ಸಿಲಿಕಾನ್ ವ್ಯಾಲಿ ಬ್ಯಾಂಕ್ ನಷ್ಟದೊಂದಿಗೆ ಬಂದ್ ಆದ ಬಳಿಕ ಈಗ ನ್ಯೂಯಾರ್ಕ್ ಮೂಲದ ಬ್ಯಾಂಕ್ ಒಂದು ಬಂದ್ ಆಗಿದೆ. ಭಾನುವಾರ ದೇಶದ ಹಣಕಾಸು ನಿಯಂತ್ರಕರು ನ್ಯೂಯಾರ್ಕ್ ಮೂಲದ ಸಿಗ್ನೇಚರ್ ಬ್ಯಾಂಕ್ ಅನ್ನು ಬಂದ್ ಮಾಡಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ನಷ್ಟದೊಂದಿಗೆ ಬಂದ್ ಆಗಿರುವುದು ಬೇರೆ ಬ್ಯಾಂಕ್‌ಗಳಿಗೂ ಪ್ರಭಾವವನ್ನು ಉಂಟು ಮಾಡಿದೆ. ಯುಎಸ್‌ನ ಅತೀ ದೊಡ್ಡ ಬ್ಯಾಂಕಿಂಗ್ ವಲಯದ ವೈಫಲ್ಯ ಇದಾಗಿದೆ.
ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಷನ್ (ಎಫ್‌ಡಿಐಸಿ) ಸಿಗ್ನೇಚರ್ ಬ್ಯಾಂಕ್ ಅನ್ನು ತನ್ನ ಹತೋಟಿಗೆ ಪಡೆದುಕೊಂಡಿದೆ. ಕಳೆದ ವರ್ಷದ ಅಂತ್ಯದಲ್ಲಿ ಈ ಬ್ಯಾಂಕ್‌ನಲ್ಲಿ ಆಸ್ತಿ ರೂಪದಲ್ಲಿ 110.36 ಬಿಲಿಯನ್ ಡಾಲರ್ ಮತ್ತು ಡೆಪಾಸಿಟ್ ಮೂಲದಲ್ಲಿರುವ 88.59 ಡಾಲರ್ ಇತ್ತು ಎಂದು ನ್ಯೂಯಾರ್ಕ್‌ನ ಹಣಕಾಸು ಸೇವಾ ಇಲಾಖೆ ತಿಳಿಸಿದೆ.

ಯುಎಸ್ ಟ್ರೆಜರಿ ಸೇರಿದಂತೆ ಜಂಠಿ ಹೇಳಿಕೆಯನ್ನು ನೀಡಿದ ಹಣಕಾಸು ಏಜೆನ್ಸಿಗಳು, "ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಥವಾ ಎಸ್‌ವಿಬಿ ಠೇವಣಿದಾರರು ತಮ್ಮ ಎಲ್ಲ ಮೊತ್ತವನ್ನು ಮಾರ್ಚ್ 13ರಿಂದ ಹಿಂಪಡೆಯುವ ಅವಕಾಶವಿದೆ," ಎಂದು ತಿಳಿಸಿದೆ. ಇನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಷನ್, ಯುಎಸ್ ಫೆಡರಲ್ ರಿಸರ್ವ್, ಟ್ರೆಜರಿ, "ಸಿಗ್ನೇಚರ್ ಬ್ಯಾಂಕ್‌ನ ಠೇವಣಿದಾರರು ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಒಗ್ಗಿಕೊಂಡಿದೆ, ಸ್ಟಾಕ್ ದರ ಇಳಿದ ಬಳಿಕ ಬಂದ್ ಆಗಿದೆ," ಎಂದು ತಿಳಿಸಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಂದ್
ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಸಂಪತ್ತನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ. 2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಡೆಪಾಸಿಟ್‌ದಾರರು, ಮುಖ್ಯವಾಗಿ ತಾಂತ್ರಿಕ ಕೆಲಸಗಾರರು ಮತ್ತು ಬಂಡವಾಳ-ಬೆಂಬಲಿತ ಕಂಪನಿಗಳು ತಮ್ಮ ಡೆಪಾಸಿಟ್ ಮೊತ್ತವನ್ನು ವಿತ್‌ಡ್ರಾ ಮಾಡಲು ಆರಂಭ ಮಾಡಿದ ಬಳಿಕ ಬ್ಯಾಂಕ್‌ನಲ್ಲಿ ವೈಫಲ್ಯತೆ ಕಂಡುಬಂದಿದೆ.
ಟೆಕ್ ಇಂಡಸ್ಟ್ರೀಗೆ ಅಧಿಕವಾಗಿ ಈ ಬ್ಯಾಂಕ್ ಸಾಲ ಸೌಲಭ್ಯವನ್ನು ಒದಗಿಸಿದೆ. ಒಂದು ದಶಕಕ್ಕೂ ಹಿಂದೆ ಆರಂಭವಾದ ಯುಎಸ್‌ನ ಅತೀ ದೊಡ್ಡ ಆರ್ಥಿಕ ಹಿಂಜರಿತದ (2008 ಹಣಕಾಸು ಬಿಕ್ಕಟ್ಟು) ಬಳಿಕ ಬ್ಯಾಂಕಿಂಗ್ ವಲಯದಲ್ಲಿ ಹಲವಾರು ಆತಂಕಗಳು ಸೃಷ್ಟಿಯಾಗಿದೆ. ಇನ್ನು ಇದೇ ರೀತಿಯ ಪರಿಸ್ಥಿತಿಯಿಂದ ಹೊರಬರುವ ಸಾಮರ್ಥ್ಯವನ್ನು ಇತರೆ ಪ್ರಮುಖ ಬ್ಯಾಂಕುಗಳು ಹೊಂದಿದೆ ಎಂದು ವರದಿಯು ಉಲ್ಲೇಖಿಸಿದೆ.


Click it and Unblock the Notifications