ಲೋಹದ ಹಕ್ಕಿಗಳ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು,ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ.ಬನ್ನಿ,ಈ ಬಾರಿಯ ಏರೋ ಇಂಡಿಯಾ 2025 ವಿಶೇಷತೆಗಳೇನು? ಎಷ್ಟು ದಿನ ಏರ್ ಶೋ ನಡೆಯಲಿದೆ? ಯಾವ ದಿನ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಹೌದು,ಏರೋ ಇಂಡಿಯಾ 2025 ಇದೇ ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿದೆ.ಸ್ವದೇಶೀ ಉದ್ಯಮಕ್ಕೆ ಹೆಚ್ಚು ಅವಕಾಶಗಳನ್ನು ಸೃಷ್ಠಿಸುವುದು ಇದರ ಉದ್ದೇಶವಾಗಿದೆ.

ಏರೋ ಶೋ ದಿನ ಬೆಂಗಳೂರು ವಿಮಾನ ನಿಲ್ದಾಣ ಬಂದ್
2025ರ ಏರೋ ಇಂಡಿಯಾ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನವನ್ನು ಫೆಬ್ರವರಿ 5ರಿಂದ 14ರವರೆಗೆ ಕೆಲ ಅವಧಿಗಳಲ್ಲಿ ವಾಯುಪ್ರದೇಶವನ್ನು ಮುಚ್ಚುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಿಳಿಸಿದೆ.ಸದ್ಯ ವಾಯುಪ್ರದೇಶವನ್ನು ಮುಚ್ಚುವ ಪರಿಷ್ಕೃತ ಸಮಯ ಪಟ್ಟಿಯನ್ನು ಕೆಐಎ ಪ್ರಕಟಣೆಯಲ್ಲಿ ತಿಳಿಸಿದೆ.
ಏರೋ ಶೋ ಯಾವ ದಿನದಂದು ನಡೆಯುತ್ತೆ?
ಫೆಬ್ರವರಿ 5, 6 ಮತ್ತು 8ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 3ರಿಂದ 4.30 ರವರೆಗೆ ವಾಯುಪ್ರದೇಶವನ್ನು ಬಂದ್ ಆಗಲಿದೆ. ಹಾಗೆಯೇ ಫೆಬ್ರವರಿ 7 ಮತ್ತು 9 ರಂದು ಬೆಳಿಗ್ಗೆ 9 ರಿಂದ 11ರವರೆಗೆ ಫೆಬ್ರವರಿ 7ರಂದು ಮಧ್ಯಾಹ್ನ 3ರಿಂದ ಸಂಜೆ 4.30ರವರೆಗೆ ವಾಯುಪ್ರದೇಶವನ್ನು ಸಹ ಮುಚ್ಚಲಾಗುವುದು ಎಂದು ಮಾಹಿತಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 10ರಂದು ಬೆಳಿಗ್ಗೆ 9ರಿಂದ 11.30ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 3.30ರವರೆಗೆ ಮುಚ್ಚಲಾಗುವುದು. ಫೆಬ್ರವರಿ 11 ಮತ್ತು 12ರಂದು ಮಧ್ಯಾಹ್ನ 12ರಿಂದ 2.30ರವರೆಗೆ ಮುಚ್ಚಲಾಗುವುದು.ಫೆಬ್ರವರಿ 13 ಮತ್ತು 14ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ವಾಯುಪ್ರದೇಶವನ್ನು ಮುಚ್ಚಲಾಗುವುದು.
ವಿಮಾನ ವೇಳಾಪಟ್ಟಿಯ ವಿವರ
ಪರಿಷ್ಕೃತ ಅಥವಾ ಹೊಸ ವಿಮಾನ ವೇಳಾಪಟ್ಟಿಯ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಕೆಐಎ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದೆ. ಫೆಬ್ರವರಿ 5ರಿಂದ 14ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ.
ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ
ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು. ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ. ಈ ಬಾರಿಯ ಏರ್ ಶೋ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆ ರೂಪಿಸಲು ಮತ್ತು ದೇಶೀಯ ಪ್ರಕ್ರಿಯೆಯನ್ನು ವೇಗವಾಗಿ ಹುಡುಕಲು ಕೆಲವು ಯೋಜನೆ ರೂಪಿಸಲಾಗಿದೆ. ಈ ಭಾಗವಾಗಿ ರಕ್ಷಣಾ ಸಚಿವರ ಕಾನ್ಕ್ಲೇವ್, ಉದ್ಯಮ ಸಂಸ್ಥೆಗಳಲ್ಲಿನ ಸಿಇಒಗಳ ಚಿಂತನ ಮಂಥನ ಸಭೆ ಹಾಗೂ ದೇಶೀಯ ಉತ್ಪನ್ನ ಸಾಮರ್ಥ್ಯಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಏರ್ ಶೋ ವೇಳೆಯಲ್ಲಿ ಭಾರತದ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಕ್ಷೇತದ ಸಹಭಾಗಿತ್ವದ ಕುರಿತು ಬಿಆರ್ಐಡಿಜಿಇ ಅಂತರ್‌ರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕದ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದಕ್ಕಾಗಿ ಸಮಾವೇಶವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ಈ ಸಲ ಏರೋ ಶೋ ಹಲವಾರು ಹೊಸ ಹೊಸ ಯೋಜನೆಗಳು, ಸ್ವದೇಶಿ ಉದ್ಯಮಕ್ಕೆ ಬೆಂಬಲ,ಮೇಕ್ ಇನ್ ಇಂಡಿಯಾ, ಹೀಗೆ ಹಲವಾರು ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ.ಈ ಮೂಲಕ 15ನೇ ಆವೃತ್ತಿಯು ಈ ಬಾರಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.


Click it and Unblock the Notifications