ಈ ಹಿಂದೆಯೂ ಹಲವಾರು ಕಾರಣದಿಂದಾಗಿ ಬೇರೆ ಬೇರೆ ಬ್ಯಾಂಕ್‌ಗಳಿಗೆ ದಂಡವನ್ನು ವಿಧಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ದಂಡವನ್ನು ವಿಧಿಸಿದೆ. ಅದಾದ ಬಳಿಕ ಈಗ ಎರಡು ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್ ಮತ್ತು ಒಂದು ಎನ್‌ಬಿಎಫ್‌ಸಿ ಆದ ಬಜಾಜ್ ಫೈನಾನ್ಸ್‌ಗೆ ಆರ್‌ಬಿಐ ದಂಡವನ್ನು ವಿಧಿಸಿದೆ.
ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಕಾರಣವನ್ನು ನೀಡಿ ಈ ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ದಂಡ ವಿಧಿಸಿದೆ. ಇತ್ತೀಚೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಭಾರಿ 5.39 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ. ಅದಾದ ಬಳಿಕ ಮೂರು ಹಣಕಾಸು ಸಂಸ್ಥೆಗಳಿಗೆ ನೋಟಿಸ್ ಮೂಲಕ ಉತ್ತರ ಕೇಳಿ, ಪ್ರತಿಕ್ರಿಯೆ ಬಂದ ಬಳಿಕ ಈ ದಂಡವನ್ನು ಆರ್‌ಬಿಐ ಹಾಕಿದೆ.

ಯೂನಿಯನ್ ಬ್ಯಾಂಕ್ 1 ಕೋಟಿ ರೂಪಾಯಿಗಳ ಅತ್ಯಧಿಕ ದಂಡವನ್ನು ಆರ್‌ಬಿಐ ವಿಧಿಸಿದ್ದರೆ, ಬಜಾಜ್ ಫೈನಾನ್ಸ್‌ಗೆ 8.50 ಲಕ್ಷ ರೂಪಾಯಿಯ ದಂಡವನ್ನು ಹಾಕಿದೆ. ಇನ್ನು ಆರ್‌ಬಿಎಲ್ ಬ್ಯಾಂಕ್‌ಗೆ ಬರೋಬ್ಬರಿ 64 ಲಕ್ಷ ರೂಪಾಯಿ ದಂಡವನ್ನು ಆರ್‌ಬಿಐ ವಿಧಿಸಿದೆ. ಯಾವೆಲ್ಲ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂಬ ವಿವರ ಈ ಕೆಳಗಿದೆ ಮುಂದೆ ಓದಿ...
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಸಾಲಗಳು ಮತ್ತು ಮುಂಗಡ ಪಾವತಿ ಇಂತಹ ಶಾಸನಬದ್ಧ ಮತ್ತು ಇತರ ನಿರ್ಬಂಧಗಳನ್ನು ಸರಿಯಾಗಿ ಅನುಸರಿಸದಿದ್ದಕ್ಕಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಆರ್‌ಬಿಐ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಆರ್‌ಬಿಐ ತನಿಖೆ ನಡೆಸಿದ ಬಳಿಕ ಬ್ಯಾಂಕ್ ಕಾರ್ಪೊರೇಷನ್‌ಗೆ ಟರ್ಮ್ ಲೋನ್ ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. ಹಾಗೆಯೇ ಹಣಕಾಸು ನಿರ್ವಹಣೆಯಲ್ಲಿ ತೊಡಕು ಕಂಡು ಬಂದಿದೆ. ರಿಪೇಮೆಂಟ್ಸ್/ ಸೇವೆಗಳನ್ನು ಬಜೆಟ್ ಸಂಪನ್ಮೂಲಗಳಿಂದ ಮಾಡಲಾಗಿದೆ. ಇದು ಆರ್‌ಬಿಐ ನಿರ್ದೇಶನದ ವಿರುದ್ಧ ನಿಯಮ ಉಲ್ಲಂಘನೆಯಾಗಿದೆ.
