ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪಗಳನ್ನು ಮಾಡಿ ವರದಿಯನ್ನು ಮಾಡಿದ ಬಳಿಕ ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಸ್ಟಾಕ್ ಭಾರೀ ಇಳಿಕೆಯನ್ನು ಕಾಣುತ್ತಿದೆ. ಬುಧವಾರ ಸುಮಾರು 1 ಲಕ್ಷ ಕೋಟಿ ನಷ್ಟವನ್ನು ಕಂಡ ಬಳಿಕ ಶುಕ್ರವಾರ ಅದಾನಿ ಸ್ಟಾಕ್ ಸುಮಾರು ಶೇಕಡ 20ರಷ್ಟು ಕುಸಿತ ಕಂಡಿದೆ.
ಅದಾನಿ ಗ್ರೂಪ್‌ನ ಎಲ್ಲ 10 ಸ್ಟಾಕ್‌ಗಳು ಕೂಡಾ ರೆಡ್ ಝೋನ್‌ನಲ್ಲಿದೆ. ಅದಾನಿ ಗ್ಯಾಸ್ ಷೇರು ಎನ್‌ಎಸ್‌ಇಯಲ್ಲಿ ಶೇಕಡ 14.28ರಷ್ಟು ಇಳಿದರೆ, ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು ಶೇಕಡ 19.6ರಷ್ಟು ಕಳೆದುಕೊಂಡಿದೆ. ಸ್ಟಾಕ್ ದರವು 2,961.55 ರೂಪಾಯಿಗೆ ಇಳಿದಿದೆ. ಅದಾನಿ ಟ್ರಾನ್ಸ್‌ಮಿಷನ್ ಸ್ಟಾಕ್ ಎನ್‌ಎಸ್‌ಇಯಲ್ಲಿ ಶೇಕಡ 16ರಷ್ಟು ಇಳಿಕೆ ಕಂಡಿದ್ದು, 2,114.75 ರೂಪಾಯಿಗೆ ತಲುಪಿದೆ.
ಅದಾನಿ ಗ್ರೀನ್ ಎನರ್ಜಿ ಸ್ಟಾಕ್ ಎನ್‌ಎಸ್‌ಇಯಲ್ಲಿ ಶೇಕಡ 13ರಷ್ಟು ಕುಸಿದು 1,613.65 ರೂಪಾಯಿಗೆ ತಲುಪಿದೆ. ಅದಾನಿ ಗ್ರೂಪ್‌ನ ಪ್ಲಾಗ್‌ಶಿಪ್ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಎನ್‌ಎಸ್‌ಇಯಲ್ಲಿ ಶೇಕಡ 2.26ರಷ್ಟು ಕುಸಿದಿದೆ. ಅದಾನಿ ಪವರ್ ಷೇರು ಶೇಕಡ 5ರಷ್ಟು ಕೆಳಕ್ಕಿಳಿದು 248.05 ರೂಪಾಯಿಗೆ ಇಳಿದಿದೆ. ಅದಾನಿ ವಿಲ್ಮಾರ್ ಮತ್ತು ಎನ್‌ಡಿಟಿವಿ ಷೇರುಗಳು ಕೂಡಾ ಶೇಕಡ 5ರಷ್ಟು ಇಳಿದು ಕ್ರಮವಾಗಿ 517.30 ರೂಪಾಯಿ ಮತ್ತು 256.35 ರೂಪಾಯಿ ಆಗಿದೆ.

ಏನಿದು ಹಿಂಡನ್‌ಬರ್ಗ್ ವರದಿ, ಆರೋಪವೇನು?
ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪವನ್ನು ಮಾಡಿದೆ. ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ.
ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಅವರು ಸುಮಾರು 120 ಶತಕೋಟಿ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಅವರು ಕಳೆದ ಮೂರು ವರ್ಷಗಳಲ್ಲಿ 100 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅದಾನಿ ಗ್ರೂಪ್‌ನ ಷೇರು ಬೆಲೆಯ ಬೆಳವಣಿಗೆ ಪರಿಣಾಮವಾಗಿ ಏಳು ಪ್ರಮುಖ ವ್ಯಾಪಾರಿ ಕಂಪನಿಗಳ ಲಾಭ ಆ ಸಮಯದಲ್ಲಿ ಸರಾಸರಿ 819 ಪ್ರತಿಶತದಷ್ಟು ಹೆಚ್ಚಾಗಿದೆ. ಅದಾನಿ ಗ್ರೂಪ್ ಸರ್ಕಾರಿ ವಂಚನೆ ತನಿಖೆಗಳಿಗೂ ಒಳಪಟ್ಟಿದೆ. ಅದು ಒಟ್ಟು US$ 17 ಬಿಲಿಯನ್ ವೆಚ್ಚವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡಿದೆ.
ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications