Air India Plane Crash: ಸಂತ್ರಸ್ತರಿಗೆ LIC ನೆರವು.. ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆ ಸಡಿಲ.. ಹಲವು ರಿಯಾಯಿತಿ ಘೋಷಣೆ

ಗುಜರಾತ್‌ನ ಅಹಮದಾಬಾದ್‌ನಲ್ಲಿ ದೇಶವನ್ನೇ ಬೆಚ್ಚಿಬೀಳಿಸುವ ವಿಮಾನ ಅಪಘಾತ ಸಂಭವಿಸಿದೆ. ಅಹಮದಾಬಾದ್‌ನಲ್ಲಿ 247 ಪ್ರಯಾಣಿಕರುನ್ನು ಹೊತ್ತು ಹೋದ ಏರ್ ಇಂಡಿಯಾ ವಿಮಾನ ಅಪಘಾತವು ದೇಶಾದ್ಯಂತ ತೀವ್ರ ದುಃಖವನ್ನುಂಟು ಮಾಡಿದೆ.ವಿಮಾನ ಅಪಘಾತದಲ್ಲಿ ಸಂತ್ರಸ್ತರ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಭಾರತೀಯ ಜೀವ ವಿಮಾ ನಿಗಮ ( LIC) ಶುಕ್ರವಾರ ಹಲವಾರು ರಿಯಾಯಿತಿಗಳನ್ನು ಘೋಷಿಸಿದೆ.

ಹೌದು,ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಸಾವನಪ್ಪಿರುವ ಕುಟುಂಬಗಳಿಗೆ LIC ಸಂತಪವನ್ನು ಸೂಚಿಸಿದೆ. ಪಾಲಿಸಿದಾರರ ನಾಮಿನಿಗಳಿಗೆ ಆರ್ಥಿಕ ಪರಿಹಾರ ಒದಗಿಸಲು, ಎಲ್ಐಸಿ ಸಾವಿನ ಕ್ಲೈಮ್‌ಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಾಗಿ ಮತ್ತು ಸಾಮಾನ್ಯವಾಗಿ ಇತ್ಯರ್ಥಕ್ಕೆ ಅಗತ್ಯವಿರುವ ಕೆಲವು ಷರತ್ತುಗಳನ್ನು ಸಡಿಲಿಸುವುದಾಗಿ ಹೇಳಿದೆ.

Air India Plane Crash: ಸಂತ್ರಸ್ತರಿಗೆ LIC ನೆರವು

ಎಲ್ಐಸಿ ಇಂಡಿಯಾ ಫಾರೆವರ್ (@LICಇಂಡಿಯಾಫಾರೆವರ್) ಪ್ರಕಟಣೆಯ ಪ್ರಕಾರ ಮರಣ ಪ್ರಮಾಣಪತ್ರದ ಬದಲಿಗೆ, ಎಲ್‌ಐಸಿ ಘಟನೆಯಿಂದಾಗಿ ಪಾಲಿಸಿದಾರನ ಮರಣವನ್ನು ದೃಢೀಕರಿಸುವ ಯಾವುದೇ ಸರ್ಕಾರಿ ದಾಖಲೆಯನ್ನು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಏರ್ ಇಂಡಿಯಾ ಅಧಿಕಾರಿಗಳು ವಿತರಿಸಿದ ಪರಿಹಾರದ ಪುರಾವೆಯನ್ನು ನಾವು ಸ್ವೀಕರ ಮಾಡುತ್ತೇವೆ. ಪಾಲಿಸಿದಾರರ ಕುಟುಂಬಗಳನ್ನು ಬಹುಬೇಗನೆ ತಲುಪುಲು ಅವರ ಬಾಕಿಗಳನ್ನು ಆದಷ್ಟು ಬೇಗ ಪಾವತಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ರಾಜ್ಯ ಸ್ವಾಮ್ಯದ ವಿಮಾದಾರರು ಭರವಸೆ ನೀಡಿದರು.ಸಹಾಯದ ಅಗತ್ಯವಿರುವ ಹಕ್ಕುದಾರರು ತಮ್ಮ ಹತ್ತಿರದ ಎಲ್‌ಐಸಿ ಶಾಖೆ, ವಿಭಾಗ ಅಥವಾ ಗ್ರಾಹಕ ವಲಯವನ್ನು ಸಂಪರ್ಕಿಸಬಹುದು ಎಂದು ಮಾಹಿತಿಯನ್ನು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಬೆಂಬಲ ಮತ್ತು ಮಾಹಿತಿಯನ್ನು ಒದಗಿಸಲು 022 68276827 ಎಂಬ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಮಾಹಿತಿಯನ್ನು ತಿಳಿಸಿದೆ.

ಏರೋ ಇಂಡಿಯಾ ವಿಮಾನ ಅಪಘಾತ: ಭಾರತದ ಸುಮಾರು ಒಂದು ದಶಕದಲ್ಲಿ ನಡೆದ ಅತ್ಯಂತ ಭೀಕರ ದುರಂತ

ಬೋಯಿಂಗ್ 787-8 ಡ್ರಿಮ್‌ ಲೈನರ್ ವಿಮಾನ AI-171 ಅಪಘಾತವು ಸುಮಾರು ಒಂದು ದಶಕದಲ್ಲಿ ಭಾರತದ ಅತ್ಯಂತ ಭೀಕರ ವಾಯುಯಾನ ದುರಂತಗಳಲ್ಲಿ ಒಂದಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಒಟ್ಟು 241 ಜನರು ಸಾವನ್ನಪ್ಪಿದ್ದಾರೆ. 230 ಪ್ರಯಾಣಿಕರು, 10 ಸಿಬ್ಬಂದಿ, 2 ಪೈಲಟ್‌ಗಳು, 5 ವೈದ್ಯರು ಮತ್ತು ಇನ್ನೂ ಗುರುತಿಸಲಾಗಿಲ್ಲ. ಅದರಲ್ಲಿ ಬದುಕುಳಿದ ಒಬ್ಬ ವ್ಯಕ್ತಿಯನ್ನು ಮಾತ್ರ ಎಂದು ಮಾಹಿತಿ ತಿಳಿದು ಬಂದಿದೆ.

ಏರೋ ಇಂಡಿಯಾದ ಬೋಯಿಂಗ್ 787-8 ಡ್ರಿಮ್‌ ಲೈನರ್ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದು ತೀವ್ರವಾದ ಶಾಖ, ದೊಡ್ಡ ಇಂಧನ ಬೆಂಕಿ ಮತ್ತು ಭಗ್ನಾವಶೇಷಗಳ ನಡುವೆ ರಕ್ಷಣಾ ಪ್ರಯತ್ನಗಳನ್ನು ಸಂಕೀರ್ಣಗೊಳಿಸಿತು. ಹೆಚ್ಚುತ್ತಿರುವ ತಾಪಮಾನ ಮತ್ತು ವಿಮಾನದಲ್ಲಿ ಸುಮಾರು 125,000 ಲೀಟರ್ ಇಂಧನವು ಅಪಘಾತವನ್ನು ಬದುಕುಳಿಯಲು ಅಸಾಧ್ಯವಾಗಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಸಹ ಹೇಳಿದ್ದಾರೆ.

ಪ್ರಧಾನ ಮಂತ್ರಿ ಮೋದಿ ಅಹಮದಾಬಾದ್‌ ವಿಮಾನ ಅಪಘಾತದ ಬಗ್ಗೆ ವಿಚಾರಣೆಯನ್ನು ಸಹ ನಡೆಸುತ್ತಿದ್ದಾರೆ. ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಅಪಘಾತದ ವಿವರಗಳನ್ನು ತಿಳಿದುಕೊಂಡಿದ್ದಾರೆ. ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅಪಘಾತದ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸುವಂತೆ ಸಚಿವರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ.

ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ

ಏರ್ ಇಂಡಿಯಾ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ವಿಮಾನ ಅಪಘಾತವು ವಿಮಾ ಹಕ್ಕುಗಳನ್ನು ಸಹ ಇದಕ್ಕೆ ಒಪ್ಪಿಗೆ ನೀಡಿವೆ. ಅಂದಾಜಿನ ಪ್ರಕಾರ, 1,000 ಕೋಟಿ ರೂ.ಗಳವರೆಗೆ ವಿಮಾ ಕ್ಲೇಮ್‌ಗಳು ಹೆಚ್ಚಾಗಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+