ಆರ್‌ಬಿಎಲ್ ಬ್ಯಾಂಕ್
ಈ ಹಿಂದೆ ರತ್ನಾಕರ್ ಬ್ಯಾಂಕ್ ಎಂದು ಕರೆಯಲಾಗುತ್ತಿದ್ದ ಈ ಮುಂಬೈ ಮೂಲದ ಬ್ಯಾಂಕ್, ಖಾಸಗಿ ವಲಯದ ಬ್ಯಾಂಕ್‌ಗಳ ನಿರ್ದೇಶನಗಳು, 2015 ರಲ್ಲಿ ಷೇರುಗಳು ಅಥವಾ ಮತದಾನದ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳಲು ಪೂರ್ವ ಅನುಮೋದನೆಯನ್ನು ಅನುಸರಿಸದಿದ್ದಕ್ಕಾಗಿ 64 ಲಕ್ಷ ರೂಪಾಯಿಗಳ ವಿತ್ತೀಯ ದಂಡವನ್ನು ಸ್ವೀಕರಿಸಿದೆ.
ತನಿಖೆ ನಡೆಸಿದಾಗ, ಪ್ರಮುಖ ಷೇರುದಾರರಿಂದ ಆರ್‌ಬಿಎಲ್ ಬ್ಯಾಂಕ್ ಫಾರ್ಮ್ ಬಿ ಯನ್ನು ಮೂರು ಹಣಕಾಸು ವರ್ಷಗಳಾದ ಮಾರ್ಚ್ 31, 2018 ಮತ್ತು ಮಾರ್ಚ್ 31, 2019 ಮತ್ತು ಮಾರ್ಚ್ 31, 2020ರ ಒಳಗಾಗಿ ಪಡೆಯುವಲ್ಲಿ ವಿಫಲವಾಗಿದೆ ಎಂಬುವುದು ತಿಳಿದುಬಂದಿದೆ.
ಬಜಾಜ್ ಫೈನಾನ್ಸ್‌ಗೆ ಯಾಕೆ ದಂಡ?
ಎನ್‌ಬಿಎಫ್‌ಸಿ ದೈತ್ಯ ಸಂಸ್ಥೆಯಾದ ಬಜಾಜ್ ಫೈನಾನ್ಸ್ ಎನ್‌ಬಿಎಫ್‌ಸಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು, 2016 ರಲ್ಲಿ ವಂಚನೆಗಳ ಮೆಲೆ ನಿಗಾ ವಹಿಸು ಕಾರ್ಯವನ್ನು ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ 8.50 ಲಕ್ಷ ರೂಪಾಯಿಗಳ ದಂಡವನ್ನು ಎದುರಿಸಬೇಕಾಗಿದೆ. ವಂಚನೆಯನ್ನು ವರದಿ ಮಾಡದ ಅಥವಾ ವಂಚನೆ ವರದಿ ಮಾಡುವಾಗ ವಿಳಂಬವಾದ ಕಾರಣಕ್ಕೆ ಈ ದಂಡವನ್ನು ವಿಧಿಸಲಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್
ಈ ಫಿನ್‌ಟೆಕ್ ದೈತ್ಯ ಪೇಟಿಎಂ ಬೆಂಬಲಿತ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆವೈಸಿ ನಿರ್ದೇಶನಗಳು 2016, ಪಾವತಿಗಳ ಪರವಾನಗಿಗಾಗಿ ಆರ್‌ಬಿಐ ಮಾರ್ಗಸೂಚಿಗಳ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ 5.39 ಕೋಟಿ ರೂಪಾಯಿಗಳ ಬೃಹತ್ ದಂಡವನ್ನು ಸ್ವೀಕರಿಸಿದೆ. ಆರು ಖಾತೆಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರ್‌ಬಿಐ ಹೇಳಿದೆ.
- ಪಾವತಿ ಸೇವೆಗಳನ್ನು ಒದಗಿಸುವುದಕ್ಕಾಗಿ ಅದರ ಮೂಲಕ ಖಾತೆ ತೆರೆದ ಘಟಕಗಳಿಗೆ ಸಂಬಂಧಿಸಿದಂತೆ ಲಾಭ ಪಡೆಯುವ ಮಾಲೀಕರನ್ನು ಗುರುತಿಸಲು ವಿಫಲವಾಗಿದೆ
- ವಹಿವಾಟುಗಳ ಮೇಲೆ ನಿಗಾ ವಹಿಸಿಲ್ಲ
- ಸೈಬಲ್ ಸೆಕ್ಯೂರಿಟಿ ಪ್ರಕರಣ ವರದಿ ಮಾಡುವಲ್ಲಿ ವಿಳಂಬ
- ಎಸ್‌ಎಂಎಸ್ ಕುರಿತಾದ ನಿಯಮ ಉಲ್ಲಂಘನೆ


Click it and Unblock the Notifications