ಬೆಂಗಳೂರು, ಮೇ 28: ಮನುಷ್ಯ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯಾಗಿ ಎಐನ (Artificial Intelligence) ಜಾಲಕ್ಕೆ ಸಿಲಕಿದ್ದಾನೆ. ಈಗ ಎಐ (AI) ಬದುಕಿನ ಭಾಗವಾಗಿ ಹೋಗಿದೆ. ಇಂದಿನ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಅನಿವಾರ್ಯತೆ ಕೂಡಾ ಹೌದು . ಆದರೆ ಈಗಾಗಲೇ ಕೃತಕ ಬುದ್ಧಿಮತ್ತೆ ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದೆ ಎಂದರೆ ತಪ್ಪಾಗಲಾರದು.
ಅನೇಕ ಕಂಪನಿಗಳು ತಮ್ಮ ನೇಮಕಾತಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಸುವ್ಯವಸ್ಥಿತ AI ಟೂಲ್ಕ್ ಗಳನ್ನು ಹೆಚ್ಚಾಗಿ ಬಳಸುತ್ತಿವೆ. ಇದು ಉದ್ಯೋಗ ಬಯಸಿ ಹಾಕುವವರ ರೆಸ್ಯೂಮ್ ನ್ನು ಸ್ವೀಕರಿಸಿ, ಅದಕ್ಕೆ ಸಂಬಂಧಪಟ್ಟವರು ಪರಿಶೀಲಿಸುವ ಮೊದಲೇ ನಿಮ್ಮ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತದೆ.

ಹೌದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ, ಮನುಷ್ಯರು ಅದರ ಮೇಲೆ ಕಣ್ಣಾಡಿಸುವ ಮೊದಲೇ ನಿಮ್ಮ ಅರ್ಜಿಗಳು ತಿರಸ್ಕೃತವಾಗಬಹುದು. ಇಂದು ವಿವಿಧ ಕೈಗಾರಿಕೆಗಳಾದ್ಯಂತ, ಕಂಪನಿಗಳು ತಮ್ಮ ನೇಮಕಾತಿ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲು ಜನರೇಟಿವ್ AI ಸೇರಿದಂತೆ ಕೃತಕ ಬುದ್ಧಿಮತ್ತೆಯ ಸಾಧನಗಳನ್ನು ಹೆಚ್ಚಾಗಿ ಬಳಸುತ್ತಿವೆ. ಎಕನಾಮಿಕ್ ಟೈಮ್ಸ್ ಡೇಟಾ ಪ್ರಕಾರ, ಈ AI ಪರಿಕರಗಳು ರೆಸ್ಯೂಮ್ ಸ್ಕ್ರೀನಿಂಗ್‌ನಿಂದ ಕೌಶಲ್ಯ ಮೌಲ್ಯಮಾಪನದವರೆಗೆ ಎಲ್ಲದಕ್ಕೂ ಸಹಾಯ ಮಾಡುತ್ತವೆ.
ಕೆಲವು ಸಂದರ್ಭಗಳಲ್ಲಿ ಸಂದರ್ಶನಗಳಿಗೆ ಮಾತ್ರ ಮಾನವ ಒಳಗೊಳ್ಳುವಿಕೆ ಅಗತ್ಯವಿರುತ್ತದೆ. ಇತರರಲ್ಲಿ, Gen AI ನಂತಹ AI ಪರಿಕರಗಳು ವ್ಯವಸ್ಥಾಪಕರು ಸಂದರ್ಶನಗಳನ್ನು ನಡೆಸಲು ಸಹಾಯ ಮಾಡುತ್ತದೆ. ಅಭ್ಯರ್ಥಿಗಳ ಸೋರ್ಸಿಂಗ್, ಸ್ಕ್ರೀನಿಂಗ್ , ಕೌಶಲ್ಯ ಮೌಲ್ಯಮಾಪನ, ಮುನ್ಸೂಚಕ ವಿಶ್ಲೇಷಣೆ ಮುಂತಾದ ಸಹಾಯ ಮಾಡುತ್ತವೆ.
ಡೇಟಾ ಗೌಪ್ಯತೆ, ಉದ್ಯೋಗಿಗಳಿಗೆ ವೈಯಕ್ತಿಕ ಸಾಮರ್ಥ್ಯದ ಬಗ್ಗೆ AI ನಿರ್ಧಾರಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಕಳವಳಗಳಿದ್ದರೂ, AI ಎಲ್ಲಾ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಮಾಡುತ್ತಿದೆ ಎಂದು ಕಂಪನಿಗಳ HR ಅಧಿಕಾರಿಗಳು ಸಮರ್ಥಿಸುತ್ತಿದ್ದಾರೆ.
