For Quick Alerts
ALLOW NOTIFICATIONS  
For Daily Alerts

ಕೊರೊನಾಯಿಂದ ಕಂಗೆಟ್ಟಿದೆ ಚೀನಾದ ಆರ್ಥಿಕತೆ: 44 ವರ್ಷದ ಬಳಿಕ ಈ ದುಸ್ಥಿತಿ

|

ಇಡೀ ವಿಶ್ವಕ್ಕೆ ಕೊರೊನಾವೈರಸ್ ಹರಡಿಸಿ ನಲುಗುವಂತೆ ಮಾಡಿರುವ ಚೀನಾ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದೆ. ಆದರೆ 2020ರಲ್ಲಿ ಚೀನಾದ ಆರ್ಥಿಕತೆ ಬೆಳೆಯುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.

 

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟದಿಂದ ಚೇತರಿಸಿಕೊಳ್ಳಲು ಚೀನಾ ತಾತ್ಕಾಲಿಕವಾಗಿ ಕಷ್ಟವನ್ನು ಎದುರಿಸುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆಯು ಅನಿಶ್ಚಿತತೆಯನ್ನು ಎದುರಿಸಲಿದೆ. ಇದರಿಂದ 2020 ರಲ್ಲಿ ಬೆಳವಣಿಗೆಯನ್ನು ಸಂಪೂರ್ಣವಾಗಿ ಇಳಿಕೆಯಾಗಬಹುದು ಹಾಗೂ ಲಕ್ಷಾಂತರ ಉದ್ಯೋಗಗಳು ಅಪಾಯಕ್ಕೆ ಸಿಲುಕಬಹುದು ಎಂದು ಅಂದಾಜಿಸಲಾಗಿದೆ.

ಚೀನಾದ ಜಿಡಿಪಿ 1 ರಿಂದ 2 ಪರ್ಸೆಂಟ್ ಇಳಿಕೆ ಸಾಧ್ಯತೆ

ಚೀನಾದ ಜಿಡಿಪಿ 1 ರಿಂದ 2 ಪರ್ಸೆಂಟ್ ಇಳಿಕೆ ಸಾಧ್ಯತೆ

ಚೀನಾದ ಅರ್ಥಶಾಸ್ತ್ರಜ್ಞರು ಸೇರಿದಂತೆ ವಿಶ್ಲೇಷಕರ ಇತ್ತೀಚಿನ ಅಂದಾಜಿನ ಪ್ರಕಾರ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಲ್ಲಿ ಈ ವರ್ಷ ಜಿಡಿಪಿ ಬೆಳವಣಿಗೆಯು 1 ಪರ್ಸೆಂಟ್ ಅಥವಾ 2 ಪರ್ಸೆಂಟ್‌ಗೆ ಇಳಿಕೆಯಾಗಬಹುದು. ಈ ವರ್ಷದ ಸುಮಾರು 14 ಟ್ರಿಲಿಯನ್ ಆರ್ಥಿಕತೆಯು ಬೆಳೆಯುವುದಿಲ್ಲ ಎಂದು ಚೀನಾಗೆ ಈ ಹಿಂದೆಯೇ ವಿಶ್ವ ಬ್ಯಾಂಕ್ ಎಚ್ಚರಿಸಿತ್ತು.

 44 ವರ್ಷಗಳಲ್ಲಿ ಅತ್ಯಂತ ಕನಿಷ್ಟ ಪ್ರಮಾಣ

44 ವರ್ಷಗಳಲ್ಲಿ ಅತ್ಯಂತ ಕನಿಷ್ಟ ಪ್ರಮಾಣ

ಚೀನಾದ ಆರ್ಥಿಕ ಬೆಳವಣಿಗೆ ಈ ವರ್ಷ ಹಿಂದೆದೂ ಕಾಣದಂತಹ ಕುಸಿತವನ್ನು ಕಾಣಲಿದೆ. ಕಳೆದ 44 ವರ್ಷಗಳಲ್ಲಿ ಅತ್ಯಂತ ದುರ್ಬಲ ಬೆಳವಣಿಗೆ ಇದಾಗಿದ್ದು, 2008-09ರ ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಮತ್ತು 1990 ರಲ್ಲಿ ಟಿಯಾನನ್ಮೆನ್ ಸ್ಕ್ವೇರ್ ಹತ್ಯಾಕಾಂಡದ ನಂತರ ಚೀನಾ ಈ ಮಟ್ಟಿನ ಆರ್ಥಿಕ ಹಿಂಜರಿತವನ್ನು ಎದುರಿಸುವ ಸಾಧ್ಯತೆ ಇದೆ.

