Aero India 2025: ಏರ್ ಶೋನಲ್ಲಿ ಭಾಗವಹಿಸಬೇಕಾ? ದಿನಾಂಕ, ಟಿಕೆಟ್ ಬೆಲೆ, ಬುಕಿಂಗ್ ಬಗ್ಗೆ ತಪ್ಪದೇ ತಿಳಿಯಿರಿ

ಲೋಹದ ಹಕ್ಕಿಗಳ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು,ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ.ಬನ್ನಿ,ಈ ಬಾರಿಯ ಏರೋ ಇಂಡಿಯಾ 2025 ವಿಶೇಷತೆಗಳೇನು? ಎಷ್ಟು ದಿನ ಏರ್ ಶೋ ನಡೆಯಲಿದೆ? ಟಿಕೆಟ್ ಬುಕಿಂಗ್ ಹೇಗೆ? ಟಿಕೆಟ್ ದರವೆಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೌದು,ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ.

ಏರ್ ಶೋ 2025: ದಿನಾಂಕ, ಟಿಕೆಟ್ ಬೆಲೆ, ಬುಕಿಂಗ್ ಬಗ್ಗೆ ತಿಳಿಯಿರಿ

ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಥೀಮ್‌

ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಥೀಮ್‌ನೊಂದಿಗೆ, ಈ ಪ್ರತಿಷ್ಠಿತ ಕಾರ್ಯಕ್ರಮವು ಭಾರತೀಯ ಮತ್ತು ಅಂತರರಾಷ್ಟ್ರೀಯ ಏರೋಸ್ಪೇಸ್ ಕಂಪನಿಗಳ ನಡುವೆ ಪ್ರಮುಖ ಸಹಯೋಗಗಳನ್ನು ಬೆಳೆಸಲು, ಜಾಗತಿಕ ಮೌಲ್ಯ ಸರಪಳಿಯಲ್ಲಿ ಹೊಸ ಹಾದಿಗಳನ್ನು ತೆರೆಯಲು ಮತ್ತು ಭಾರತದ ದೇಶೀಕರಣ ಪ್ರಯತ್ನಗಳನ್ನು ವೇಗಗೊಳಿಸಲು ಏರೋ ಶೋ ಸಜ್ಜಾಗಿದೆ.

ಏರೋ ಇಂಡಿಯಾದ ಈ 15 ನೇ ಆವೃತ್ತಿಯು ಈ ಬಾರಿ ದಾಖಲೆ ಮೈಲಿಗಲ್ಲುನ್ನು ಸೃಷ್ಟಿಸಲಿದೆ. ಜಾಗತಿಕ ಏರೋಸ್ಪೇಸ್ ನಾಯಕರು, ರಕ್ಷಣಾ ತಜ್ಞರು ಮತ್ತು ಉದ್ಯಮದ ಪ್ರವರ್ತಕರು ಒಟ್ಟಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲು, ನವೀನ ಪರಿಹಾರಗಳನ್ನು ಅನ್ವೇಷಿಸಲು ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳನ್ನು ನಿರ್ಮಿಸಲು ಒಗ್ಗೂಡುತ್ತಾರೆ.

ಈ ಕಾರ್ಯಕ್ರಮವು ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಸಾರುತ್ತಾದೆ.ಈ ಬಾರಿಯ ಏರೋ ಶೋ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ ಮತ್ತು ಏರೋಸ್ಪೇಸ್ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತದೆ.

ಏರೋ ಇಂಡಿಯಾ 2025 ರ ಪ್ರಮುಖ ಅಂಶಗಳು

ನೆಟ್‌ವರ್ಕಿಂಗ್ ಅವಕಾಶಗಳು: ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದಲ್ಲಿ ಉನ್ನತ ಜಾಗತಿಕ ಮತ್ತು ಭಾರತೀಯ ಉದ್ಯಮಗಳೊಂದಿಗೆ ತೊಡಗಿಸಿಕೊಳ್ಳಿ.

