ನವದೆಹಲಿ, ಮೇ 7: ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (COO) ಭವೇಶ್ ಗುಪ್ತಾ ಅವರು ಕಂಪನಿಗೆ ದಿಢೀರ್ ರಾಜೀನಾಮೆ ಸಲ್ಲಿಸಿದ ಬಳಿಕ ಸಂಸ್ಥೆಯ ಷೇರುಗಳು ಸೋಮವಾರ 5% ನಷ್ಟು ಕುಸಿದು ದಿನದ ಅಂತ್ಯಕ್ಕೆ ಕನಿಷ್ಠ ರೂ 351.70 ಕ್ಕೆ ತಲುಪಿದೆ.
ಗುಪ್ತಾ ಅವರು ಪೇಟಿಎಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸಲ್ಲಿಸಿದ ಮಾಹಿತಿಯ ಪ್ರಕಾರ, ಮೇ 4, 2024 ರಂದು ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ಗುಪ್ತಾ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಪೇಟಿಎಂ ದೃಢಪಡಿಸಿದೆ. ಕಂಪನಿಯೊಂದಿಗೆ ಗುಪ್ತಾ ಅವರ ಸೇವೆಯ ಕೊನೆಯ ದಿನವು ಮೇ 31, 2024 ಆಗಿರುತ್ತದೆ.

ತಮ್ಮ ರಾಜೀನಾಮೆ ಪತ್ರವನ್ನು ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರಿಗೆ ಕಳುಹಿಸಿದ್ದು, "ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನಾನು ಪೇಟಿಎಂ ಅನ್ನು ಸಲಹಾ ಪಾತ್ರದಲ್ಲಿ ಮುಂದುವರಿಯಲು ಉತ್ಸಾಹದಲ್ಲಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಿರ್ಮಿಸಲಾದ ಪಾವತಿಗಳು ಮತ್ತು ಹಣಕಾಸು ಸೇವೆಗಳಲ್ಲಿನ ನಾಯಕತ್ವದ ಆಳವನ್ನು ಗಮನಿಸಿದರೆ ಪೇಟಿಎಂಹೊಸ ಎತ್ತರವನ್ನು ತಲುಪುವ ವಿಶ್ವಾಸವಿದೆ" ಎಂದು ಅವರು ಹೇಳಿದ್ದಾರೆ. ಅವರ ಪ್ರಸ್ತುತ ಪಾತ್ರದಿಂದ ಕೆಳಗಿಳಿದರೂ, ಗುಪ್ತಾ ಕಂಪನಿಯನ್ನು ಸಲಹಾ ಸಾಮರ್ಥ್ಯದಲ್ಲಿ ಬೆಂಬಲಿಸುವುದನ್ನು ಮುಂದುವರಿಸಲು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
ನಾಯಕತ್ವ ಬದಲಾವಣೆಯ ಭಾಗವಾಗಿ, ಫಿನ್ಟೆಕ್ ಸಂಸ್ಥೆ ಪೇಟಿಎಂ ರಾಕೇಶ್ ಸಿಂಗ್ ಅವರನ್ನು ಪೇಟಿಎಂ ಮನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿರುವುದಾಗಿ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. "ರಾಕೇಶ್ ಸಿಂಗ್ ಅವರು ಇತ್ತೀಚೆಗೆ ಪೇಟಿಎಂ ಮನಿ ಲಿಮಿಟೆಡ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಎರಡು ದಶಕಗಳ ಅನುಭವದೊಂದಿಗೆ, ರಾಕೇಶ್ ಸಿಂಗ್ ಈ ಹಿಂದೆ ಫಿಸ್‌ಡಮ್‌ನಲ್ಲಿ ಸ್ಟಾಕ್ ಬ್ರೋಕಿಂಗ್ ವ್ಯವಹಾರದ CEO ಆಗಿದ್ದರು ಮತ್ತು ICICI ಸೆಕ್ಯುರಿಟೀಸ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನೊಂದಿಗೆ ಪ್ರಮುಖ ನಿರ್ವಹಣಾ ಸ್ಥಾನಗಳನ್ನು ಹೊಂದಿದ್ದರು" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಸೋಮವಾರ ಬೆಳಗ್ಗೆ 10:45 ರ ಹೊತ್ತಿಗೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ಪೇಟಿಎಂ ಷೇರುಗಳು 4.26% ನಷ್ಟು ಕಡಿಮೆಯಾಗಿ 354.35 ರೂ. ತಲುಪಿತ್ತು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಬಿಎಸ್‌ಇ) ಷೇರುಗಳು ಇದೇ ರೀತಿಯ ಕುಸಿತವನ್ನು ಅನುಭವಿಸಿದ್ದು, ಶೇ.4.23ರಷ್ಟು ಕುಸಿದು ರೂ.354.50ಕ್ಕೆ ತಲುಪಿದೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ, ಪೇಟಿಎಂ ನ ಸ್ಟಾಕ್ 45% ನಷ್ಟು ಇಳಿಕೆಯನ್ನು ಕಂಡಿದೆ.
ಪ್ರಸ್ತುತ ಸಿಇಒ ಆಗಿರುವ ವರುಣ್ ಶ್ರೀಧರ್ ಅವರು ಪೇಟಿಎಂ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಪಿಎಸ್‌ಪಿಎಲ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪಾತ್ರವನ್ನು ವಹಿಸಿಕೊಂಡಿದ್ದಾರೆ. Paytm Money ಮತ್ತು PSPL ಎರಡೂ ಪೇಟಿಎಂ ನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್‌ನ ಅಂಗಸಂಸ್ಥೆಗಳಾಗಿವೆ. ಪೇಟಿಎಂ ಗ್ರಾಹಕರಿಗೆ ಸ್ಟಾಕ್ ಬ್ರೋಕಿಂಗ್, ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಇತರ ಸಂಪತ್ತು ನಿರ್ವಹಣೆ ಸೇವೆಗಳಲ್ಲಿ ತೊಡಗಿಕೊಂಡಿವೆ.


Click it and Unblock the Notifications