2020ರ ಜಿಡಿಪಿ ಬೆಳವಣಿಗೆಯನ್ನು ಅಂದಾಜು ಮಾಡಲು ಚೀನಾ ಹಿಂದೇಟು
 

2020ರ ಜಿಡಿಪಿ ಬೆಳವಣಿಗೆಯನ್ನು ಅಂದಾಜು ಮಾಡಲು ಚೀನಾ ಹಿಂದೇಟು

ಯುಬಿಎಸ್ ಮತ್ತು ಗೋಲ್ಡ್ಮನ್ ಸ್ಯಾಚ್ಸ್ನ ವಿಶ್ಲೇಷಕರು ಈ ವರ್ಷದ ಚೀನಾದ ಬೆಳವಣಿಗೆಯ ತಮ್ಮ ಅಂದಾಜುಗಳನ್ನು ಕ್ರಮವಾಗಿ 1.5 ಪರ್ಸೆಂಟ್‌ನಿಂದ 3 ಪರ್ಸೆಂಟ್‌ಗೆ ಇಳಿಸಿದ್ದಾರೆ.

1985 ರಿಂದ ಪ್ರತಿವರ್ಷ ವಾರ್ಷಿಕ ಜಿಡಿಪಿ ಗುರಿಗಳನ್ನು ನಿಗದಿಪಡಿಸುವ ಚೀನಾ, ಈ ಬಾರಿ ಅಂದಾಜು ಜಿಡಿಪಿ ದರವನ್ನು ನೀಡಲು ಹೆದರುತ್ತಿದೆ. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಯ ನೀತಿ ನಿರೂಪಕರ ಪ್ರಕಾರ ಸರ್ಕಾರವು 2020 ಕ್ಕೆ ಗುರಿ ನಿಗದಿಪಡಿಸಬಾರದು ಎಂದು ಹೇಳಿದ್ದಾರೆ.

"4 ಪರ್ಸೆಂಟ್ ಮತ್ತು 5 ಪರ್ಸೆಂಟ್‌ರ ನಡುವಿನ ಬೆಳವಣಿಗೆಯನ್ನು ಸಹ ಅರಿತುಕೊಳ್ಳುವುದು ಕಷ್ಟ. ಬೆಳವಣಿಗೆಯು 1 ಪರ್ಸೆಂಟ್ ಅಥವಾ 2 ಪರ್ಸೆಂಟ್‌ರಷ್ಟು ಇಳಿಯಬಹುದು ಎಂದು ಹಲವಾರು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲವೂ ಸಾಧ್ಯವಿದೆ '' ಎಂದು ಹಣಕಾಸು ನೀತಿ ಸಮಿತಿಯ ಸದಸ್ಯ ಮಾ ಜೂನ್ ತಿಳಿಸಿದ್ದಾರೆ.

 

ಆರ್ಥಿಕತೆ ಚೇತರಿಕೆಗೆ 3 ಟ್ರಿಲಿಯನ್ ಯುವಾನ್ ಘೋಷಣೆ

ಆರ್ಥಿಕತೆ ಚೇತರಿಕೆಗೆ 3 ಟ್ರಿಲಿಯನ್ ಯುವಾನ್ ಘೋಷಣೆ

ಕಳೆದ ಎರಡು ತಿಂಗಳಿನಲ್ಲಿ ಚೀನಾ ಕೊರೊನಾವೈರಸ್‌ ನಿಂದ ಭಾರೀ ಪರಿಣಾಮ ಎದುರಿಸಿದ್ದು, ಕೈಗಾರಿಗಳು ಮುಚ್ಚಿವೆ ಹಾಗೂ ಉದ್ಯಮಗಳು ನಷ್ಟ ಅನುಭವಿಸಿವೆ. ಜೊತೆಗೆ ಲಕ್ಷಾಂತರ ಜನರು ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಚೀನಾದ ಕ್ಯಾಬಿನೆಟ್ ಮಂಗಳವಾರ 3 ಟ್ರಿಲಿಯನ್ ಯುವಾನ್ (423 ಬಿಲಿಯನ್ ಡಾಲರ್) ಹಣವನ್ನು ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಆರ್ಥಿಕ ಸಹಾಯವಾಗಿ ಘೋಷಿಸಿದೆ.

ಈ ಮೂಲಕ ಚೀನಾಕ್ಕೆ ಕೊರೊನಾವೈರಸ್‌ನಿಂದಾಗಿ ಆಗುತ್ತಿರುವ ಆರ್ಥಿಕ ನಷ್ಟ ನಿಧಾನವಾಗಿ ಪ್ರಭಾವ ಬೀರುತ್ತಿದೆ. ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆ ಎಂದು ಬೀಗುತ್ತಿದ್ದ ಚೀನಿಯರು ಸಂಕಷ್ಟದ ಸ್ಥಿತಿ ಎದುರಿಸುವ ಪರಿಸ್ಥಿತಿ ಎದುರಾಗಿದೆ.

 

English summary

After 44 Years China Economy May Not Grow At In 2020

China economy my down 1 or 2 Percent in 2020 says economist.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X