ಜಾಗತಿಕವಾಗಿ ಉದ್ಯೋಗ ಕಡಿತದ ಪರ್ವ ಮುಂದುವರಿದಿರುವಂತೆ, ಗೂಗಲ್‌ನ ಮಾತೃ ಕಂಪನಿಯಾದ ಆಲ್ಬಾಬೆಟ್ ಇದೀಗ ತನ್ನ ಪ್ರಧಾನ ಕಚೇರಿಯಲ್ಲಿದ್ದ ಕೆಫೆಟೇರಿಯಾಗಳನ್ನು ಸ್ವಚ್ಚಗೊಳಿಸುವ ರೋಬೋಟ್‌ಗಳನ್ನು ಕೂಡಾ ಕೆಲಸದಿಂದ ತೆಗೆದು ಹಾಕಿದೆ. ಕಳೆದ ತಿಂಗಳಷ್ಟೇ ಟೆಕ್ ದೈತ್ಯ ಕಂಪೆನಿ 12000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ್ದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಆಲ್ಬಾಬೆಟ್‌ನ "ಎವರಿಡೇ ರೋಬೋಟ್ಸ್" ಪ್ರಾಜೆಕ್ಟ್‌ನಡಿ ಗೂಗಲ್‌ನ ಎಕ್ಸಿಪಿರಿಮೆಂಟ್ ಎಕ್ಸ್ ಲ್ಯಾಬೋರೇಟರಿಯನ್ನು ಸಿಇಒ ಸುಂದರ್ ಪಿಚ್ಚೈ ಮುಚ್ಚಿದ್ದಾರೆ.
ಇದು ಕಂಪನಿಯ ಕೆಫೆಟೇರಿಯಾಗಳನ್ನು ಸ್ವಚ್ಚಗೊಳಿಸಲು ಸಹಾಯ ಮಾಡಲೆಂದು ಒಂದು ಕೈಯ ಹಾಗೂ ಚಕ್ರಗಳನ್ನು ಹೊಂದಿರುವ 100 ರೋಬೋಟ್‌ಗಳನ್ನು ತರಬೇತುಗೊಳಿಸಿತ್ತು. ಅವುಗಳ ಪೈಕಿ ಗೂಗಲ್‌ನ ಬೇ ಏರಿಯಾಗಳಲ್ಲಿ ಸೇವೆಗಳಲ್ಲಿ ಉಪಯುಕ್ತ ಕೆಲಸಗಳನ್ನು ಮಾಡುತ್ತಿದ್ದ ಹಲವು ಮೂಲಮಾದರಿ ರೋಬೋಟ್‌ಗಳನ್ನು ಲ್ಯಾಬ್‌ಗಳಿಂದ ಬೇರೆಡೆಗೆ ಸಾಗಾಟ ಮಾಡಲಾಗಿದೆ.

ಈ ರೋಬೋಟ್‌ಗಳು ಟೇಬಲ್ ಕ್ಲೀನ್ ಮಾಡುವುದು, ತ್ಯಾಜ್ಯ ಮತ್ತು ಮರುಬಳಕೆಯ ವಸ್ತುಗಳನ್ನು ಬೇರ್ಪಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದವು. ಕೊವೀಡ್ ಸಾಂಕ್ರಾಮಿಕ ಸಮಯದಲ್ಲಿ ಕಾನ್ಪರೆನ್ಸ್ ರೂಮ್ ಸ್ವಚ್ಚಗೊಳಿಸಲು ಕೂಡಾ ಇವು ಸಹಾಯ ಮಾಡಿದ್ದವು. ರೋಬೋಟ್ ವಿಭಾಗವನ್ನು ಈಗ ಸ್ಥಗಿತಗೊಳಿಸಿರುವುದರಿಂದ ಇದರ ಕೆಲವು ತಂತ್ರಜ್ಞಾನವನ್ನು ಸಂಸ್ಥೆ ತನ್ನ ಇತರ ವಿಭಾಗಗಳಲ್ಲಿ ಬಳಸಿಕೊಳ್ಳಬಹುದು.
ಆಲ್ಫಾಬೆಟ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಕಲಿಕೆಗಾಗಿ ಸಮಗ್ರ ಹಾರ್ಡ್‌ವೇರ್ ಆಂಡ್ ಸಾಫ್ಟ್‌ವೇರ್ ಅಭಿವೃದ್ಧಿಗೆ ಹಣ ಖರ್ಚು ಮಾಡಿದ್ದು, ವರ್ಚುವಲ್‌ನಿಂದ ನಿಜ ಜಗತ್ತಿಗೆ ಜ್ಞಾನವನ್ನು ವರ್ಗಾಯಿಸುವ ಪ್ರಕ್ರಿಯೆಯೂ ಸೇರಿದೆ. ಈ ರೋಬೋಟ್‌ಗಳು ನಿಧಾನವಾಗಿ ತಮ್ಮ ಸುತ್ತಲಿನ ಪ್ರಪಂಚದ ಗ್ರಹಿಕೆಯನ್ನು ಪಡೆದುಕೊಂಡಿದ್ದವು.
ಜತೆಗೆ ಬಲವರ್ಧನೆಯ ಕಲಿಕೆ, ಸಹಯೋಗದ ಕಲಿಕೆ ಹಾಗೂ ಪ್ರದರ್ಶನದಿಂದ ಕಲಿಕೆಯಂಥ ಮೆಷಿನ್ ಕಲಿಕೆಯ ತಂತ್ರಗಳ ಸಂಯೋಜನೆ ಬಳಸಿಕೊಂಡು ಸಾಮಾನ್ಯ ಕೆಲಸಗಳನ್ನು ಕಾರ್ಯಗತಗೊಳಿಸುವಲ್ಲಿ ಹೆಚ್ಚು ಪ್ರಾವೀಣ್ಯತೆಯನ್ನು ಪಡೆದಿದ್ದವು. ಈ ನಡುವೆ ವೆಚ್ಚವನ್ನು ಮತ್ತಷ್ಟು ಕಡಿಮೆಗೊಳಿಸಲು ಗೂಗಲ್ ತನ್ನ ಕಚೇರಿಗೆ ಮರಳುತ್ತಿರುವ ಉದ್ಯೋಗಿಗಳಲ್ಲಿ ತಮ್ಮ ವರ್ಕ್ ಡೆಸ್ಕ್‌ಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿತ್ತು. ಆ ಮೂಲಕ ಕಚೇರಿ ಸ್ಥಳಾವಕಾಶವನ್ನು ಹೆಚ್ಚಿಸುವ ಪ್ರಯತ್ನ ಮಾಡಿದೆ.


Click it and Unblock the Notifications