ಲೋಹದ ಹಕ್ಕಿಗಳ ಹಾರಾಟ ಇಂದಿನಿಂದ ಶುರು..ಹೌದು,ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ.
ಹೌದು,15ನೇ ಆವೃತ್ತಿಯ ಏರೋ ಇಂಡಿಯಾ (Aero india 2025) ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿದೆ. ಯಲಹಂಕದ ವಾಯು ನೆಲೆಯಲ್ಲಿ ನಡೆಯಲಿದೆ. ಇದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದೆ.ಈ ಬಾರಿಯ ಏರೋ ಶೋ ಮೇಲೆ ಹಲವು ದಾಖಲೆಗಳ ನೀರಿಕ್ಷೆಗಳು ಇವೆ.

ಏಷ್ಯಾದ ಅತಿದೊಡ್ಡ ಏರೋ ಶೋ ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಘೋಷ ವಾಕ್ಯದೊಂದಿಗೆ 5 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವಾಗಿದೆ.ನಾಳೆಯಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ,ವಿದೇಶದ ಗಣ್ಯರು ಭಾಗವಹಿಸುತ್ತಾರೆ.ದೇಶ,ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮಾಯಾಲೋಕ ಸೃಷ್ಟಿ ಮಾಡಲು ಈ ಬಾರಿಯ ಏರೋ ಶೋ ಭಾರೀ ಸಿದ್ದತೆಯನ್ನು ಮಾಡಿಕೊಂಡಿದೆ.
ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ
ಏರೋ ಶೋ ಕಾರ್ಯಕ್ರಮವನ್ನು ಭಾರತೀಯ ರಕ್ಷಣಾ ಇಲಾಖೆಯ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಏರೋ ಶೋ ಮೊದಲ ಮೂರು ದಿನ ಅಂದರೆ ಫೆಬ್ರವರಿ 10,11,12ರವರೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ದಿನವಾಗಿರುತ್ತದೆ.
13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ
ಏರೋ ಶೋ ಕಾರ್ಯಕ್ರಮ 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನು ನೀಡಲಾಗಿದೆ.ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ.
ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್
ಏರೋ ಶೋ ಸಂದರ್ಶಕರು ತಮ್ಮ ಪ್ರವೇಶ ವಲಯಗಳ ಆಧಾರದ ಮೇಲೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ನಿಲುಗಡೆ ಮಾಡಬಹುದು.ಉಚಿತ ಪಾರ್ಕಿಂಗ್ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್ ಲಭ್ಯವಿದೆ.ಬಿಎಂಟಿಸಿ ಜಿಕೆವಿಕೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದ ನಡುವೆ ಉಚಿತ ಎಸಿ ಶಟಲ್ ಬಸ್‌ಗಳನ್ನು ಒದಗಿಸುತ್ತದೆ.
ಪಾವತಿಸಿದ ಪಾರ್ಕಿಂಗ್ ADVA (ಏರ್ ಡಿಸ್ಪ್ಲೇ ವೀಕ್ಷಣಾ ಪ್ರದೇಶ)
ಪಾರ್ಕಿಂಗ್ - ಗೇಟ್ 8 ಮತ್ತು 9 ಮೂಲಕ ಪ್ರವೇಶ. ದೇಶೀಯ ಪ್ರದೇಶದ ಪಾರ್ಕಿಂಗ್ - ಗೇಟ್ 5 ಮೂಲಕ ಪ್ರವೇಶ. ಏರೋ ಇಂಡಿಯಾ 2025 ನೋಂದಣಿ ಪ್ರಕ್ರಿಯೆ,ಟಿಕೆಟ್‌ಗಳು,ಸ್ಥಳ ಮತ್ತು ಇನ್ನೂ ಹೆಚ್ಚಿನದನ್ನು ಪರಿಶೀಲಿಸಿ.