ಹೊಸ ರೀತಿಯ ಪ್ರದರ್ಶನ: ವಾಯುಯಾನ, ರಕ್ಷಣಾ ತಂತ್ರಜ್ಞಾನಗಳು ಮತ್ತು ಉತ್ಪಾದನೆಯಲ್ಲಿನ ಕ್ರಾಂತಿಕಾರಿ ಪ್ರಗತಿಗೆ ಸಾಕ್ಷಿಯಾಗಿಯಾಗಲಿದೆ.

ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳು: ಏರೋಸ್ಪೇಸ್ ವಲಯದಲ್ಲಿ ಸಹಯೋಗ, ಜಂಟಿ ಉದ್ಯಮಗಳು ಮತ್ತು ವ್ಯಾಪಾರ ಬೆಳವಣಿಗೆಗೆ ಹೊಸ ಮಾರ್ಗಗಳಿಗೆ ಅವಕಾಶವನ್ನು ಕಲ್ಲಿಸುತ್ತದೆ.

ದೇಶೀಕರಣದತ್ತ ಗಮನ: ಏರೋಸ್ಪೇಸ್ ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಭಾರತದ ಪ್ರಯತ್ನಗಳನ್ನು ಹೆಚ್ಚು ಮಾಡುತ್ತದೆ.

ಏರೋಸ್ಪೇಸ್ ಉದ್ಯಮವು ವೇಗವಾಗಿ ಬೆಳವಣೆಯಾಗುತ್ತಿದೆ.ಏರೋ ಇಂಡಿಯಾ 2025 ವ್ಯವಹಾರಗಳಿಗೆ ಸಂಪರ್ಕ ಸಾಧಿಸಲು, ಸಹಯೋಗಿಸಲು ಮತ್ತು ಹೊಸದನ್ನು ಸಾಧಿಸಲು ಒಂದು ಅಪ್ರತಿಮ ವೇದಿಕೆಯನ್ನು ನೀಡುತ್ತದೆ. ಈ ಕಾರ್ಯಕ್ರಮವು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ, ಮೇಕ್ ಇನ್ ಇಂಡಿಯ ಉಪಕ್ರಮವನ್ನು ಉತ್ತೇಜಿಸುವಲ್ಲಿ ಮತ್ತು ಭಾರತದಲ್ಲಿ ಸ್ವಾವಲಂಬಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯ ದೃಷ್ಟಿಕೋನವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ

ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು. ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ. ಈ ಬಾರಿಯ ಏರ್ ಶೋ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆ ರೂಪಿಸಲು ಮತ್ತು ದೇಶೀಯ ಪ್ರಕ್ರಿಯೆಯನ್ನು ವೇಗವಾಗಿ ಹುಡುಕಲು ಕೆಲವು ಯೋಜನೆ ರೂಪಿಸಲಾಗಿದೆ. ಈ ಭಾಗವಾಗಿ ರಕ್ಷಣಾ ಸಚಿವರ ಕಾನ್ಕ್ಲೇವ್, ಉದ್ಯಮ ಸಂಸ್ಥೆಗಳಲ್ಲಿನ ಸಿಇಒಗಳ ಚಿಂತನ ಮಂಥನ ಸಭೆ ಹಾಗೂ ದೇಶೀಯ ಉತ್ಪನ್ನ ಸಾಮರ್ಥ್ಯಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.

ಏರ್ ಶೋ ವೇಳೆಯಲ್ಲಿ ಭಾರತದ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಕ್ಷೇತದ ಸಹಭಾಗಿತ್ವದ ಕುರಿತು ಬಿಆರ್ಐಡಿಜಿಇ ಅಂತರ್‌ರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕದ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದಕ್ಕಾಗಿ ಸಮಾವೇಶವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಲ ಏರೋ ಶೋ ಹಲವಾರು ಹೊಸ ಹೊಸ ಯೋಜನೆಗಳು, ಸ್ವದೇಶಿ ಉದ್ಯಮಕ್ಕೆ ಬೆಂಬಲ,ಮೇಕ್ ಇನ್ ಇಂಡಿಯಾ, ಹೀಗೆ ಹಲವಾರು ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ.ಈ ಮೂಲಕ 15ನೇ ಆವೃತ್ತಿಯು ಈ ಬಾರಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+