ಈ ವರ್ಷದ ಐಪಿಎಲ್ ಇಂದಿನಿಂದ ಅಂದರೆ ಮಾರ್ಚ್ 31ರಿಂದ ಆರಂಭವಾಗಲಿದೆ. ಐಪಿಎಲ್ 2023 ಆರಂಭವಾಗುವುದಕ್ಕೂ ಮುನ್ನವೇ ಭಾರತದ ಅತೀ ದೊಡ್ಡ ಫ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆಯಾದ ಡ್ರೀಮ್11 ನ ಪೋಷಕ ಸಂಸ್ಥೆಯಾದ ಡ್ರೀಮ್ ಸ್ಪೋರ್ಟ್ಸ್ ಮೊಬೈಲ್ ಪೇಮೆಂಟ್ ಆಪ್ ಅನ್ನು ಪ್ರಾರಂಭ ಮಾಡಿದ್ದಾರೆ. ತಮ್ಮ ನೆಚ್ಚಿನ ಟೀಮ್ ಮೇಲೆ ಬಿಡ್ಡಿಂಗ್ ಮಾಡುವ ವೇಳೆ ಬಳಕೆದಾರರು ಈ ಆಪ್ ಅನ್ನು ಬಳಸಬಹುದು ಎಂಬವುದು ಎಂಬ ನಿಟ್ಟಿನಲ್ಲಿ ಡ್ರೀಮ್‌ಎಕ್ಸ್ ಎಂಬ ಮೊಬೈಲ್ ಪಾವತಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದೆ.
2023ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಡ್ರೀಮ್11 ನ ಪೋಷಕ ಸಂಸ್ಥೆಯಾದ ಡ್ರೀಮ್ ಸ್ಪೋರ್ಟ್ಸ್ ಯುಪಿಐ ಆಪ್ ಅನ್ನು ಪ್ರಾರಂಭ ಮಾಡಿದೆ. ಐಪಿಎಲ್ ಪಂದ್ಯಾವಳಿಗಳು ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸಾಮಾನ್ಯವಾಗಿ ಅತೀ ಮುಖ್ಯವಾದ ಈವೆಂಟ್ ಆಗಿದೆ. ಈ ಸಂದರ್ಭದಲ್ಲಿ ಡ್ರೀಮ್11 ಆಪ್ ಅನ್ನು ಅಧಿಕವಾಗಿ ಬಳಕೆ ಮಾಡಲಾಗುತ್ತದೆ.

ಆಪ್ ಬಗ್ಗೆ ಇತರೆ ಮಾಹಿತಿ
ಈಗ ಆರಂಭವಾಗಿರುವ ಡ್ರೀಮ್‌ಎಕ್ಸ್ ಅಪ್ಲಿಕೇಶನ್‌ನೊಂದಿಗೆ, ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂನಂತಹ ಪ್ರತಿಸ್ಪರ್ಧಿಗಳನ್ನು ಡ್ರೀಮ್ ಸ್ಪೋರ್ಟ್ಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಡ್ರೀಮ್11 ಬಳಕೆದಾರರ ಖಾತೆಗೆ ಡ್ರೀಮ್ ಎಕ್ಸ್ ಲಿಂಕ್ ಮಾಡಲಾಗಿರುತ್ತದೆ ಎಂದು ಮಾಹಿತಿಯು ಕೂಡಾ ಲಭ್ಯವಾಗಿದೆ. ಇನ್ನು ಡ್ರೀಮ್‌ಎಕ್ಸ್ ಅಪ್ಲಿಕೇಶನ್‌ನಲ್ಲಿಯೇ ನಾವು ಸೇವೆಗೆ ಸೈನ್ ಅಪ್ ಮಾಡಲು ಸಾಧ್ಯವಿಲ್ಲ. ಗಮನಾರ್ಹವಾಗಿ, ಡ್ರೀಮ್11 ಡಿಸೆಂಬರ್ 2022 ರ ಹೊತ್ತಿಗೆ 160 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಹೇಳಿಕೊಂಡಿದೆ.
"ಡ್ರೀಮ್‌ಎಕ್ಸ್ ಡ್ರೀಮ್ ಸ್ಪೋರ್ಟ್ಸ್‌ನ ಫಿನ್‌ಟೆಕ್ ಆಗಿದೆ. ಡ್ರೀಮ್ 11, ಡ್ರೀಮ್ ಕ್ಯಾಪಿಟಲ್, ಫ್ಯಾನ್‌ಕೋಡ್ ಮತ್ತು ಡ್ರೀಮ್‌ಸೆಟ್‌ಗೋ ನಂತಹ ಬ್ರ್ಯಾಂಡ್‌ಗಳನ್ನು ಡ್ರೀಮ್ ಸ್ಪೋರ್ಟ್ಸ್ ಸಂಸ್ಥೆ ಹೊಂದಿದೆ. ಭಾರತದ ಪ್ರಮುಖ ಕ್ರೀಡಾ ತಂತ್ರಜ್ಞಾನ ಕಂಪನಿಯಾಗಿದೆ. ಇದು ಪ್ರಸ್ತುತ ಬೀಟಾ ಹಂತದಲ್ಲಿದೆ. ನಮ್ಮ ಪ್ರಸ್ತುತ ಬಳಕೆದಾರರಿಗೆ ಸೀಮಿತವಾಗಿದೆ," ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಗೋಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಈ ಆಪ್ ಲಭ್ಯವಿದೆ. ಡ್ರೀಮ್ಎಕ್ಸ್ ಯುಪಿಐ, ಭಾರತ್ ಬಿಲ್ ಪಾವತಿ ವ್ಯವಸ್ಥೆಯಿಂದ (ಬಿಬಿಪಿಎಸ್) ಚಾಲಿತವಾಗಿದೆ.