ಪಾರ್ಕಿಂಗ್ ನಿಷೇಧಿತ ಸ್ಥಳಗಳು
ಈ ಕೆಳಗಿನ ಮಾರ್ಗಗಳಲ್ಲಿ ಎಲ್ಲಾ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಾಗೇನಹಳ್ಳಿಯಿಂದ ಗಂಟಿಗಾನಹಳ್ಳಿ ವೃತ್ತದ ಮೂಲಕ ಫೋರ್ಡ್ ಶೋ ರೂಮ್ (ಬಿಬಿ ರಸ್ತೆ), ಮೇಖ್ರಿ ವೃತ್ತದಿಂದ ದೇವನಹಳ್ಳಿಗೆ ಕಡೆಯಿಂದ. ಬಾಗಲೂರು ಮುಖ್ಯರಸ್ತೆಯ ಮೂಲಕ ಸಾತನೂರಿನ ಕಡೆಗೆ ಬಾಗಲೂರು ಕ್ರಾಸ್,ನಾಗವಾರ ಜಂ. ಮೂಲಕ - ಥಣಿಸಂದ್ರ ಮುಖ್ಯ ರಸ್ತೆಯಿಂದ ರೇವಾ ಕಾಲೇಜಿಗೆ FTI ಜಂಕ್ಷನ್ ನಿಂದ ಹೆಣ್ಣೂರು ಕ್ರಾಸ್, ಹೆಣ್ಣೂರು ಕ್ರಾಸ್ ನಿಂದ ಬೇಗೂರು ಹಿಂಭಾಗದ ಗೇಟ್,
ನಾಗೇನಹಳ್ಳಿ ಗೇಟ್ ನಿಂದ ಯಲಹಂಕ ವೃತ್ತಕ್ಕೆ, MVIT ಕ್ರಾಸ್ ನಿಂದ ನಾರಾಯಣಪುರ ರೈಲ್ವೆ ಕ್ರಾಸ್ ವರೆಗೆ, ಕೋಗಿಲು ಕ್ರಾಸ್ ನಿಂದ ಕಣ್ಣೂರು ಜಂಕ್ಷನ್ ವರೆಗೆ, ಮತ್ತಿಕೆರೆ ಕ್ರಾಸ್‌ನಿಂದ ಉಣ್ಣಿಕೃಷ್ಣನ್ ಜಂಕ್ಷನ್, ಜಾಲಹಳ್ಳಿ ಕ್ರಾಸ್ ನಿಂದ ಗಂಗಮ್ಮ ವೃತ್ತ.
ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ
ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು. ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ.
ಈ ಬಾರಿಯ ಏರ್ ಶೋ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆ ರೂಪಿಸಲು ಮತ್ತು ದೇಶೀಯ ಪ್ರಕ್ರಿಯೆಯನ್ನು ವೇಗವಾಗಿ ಹುಡುಕಲು ಕೆಲವು ಯೋಜನೆ ರೂಪಿಸಲಾಗಿದೆ. ಈ ಭಾಗವಾಗಿ ರಕ್ಷಣಾ ಸಚಿವರ ಕಾನ್ಕ್ಲೇವ್, ಉದ್ಯಮ ಸಂಸ್ಥೆಗಳಲ್ಲಿನ ಸಿಇಒಗಳ ಚಿಂತನ ಮಂಥನ ಸಭೆ ಹಾಗೂ ದೇಶೀಯ ಉತ್ಪನ್ನ ಸಾಮರ್ಥ್ಯಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಏರ್ ಶೋ ವೇಳೆಯಲ್ಲಿ ಭಾರತದ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಕ್ಷೇತದ ಸಹಭಾಗಿತ್ವದ ಕುರಿತು ಬಿಆರ್ಐಡಿಜಿಇ ಅಂತರ್‌ರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕದ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದಕ್ಕಾಗಿ ಸಮಾವೇಶವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ಈ ಸಲ ಏರೋ ಶೋ ಹಲವಾರು ಹೊಸ ಹೊಸ ಯೋಜನೆಗಳು, ಸ್ವದೇಶಿ ಉದ್ಯಮಕ್ಕೆ ಬೆಂಬಲ,ಮೇಕ್ ಇನ್ ಇಂಡಿಯಾ, ಹೀಗೆ ಹಲವಾರು ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ.ಈ ಮೂಲಕ 15ನೇ ಆವೃತ್ತಿಯು ಈ ಬಾರಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.


Click it and Unblock the Notifications