Genpact, ವೃತ್ತಿಪರ ಸೇವೆಗಳ ಕಂಪನಿಯು ಇತ್ತೀಚೆಗೆ GenAI ನಿಂದ ನಡೆಸಲ್ಪಡುವ AI ಸಾಧನವಾದ IMatch ಅನ್ನು ಪ್ರಾರಂಭಿಸಿತು. ಈ AI ರೆಸ್ಯೂಮ್ ವಿವರಗಳ ಬಗ್ಗೆ ತಿಳಿಯುತ್ತದೆ ಮತ್ತು ನಿರ್ದಿಷ್ಟ ವ್ಯಕ್ತಿ ಕೆಲಸಕ್ಕೆ ಸೂಕ್ತವೇ ಎಂಬುದನ್ನು ಪರಿಶೀಲಿಸುತ್ತದೆ.
AI ಪರಿಕರಗಳು ಸಂದರ್ಶನದಿಂದ ಹಿಡಿದು ನೇಮಕದವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸಿವೆ. ಪ್ರಸ್ತುತ 40% ಹೊಸ ನೇಮಕಾತಿಗಳನ್ನು AI ಮೂಲಕ ಆಯ್ಕೆ ಮಾಡಲಾಗುತ್ತದೆ. AI ಬಳಕೆಯು ನೇಮಕಾತಿ ಸಂಸ್ಥೆಗಳಿಗೆ ಉತ್ಪಾದಕತೆಯಲ್ಲಿ ಶೇಕಡಾ 15 ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು 62 ದಿನಗಳಿಂದ 43 ದಿನಗಳವರೆಗೆ ಸಮಯವನ್ನು ಕಡಿಮೆ ಮಾಡಿದೆ ಎಲ್ಲಾ ಪ್ರಕ್ರಿಯೆ ಮಾನವ ಹಸ್ತಕ್ಷೇಪರಹಿತವಾಗಿಸಿದೆ" ಎಂದು Genpact ನ ಜಾಗತಿಕ ನೇಮಕಾತಿ ಮುಖ್ಯಸ್ಥ ರಿತು ಭಾಟಿಯಾ ಹೇಳಿದ್ದಾರೆ.
ಪ್ರತಿ ಅಭ್ಯರ್ಥಿಯ ವಿಶಿಷ್ಟ ಅನುಭವಗಳು ಮತ್ತು ಹಿನ್ನೆಲೆಗೆ ಅನುಗುಣವಾಗಿ ನೇಮಕಾತಿ ಸಾಮೂಹಿಕ ಮೇಲ್‌ಗಳನ್ನು ಕಳುಹಿಸುವಂತಹ ಪ್ರಕ್ರಿಯೆಯನ್ನು ವೈಯಕ್ತೀಕರಿಸಲು GenAI- ಆಧಾರಿತ ಸಾಧನಗಳು ಸಹಾಯ ಮಾಡುತ್ತವೆ . ಯಾಕೆಂದರೆ ಅಂತಹ ಕೆಲಸವನ್ನು ನಾವು ಕಸ್ಟಮೈಸ್ ಮಾಡಲು 10 ಪಟ್ಟು ಹೆಚ್ಚು ಸಮಯ ಬೇಕಾಗಬಹುದು." ಭಾರತೀಯ ನೇಮಕಾತಿ ಸೇವೆಗಳ ಪೂರೈಕೆದಾರ ಪೀಪಲ್‌ಫೈ ಸಿಇಒ ರಾಜೇಶ್ ಅಭಿಪ್ರಾಯಪಟ್ಟಿದ್ದಾರೆ.
AI ನೇಮಕಾತಿ ಪ್ರಕ್ರಿಯೆಯನ್ನು ಸುಲಭಗೊಳಿಸಿದರೂ ಅವುಗಳಿಂದ ಹಲವು ಪ್ರಯೋಜನಗಳಿದ್ದರೂ ಸಹ, ಎಐ ನಲ್ಲಿ ಹಲವು ನ್ಯೂನತೆಗಳಿದ್ದು ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಗುರುತಿಸುವುದು ಕೃತಕ ಬುದ್ಧಿಮತ್ತೆಗೆ ಸಾಧ್ಯವಾಗುವುದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಗಾರಿದಮಿಕ್ ಆಧಾರದ ಮೇಲೆ ಕೆಲಸ ಮಾಡುವುದರಿಂದ ಕೆಲಸ-ಸಂಬಂಧಿತ ಕೌಶಲ್ಯಗಳು AI ಗಮನಕ್ಕೆ ಬರುವುದಿಲ್ಲ ಇದರಿಂದ ಪಕ್ಷಪಾತ ಹೆಚ್ಚಾಗುತ್ತದೆ ,ಡೇಟಾ ಗೌಪ್ಯತೆ ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications