ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಡೀ ವಿಶ್ವವನ್ನೇ ದೇಶವನ್ನೇ ಬೆಚ್ಚಿಬೀಳಿಸುವ ವಿಮಾನ ಅಪಘಾತ ಸಂಭವಿತ್ತು. ಏರ್ ಇಂಡಿಯಾ AI 171 ವಿಮಾನ ಪತನಲ್ಲಿ 242 ಜನರಿದ್ದ ಫ್ಲೈಟ್‌ನಲ್ಲಿ ಬದುಕುಳಿದಿದ್ದು ಮಾತ್ರ ಒಬ್ಬರೇ. ಈ ಘಟನೆ ದೇಶಾದ್ಯಂತ ತೀವ್ರ ದುಃಖವನ್ನುಂಟು ಮಾಡಿತ್ತು ಆದರೆ ಅಂದಿನಿಂದಲ್ಲೂ ಏರ್ ಇಂಡಿಯಾಗೆ ಏಕಕಾಲಕ್ಕೆ ಹತ್ತು ಹಲವಾರು ಸಮಸ್ಯೆಗಳನ್ನು ಎದಿರಿಸುತ್ತಿದೆ. ವಿಮಾನ ಹತ್ತಲು ಪ್ರಯಾಣಿಕರು ಇಂದಿಗೂ ಕೂಡ ಭಯಭೀತ್ತರಾಗಿದ್ದಾರೆ.
ಹೌದು, ಏರ್ ಇಂಡಿಯಾ AI 171 ವಿಮಾನ ಪತನ ದುರಂತದ ನಂತರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಇದೀಗ ಏರ್ ಇಂಡಿಯಾ ಕೆಲವು ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. ತಾಂತ್ರಿಕ ದೋಷಗಳು ಮತ್ತು ಸುರಕ್ಷತಾ ಕಾಳಜಿಗಳ ಕಾರಣದಿಂದಾಗಿ ಈ ವಿಮಾನಗಳ ರದ್ದತಿ ಸಂಭವಿಸಿದೆ ಎಂದು ವದರಿಗಳಲ್ಲಿ ಮಾಹಿತಿ ಬಹಿರಂಗವಾಗಿದೆ.

ಹೆಚ್ಚಿನ ವಿಮಾನ ತಪಾಸಣೆ, ಕೆಟ್ಟ ಹವಾಮಾನ ಮತ್ತು ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಏರ್ ಇಂಡಿಯಾ ಶುಕ್ರವಾರ (ಜೂನ್ 20, 2025) ಹಲವಾರು ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದೆ . ದುಬೈ, ಚೆನ್ನೈ, ದೆಹಲಿ, ಮೆಲ್ಬೋರ್ನ್, ಪುಣೆ, ಅಹಮದಾಬಾದ್, ಹೈದರಾಬಾದ್ ಮತ್ತು ಮುಂಬೈ ನಡುವಿನ ಸೇವೆಗಳು ಬಾಧಿತ ವಿಮಾನಗಳಲ್ಲಿ ಸೇರಿಗೊಂಡಿವೆ.
ಅಂತರರಾಷ್ಟ್ರೀಯ ಯಾವ ವಿಮಾನಗಳು ರದ್ದು..?
ಏರ್ ಇಂಡಿಯಾದ ಹೇಳಿಕೆಯ ನೀಡಿರುವ ಪ್ರಕಾರ, "ದುಬೈನಿಂದ ಚೆನ್ನೈಗೆ ಹಾರಾಟ ನಡೆಸುತ್ತಿದ್ದ AI906 ಅಂತರರಾಷ್ಟ್ರೀಯ ವಿಮಾನಗಳು ದೆಹಲಿಯಿಂದ ಮೆಲ್ಬೋರ್ನ್‌ಗೆ ಹಾರಾಟ ನಡೆಸುತ್ತಿದ್ದ AI308, ಮೆಲ್ಬೋರ್ನ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI309,ದುಬೈನಿಂದ ಹೈದರಾಬಾದ್‌ಗೆ ಹಾರಾಟ ನಡೆಸುತ್ತಿದ್ದ AI2204, ಮತ್ತು ಪುಣೆಯಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI874, ಗಳು ರದ್ದಾಗಿದೆ.
ಯಾವೆಲ್ಲಾ ದೇಶೀಯ ವಿಮಾನಗಳು ಇಂದು ರದ್ದು ಆಗಿವೆ..?
ಇನ್ನೂ ದೇಶೀಯ ವಿಮಾನಗಳಲ್ಲಿ ಅಹಮದಾಬಾದ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI456, ಹೈದರಾಬಾದ್‌ನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ AI-2872 ಮತ್ತು ಚೆನ್ನೈನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ AI571 ವಿಮಾನಗಳನ್ನು ವರ್ಧಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣಗಳಿಂದ ರದ್ದು ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಏರ್ ಇಂಡಿಯಾ ವಿಮಾನ ಅಪಘಾತದ ನಂತರದಿಂದ ಈವರೆಗೆ 60 ವಿಮಾನಗಳು ರದ್ದು ಆಗಿದೆ. ಏರೋ ಇಂಡಿಯಾ ವಿಮಾನ ದುರಂತದ ನಂತರ ವಿಮಾನಗಳ ಪರಿಶೀಲನೆ ಹಾಗೂ ತನಿಖಾ ದೃಷ್ಟಿಯಿಂದ ಈ ಬೆಳವಣಿಗೆ ನಡೆದಿದೆ.
ಏರ್ ಇಂಡಿಯಾ ದೇಶೀಯ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ರದ್ದುಗೊಳಿಸಿರುವುದಕ್ಕೆ ತೊಂದರೆಗೊಳಗಾದ ಪ್ರಯಾಣಿಕರಿಗೆ ಕ್ಷಮೆಯನ್ನು ಕೋರಿದ್ದಾರೆ. ಪ್ರಯಾಣಿಕರಿಗೆ ಉಚಿತವಾಗಿ ವಿಮಾನಗಳನ್ನು ಮರು ನಿಗದಿಪಡಿಸುವುದು ಮತ್ತು ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸುವಂತಹ ಆಯ್ಕೆಗಳನ್ನು ನೀಡಲಾಗುತ್ತಿದೆ ಎಂದು ಏರ್ ಇಂಡಿಯಾ ಮಾಹಿತಿಯನ್ನು ತಿಳಿಸಿದೆ.
ವಿಮಾನ ಹೋರಾಟ ಅಪ್ಡೇಟ್ಸ್ ಪರಿಶೀಲಿಸುವುದು ಹೇಗೆ?
ವಿಮಾನಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ತಿಳಿದುಕೊಳ್ಳಲು ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್ airindia.com/in/en/manage/flight-status.html ಗೆ ಭೇಟಿ ನೀಡಿ ಹೊಸ ನವೀಕರಣಗಳನ್ನು ನೋಡಬೇಕು. ಇಲ್ಲವಾದರೆ 011 69329333, 011 69329999 ಈ ಗ್ರಾಹಕ ಸೇವಾ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕವೂ ಮಾಹಿತಿಯನ್ನು ಪಡೆದುಕೊಳ್ಳಬಹದು.
ವಾಯುಪ್ರದೇಶದ ನಿರ್ಬಂಧಗಳು
ನಮ್ಮ ವಿಮಾನಗಳಲ್ಲಿ ನಿರಂತರವಾದ ವರ್ಧಿತ ತಪಾಸಣೆಗಳು, ವಾಯುಪ್ರದೇಶದ ನಿರ್ಬಂಧಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ, ಕೆಲವು ಅಡೆತಡೆಗಳನ್ನು ನಾವು ನಿರೀಕ್ಷಿಸುತ್ತೇವೆ, ಅದನ್ನು ಪ್ರಯಾಣಿಕರಿಗೆ ಸರಿಯಾಗಿ ತಿಳಿಸಲಾಗುವುದು ಎಂದು ಹೇಳಿದೆ.
ಒಟ್ಟಾರೆಯಾಗಿ, ಏರ್ ಇಂಡಿಯಾ ಕೆಲವು ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ಕ್ಷಮೆ ಕೋರಿದೆ. ಅಲ್ಲದೆ, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಸಹಾಯ ಮಾಡಲು ಏರೋ ಇಂಡಿಯಾ ಸಿದ್ಧವಾಗಿದೆ.


Click it and Unblock the Notifications