನಡೆಯಲಿದೆ ಎಂಬ ಸಂದೇಶ ಬಂದಿದೆ.
ವಿಮಾನ ನಿಲ್ದಾಣ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 125, 351 (ಕ್ರಿಮಿನಲ್ ಬೆದರಿಕೆ) ಮತ್ತು 353 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಈ ಬಗ್ಗೆ ತನಿಖೆಗಳು ನಡೆಯುತ್ತಿವೆ.
ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿ ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಇರಲಿದೆ.
ಪ್ರದರ್ಶನ ಸಮಯಗಳ ವಿವರ
ಏರೋ ಇಂಡಿಯಾ 2025 ಪ್ರತಿದಿನ ಬೆಳಿಗ್ಗೆ 9.00 ರಿಂದ ಸಂಜೆ 6.00 ರವರೆಗೆ ನಡೆಯಲಿದ್ದು, ಪ್ರದರ್ಶನಗಳನ್ನು ಅನ್ವೇಷಿಸಲು, ಕಾರ್ಯಾಗಾರಗಳಿಗೆ ಹಾಜರಾಗಲು ಮತ್ತು ಅದ್ಭುತವಾದ ವೈಮಾನಿಕ ಪ್ರದರ್ಶನದ ಆನಂದವನ್ನು ಅನುಭವಿಸಲು ಸಂದರ್ಶಕರಿಗೆ ಸಾಕಷ್ಟು ಸಮಯವನ್ನು ನೀಡಲಾಗಿದೆ.
ಫೆಬ್ರವರಿ 13 ಮತ್ತು 14 ರಂದು, ಸಾರ್ವಜನಿಕರಿಗೆ ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಹಾರಾಟಗಳ ಪ್ರದರ್ಶನಗಳು ನಡೆಯಲಿವೆ.
ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್
ಏರೋ ಶೋ ಸಂದರ್ಶಕರು ತಮ್ಮ ಪ್ರವೇಶ ವಲಯಗಳ ಆಧಾರದ ಮೇಲೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ನಿಲುಗಡೆ ಮಾಡಬಹುದು.ಉಚಿತ ಪಾರ್ಕಿಂಗ್ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್ ಲಭ್ಯವಿದೆ.ಬಿಎಂಟಿಸಿ ಜಿಕೆವಿಕೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದ ನಡುವೆ ಉಚಿತ ಎಸಿ ಶಟಲ್ ಬಸ್‌ಗಳನ್ನು ಒದಗಿಸುತ್ತದೆ.
ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ
ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು. ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ.
ಈ ಬಾರಿಯ ಏರ್ ಶೋ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆ ರೂಪಿಸಲು ಮತ್ತು ದೇಶೀಯ ಪ್ರಕ್ರಿಯೆಯನ್ನು ವೇಗವಾಗಿ ಹುಡುಕಲು ಕೆಲವು ಯೋಜನೆ ರೂಪಿಸಲಾಗಿದೆ. ಈ ಭಾಗವಾಗಿ ರಕ್ಷಣಾ ಸಚಿವರ ಕಾನ್ಕ್ಲೇವ್, ಉದ್ಯಮ ಸಂಸ್ಥೆಗಳಲ್ಲಿನ ಸಿಇಒಗಳ ಚಿಂತನ ಮಂಥನ ಸಭೆ ಹಾಗೂ ದೇಶೀಯ ಉತ್ಪನ್ನ ಸಾಮರ್ಥ್ಯಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.


Click it and Unblock the Notifications