ಈ ಅಪ್ಲಿಕೇಶನ್ ಮೂಲಕ, ಡ್ರೀಮ್11 ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಯುಪಿಐ ವರ್ಗಾವಣೆ ಮಾಡುವುದು ಮತ್ತು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಆಫ್‌ಲೈನ್ ಮತ್ತು ಆನ್‌ಲೈನ್ ಖರೀದಿಗಳಿಗೆ ಪಾವತಿಸುವುದು ಸೇರಿದಂತೆ ಹಲವಾರು ವಹಿವಾಟುಗಳಲ್ಲಿ ತಮ್ಮ ಗೆದ್ದ ಮೊತ್ತವನ್ನು ವರ್ಗಾವಣೆ ಮಾಡಬಹುದಾಗಿದೆ.
ಇದು ಬಳಕೆದಾರರಿಗೆ ವಿದ್ಯುತ್ ಬಿಲ್, ನೀರಿನ ಬಿಲ್‌ಗಳು, ಬ್ರಾಡ್‌ಬ್ಯಾಂಡ್ ಮತ್ತು ಲ್ಯಾಂಡ್‌ಲೈನ್ ಬಿಲ್‌ಗಳಂತಹ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಅಥವಾ ಗ್ಯಾಸ್ ಸಿಲಿಂಡರ್‌ಗಳನ್ನು ಆರ್ಡರ್ ಮಾಡಲು ಕೂಡಾ ಸಹಾಯಕವಾಗಿದೆ. ಮೊಬೈಲ್ ಫೋನ್‌ಗಳು, ಡಿಟಿಎಚ್ ಮತ್ತು ಫಾಸ್ಟ್ಯಾಗ್‌ಗಳನ್ನು ರೀಚಾರ್ಜ್ ಮಾಡಲು ಅವಕಾಶವನ್ನು ನೀಡುತ್ತದೆ. ಹಾಗೆಯೇ ಕ್ರೆಡಿಟ್ ಕಾರ್ಡ್ ಸಾಲ, ಇತರೆ ಸಾಲ, ವಿಮೆ ಮತ್ತು ಪಾಲಿಸಿ ಪ್ರೀಮಿಯಂಗಳನ್ನು ಕೂಡಾ ಪಾವತಿ ಮಾಡುವ ಅವಕಾಶವಿದೆ ಎಂದು ಡ್ರೀಮ್‌ಎಕ್ಸ್ ಹೇಳಿದೆ.
ರಜೆಯಲ್ಲಿರುವ ಸಹೋದ್ಯೋಗಿಗೆ ಕೆಲಸ ವಿಚಾರದಲ್ಲಿ ತೊಂದರೆ ಕೊಟ್ಟರೆ 1 ಲಕ್ಷ ದಂಡ!
ಭಾರತದ ಪ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆ ಡ್ರೀಮ್ 11 ತಮ್ಮ ಉದ್ಯೋಗಿಗಳು ರಜೆಯಲ್ಲಿರುವ ಇತರೆ ಉದ್ಯೋಗಿಗಳಿಗೆ ಕೆಲಸದ ವಿಚಾರದಲ್ಲಿ ಕರೆ ಮಾಡುವಂತೆ ಇಲ್ಲ. ಕರೆ ಮಾಡಿದರೆ ಭಾರೀ ದಂಡವನ್ನು ವಿಧಿಸಲಾಗುತ್ತದೆ. ನಿಯಮಕ್ಕೆ Dream 11 Unplug ಅಥವಾ ಡ್ರೀಮ್ 11 ಅನ್‌ಪ್ಲಗ್ ಎಂದು ಕರೆಯಲಾಗುತ್ತದೆ. ಡ್ರೀಮ್ 11 ಅನ್‌ಪ್ಲಗ್ ಪಾಲಿಸಿಯು ಒಬ್ಬ ಉದ್ಯೋಗಿಯು ರಜೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ಕೆಲಸದಿಂದ ಅನ್‌ಪ್ಲಗ್ ಆಗುವುದು ಆಗಿದೆ. ಅಂದರೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಮಾತುಕತೆ ರಜೆಯಲ್ಲಿರುವ ಉದ್ಯೋಗಿಯೊಂದಿಗೆ ಇರುವುದಿಲ್ಲ. ಕರೆ, ಇಮೇಲ್, ವಾಟ್ಸಾಪ್ ಗ್ರೂಪ್, ಗ್ರೂಪ್ ಚಾಟ್ ಯಾವುದರಲ್ಲೂ ಕೆಲಸದ ವಿಚಾರ ಕೇಳುವಂತಿಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications