ಹಬ್ಬದ ಋತು: 2000 + ಫ್ಯಾಷನ್ ಸ್ಟೋರ್ ಜೊತೆ -ಫ್ಲಿಪ್ ಕಾರ್ಟ್ ಒಪ್ಪಂದ

ಬೆಂಗಳೂರು, ಅಕ್ಟೋಬರ್ 16: ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಈ ಬಾರಿಯ ಹಬ್ಬದ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಜತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಮೂಲಕ ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ 2000 ಕ್ಕೂ ಅಧಿಕ ಫ್ಯಾಷನ್ ಸ್ಟೋರ್ ಗಳ ವಿಸ್ತಾರವಾದ ಉತ್ಪನ್ನಗಳನ್ನು ತರಲಿದೆ.

300 ಕ್ಕೂ ಹೆಚ್ಚು ನಗರಗಳಲ್ಲಿ ವಿಸ್ತಾರವಾದ ಜಾಲವನ್ನು ಹೊಂದಿರುವ ಈ ಪಾಲುದಾರಿಕೆಯು ಬ್ರ್ಯಾಂಡ್ ಗಳು ತಮ್ಮಲ್ಲಿನ ಉತ್ಪನ್ನಗಳನ್ನು ಹತ್ತಿರದ ಪಿನ್ ಕೋಡ್ ಗಳಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಗ್ರಾಹಕರಿಗೆ ವಿಸ್ತಾರವಾದ ಆಯ್ಕೆಯನ್ನು ಮಾಡಿಕೊಳ್ಳಲು ನೆರವಾಗುತ್ತವೆ ಮತ್ತು ಫ್ಲಿಪ್ ಕಾರ್ಟ್ ನ ಸುರಕ್ಷಿತ ಹಾಗೂ ಸ್ಯಾನಿಟೈಸ್ಡ್ ಸಪ್ಲೈ ಚೇನ್ ಮೂಲಕ ವಿತರಣೆ ಮಾಡಲು ಸಹಕಾರಿಯಾಗುತ್ತವೆ.

ಈ ಉಪಕ್ರಮವು ಫ್ಲಿಪ್ ಕಾರ್ಟ್ ನ 250 ದಶಲಕ್ಷಕ್ಕೂ ಅಧಿಕ ಗ್ರಾಹಕರ ಉತ್ಪನ್ನಗಳ ಆಯ್ಕೆಯನ್ನು ಮತ್ತಷ್ಟು ವಿಸ್ತರಣೆ ಮಾಡುತ್ತದೆ ಹಾಗೂ ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಸುರಕ್ಷತೆಯಿಂದ, ಮೆಟ್ರೋಗಳು, 2 ನೇ ಹಂತದ ನಗರಗಳು ಹಾಗೂ ಅದರ ನಂತರದ ನಗರಗಳಲ್ಲಿ ಆನ್ ಲೈನ್ ಶಾಪಿಂಗ್ ಗೆ ಆದ್ಯತೆ ನೀಡುವ ಮೂಲಕ ಅವರ ಅಗತ್ಯತೆಗಳನ್ನು ಪೂರೈಸುತ್ತದೆ.

ಹಬ್ಬದ ಋತು: 2000 + ಫ್ಯಾಷನ್ ಸ್ಟೋರ್ ಜೊತೆ -ಫ್ಲಿಪ್ ಕಾರ್ಟ್  ಒಪ್ಪಂದ

ಈ ವರ್ಷ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮತ್ತು ಹಬ್ಬದ ಸಮಯದಲ್ಲಿ ಅತಿ ದೊಡ್ಡ ಫ್ಯಾಷನ್ ಆಯ್ಕೆಗಳನ್ನು ಒದಗಿಸುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ಪ್ರಮುಖ ಬ್ರ್ಯಾಂಡ್ ಗಳು ಮತ್ತು ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಫ್ಲಿಪ್ ಕಾರ್ಟ್ ತಂತ್ರಜ್ಞಾನ ಮತ್ತು ಉತ್ತಮ ನಿರ್ವಹಣಾ ವ್ಯವಸ್ಥೆಗಳಾದ ''ಜಿಯೋ ಫೆನ್ಸಿಂಗ್'' ಮತ್ತು ''ಸ್ಟೋರ್ ಹ್ಯಾಪನಿಂಗ್'' ದಂತಹ ಉಪಕ್ರಮಗಳ ಮೂಲಕ ರೀಟೇಲ್ ಸ್ಟೋರ್ ಗಳನ್ನು ಇ-ಕಾಮರ್ಸ್ ನಲ್ಲಿ ದೃಢವಾದ ಸಪ್ಲೈ ಚೇನ್ ನೊಂದಿಗೆ ಸಕ್ರಿಯಗೊಳಿಸಲು ಸದುಪಯೋಗಪಡಿಸಿಕೊಳ್ಳುತ್ತಿದೆ. ಇದು ಮೆಟ್ರೋ ಹೊರತಾದ ಪ್ರದೇಶಗಳು ಮತ್ತು ನಗರಗಳನ್ನು ಒಳಗೊಳ್ಳುತ್ತದೆ ಮತ್ತು ಗ್ರಾಹಕರು ಮತ್ತು ಬ್ರ್ಯಾಂಡ್ ಗಳೆರಡರ ಅಗತ್ಯಗಳನ್ನು ಪರಿಹರಿಸುತ್ತದೆ. ಗುಲ್ಬರ್ಗಾ ಮತ್ತು ಸೀತಾಪುರದ ''ಲಿಬರ್ಟಿ ಸ್ಟೋರ್ಸ್'', ಕೊಚ್ಚಿನ್, ಪಣಜಿ ಮತ್ತು ಕ್ಯಾಲಿಕಟ್ ನ ಪೆಪೆ ಸ್ಟೋರ್ಸ್, ಝಿರಾಕ್ ಪುರ ಮತ್ತು ಮೊಗಾದ ''ರೇಮಂಡ್ ಸ್ಟೋರ್ಸ್''. ಜಮ್ಮುವಿನ ''ಆ್ಯರೋ ಸ್ಟೋರ್ಸ್'', ಜೋಧ್ಪುರದ ''ಖಾದಿಮ್ಸ್ ಸ್ಟೋರ್ಸ್'', ದುರ್ಗಾಪುರ ಮತ್ತು ಇತರೆ ಪ್ರದೇಶಗಳ ''ಎಥ್ನಿಸಿಟಿ ಸ್ಟೋರ್ಸ್' ಗಳನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+