For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್: ಒಂದೇ ದಿನ ಊರು ಬಿಟ್ಟವರೆಷ್ಟು ಗೊತ್ತಾ?

|

ಕೊರೊನಾವೈರಸ್ ಹಾವಳಿಯಿಂದಾಗಿ ಮೆಟ್ರೋ ಸಿಟಿ, ಸಿಲಿಕಾನ್ ಸಿಟಿ ಇದೀಗ ಮತ್ತೆ ಲಾಕ್‌ಡೌನ್ ಆಗುತ್ತಿದೆ. ಕರ್ನಾಟಕ ಸರ್ಕಾರದ ಆದೇಶದಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

ನಗರದಲ್ಲಿ ಕೊರೊನಾ ಭೀತಿಯಿಂದ ಹಾಗೂ ಉದ್ಯೋಗ, ನಷ್ಟ, ಆದಾಯ ನಷ್ಟದಿಂದ ಮಂಗಳವಾರ ರಾತ್ರಿಯಿಂದ ಆರಂಭಗೊಂಡು ಬೆಂಗಳೂರಿನಲ್ಲಿ ವಾರ ಪೂರ್ತಿ ಲಾಕ್‌ಡೌನ್ ಆಗುವ ಮುನ್ನ ಮತ್ತೆ ಸಾವಿರಾರು ವಲಸಿಗರು ನಗರ ಬಿಟ್ಟು ತಮ್ಮ ತಮ್ಮ ಊರುಗಳತ್ತ ವಾಪಸ್ ತೆರಳಿದ್ದಾರೆ.

ಕೊರೊನಾ ರೋಗಿಗಳ ಜೀವ ಉಳಿಸಬಹುದಾದ ವಿಶ್ವದ ಮೊದಲ ಔಷಧ ಬಯೋಕಾನ್ ನಿಂದಕೊರೊನಾ ರೋಗಿಗಳ ಜೀವ ಉಳಿಸಬಹುದಾದ ವಿಶ್ವದ ಮೊದಲ ಔಷಧ ಬಯೋಕಾನ್ ನಿಂದ

ಪಿಟಿಐ ವರದಿಯ ಪ್ರಕಾರ ಮಂಗಳವಾರ ರಾತ್ರಿ 35,000 ಕ್ಕೂ ಹೆಚ್ಚು ಜನರು ನಗರವನ್ನು ತೊರೆದಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಉತ್ತರ ಕರ್ನಾಟಕದ ಜಿಲ್ಲೆಗಳ ಜನ ಹೆಚ್ಚು ಎಂದು ಪಿಟಿಐ ವರದಿ ಮಾಡಿದೆ.

ಬಸ್ಸುಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ

ಬಸ್ಸುಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ

ನಿನ್ನೆ 35,000 ಪ್ರಯಾಣಿಕರು ಬೆಂಗಳೂರಿನಿಂದ ಹೊರಟುಹೋದರು. ಹೀಗೆ ಹೋಗುವ ವಲಸಿಗರಿಗೆ ಬಸ್ಸುಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ನಾವು ಅವಕಾಶ ನೀಡುತ್ತಿದ್ದೇವೆ ಎಂಬ ಅಂಶವು ದೊಡ್ಡದಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೇ ದಿನ 230 ಕೋಟಿ ಮೌಲ್ಯದ ಮದ್ಯ ಮಾರಾಟ

ಒಂದೇ ದಿನ 230 ಕೋಟಿ ಮೌಲ್ಯದ ಮದ್ಯ ಮಾರಾಟ

ಲಾಕ್‌ಡೌನ್‌ ಭಯದಿಂದ ಕಿರಾಣಿ, ತರಕಾರಿ, ಹಣ್ಣಿನ ಅಂಗಡಿಗಳಲ್ಲಿ ಗ್ರಾಹಕರು ಮುಗಿಬಿದ್ದು ಸಾಮಾನುಗಳನ್ನು ಖರೀದಿಸಿದ್ದು ಕಂಡು ಬಂದಿದೆ. ಅಲ್ಲದೇ ಬೆಂಗಳೂರು ಮತ್ತೆ ಲಾಕ್‌ಡೌನ್ ಆಗುತ್ತಿರುವುದರಿಂದ ಮದ್ಯ ಪ್ರಿಯರು ಮುಗಿಬಿದ್ದು ಮದ್ಯ ಖರೀದಿಸಿದ್ದಾರೆ. ನಿನ್ನೆ ಒಂದೇ ದಿನ 230 ಕೋಟಿ ಮೌಲ್ಯದ ಮದ್ಯವನ್ನು ಮಾರಾಟ ಆಗಿದೆ. 215.55 ಕೋಟಿ ರು ಮೊತ್ತದ ದೇಶಿ ಹಾಗೂ ವಿದೇಶಿ ಮದ್ಯ ಮತ್ತು 14.83 ಕೋಟಿ ಮೌಲ್ಯದ ಬಿಯರ್ ಮಾರಾಟ ಮಾಡಲಾಗಿದೆ.

ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು
 

ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು ಅಪಾಯಕಾರಿ ಪ್ರಮಾಣದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು, ಮಂಗಳವಾರ ರಾತ್ರಿ 8 ರಿಂದ ಜುಲೈ 22 ರಂದು ಬೆಳಿಗ್ಗೆ 5 ಗಂಟೆಯವರೆಗೆ ಲಾಕ್ ಡೌನ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ನಂತರ, ಧಾರವಾಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೂ ಸಹ ಬುಧವಾರದಿಂದ ಕ್ರಮವಾಗಿ ಒಂಬತ್ತು ದಿನ ಮತ್ತು ಏಳು ದಿನಗಳವರೆಗೆ ಲಾಕ್‌ಡೌನ್ ವಿಧಿಸಲು ನಿರ್ಧರಿಸಿವೆ.

15,052 ಸಕ್ರಿಯ ಪ್ರಕರಣಗಳಿವೆ

15,052 ಸಕ್ರಿಯ ಪ್ರಕರಣಗಳಿವೆ

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 19,702 ಜನರಿಗೆ ಕೋವಿಡ್ ಪಾಸಿಟಿವ್ ಪರೀಕ್ಷೆಯಾಗಿದ್ದು, ಅದರಲ್ಲಿ 15,052 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 4,328 ಜನರನ್ನು ಬಿಡುಗಡೆ ಮಾಡಲಾಗಿದೆ. ಸಾವುನೋವುಗಳ ಸಂಖ್ಯೆ 321 ಆಗಿದೆ. ಕರ್ನಾಟಕದಾದ್ಯಂತ, 24,572 ಸಕ್ರಿಯ ಪ್ರಕರಣಗಳು, 16,248 ಡಿಸ್ಚಾರ್ಜ್‌ಗಳು ಮತ್ತು 757 ಸಾವುಗಳು ಸೇರಿದಂತೆ 41,581 ಜನರು ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

English summary

Again Lockdown In Bengaluru: Over 35000 People Left Bengaluru In One Day

Again Lockdown In Bengaluru: Over 35000 People Left Bengaluru In One Day
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X