ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆ ಇದ್ಯಾ? ವಿಮಾನದಲ್ಲಿ ಹೋಗಲು ನಿಮ್ಮ ಬಳಿ ಹಣ ಇಲ್ಲವೇ? ಚಿಂತೆಬೇಡ.. ಇಲ್ಲಿದೆ ನಿಮಗೆ ಒಂದು ಸುವರ್ಣಾವಕಾಶ. ಹೌದು, ಕೆಲವೊಂದು ಸೀಸನ್ ನಲ್ಲಿ ವಿಮಾನಯಾನ ಸಂಸ್ಥೆಗಳು ಕಡಿಮೆ ದರದಲ್ಲಿ ಪ್ರಯಾಣಿಸುವ ಆಫರ್ ನೀಡುತ್ತವೆ. ಈ ಬಾರಿ ನ್ಯೂ ಇಯರ್ ಆಫರ್ ಭಾಗವಾಗಿ ಏರ್ ಇಂಡಿಯಾ ( Air India) ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಅದರಂತೆ, ನೀವು ಕೇವಲ 1,448 ರೂ.ಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು. ಈ ಆಫರ್ ಯಾವುದು? ಯಾವಾಗ ನೀವು ಪ್ರಯಾಣ ಮಾಡಬಹುದು? ಎಂಬಿತ್ಯಾದಿ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ವರ್ಷದ ಆಚರಣೆಗಳ ನಡುವೆ, ಅಕಾಸ ಏರ್ ಮತ್ತು ಇಂಡಿಗೋ ಸೇರಿದಂತೆ ಹಲವಾರು ಏರ್‌ಲೈನ್‌ಗಳು ವಿಶೇಷ ಟಿಕೆಟ್ ಮಾರಾಟವನ್ನು ಆರಂಭ ಮಾಡಿದ್ದೇವೆ. ಈ ಪಟ್ಟಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಹ ಸೇರ್ಪಡೆಯಾಗಿದೆ, ಇದು ಹೊಸ ವರ್ಷದ ಮಾರಾಟವನ್ನು ಪರಿಚಯಿಸಿದೆ.

ಈ ಮೂಲಕ ನೀವು ಕೇವಲ 1448 ರೂಪಾಯಿಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು.ಇನ್ನೂ ಬಜೆಟ್ ಪ್ರಯಾಣಿಕರಿಗಾಗಿ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹೊಸ ವರ್ಷದ ಸೇಲ್ ಉತ್ತಮ ಅವಕಾಶವನ್ನು ನೀಡಿದೆ. ನೀವು ರಜೆದಿನದಂದು ಕುಟುಂಬ ಭೇಟಿ ಅಥವಾ ಕೆಲಸಕ್ಕಾಗಿ ಪ್ರಯಾಣ ಏರ್‌ಫೇರ್‌ನಲ್ಲಿ ಉಳಿತಾಯ ಮಾಡಬಹುದು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವ್ಯಾಲ್ಯೂ ಸೇಲ್
ದೈತ್ಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೊಸ ವರ್ಷದ ಮಾರಾಟದ ಅಡಿಯಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ನೀವು ಕಡಿಮೆ ಬೆಲೆಯ ವಿಮಾನ ಟಿಕೆಟ್ ಪಡೆಯಬಹುದು. ಟಿಕೆಟ್ ದರ 1,448 ರೂಪಾಯಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೊಸ ವರ್ಷದ ಮಾರಾಟದ ಭಾಗವಾಗಿ ಲೈಟ್ ಆಫರ್ ಅಡಿಯಲ್ಲಿ 1,448 ರೂ ಮತ್ತು ವ್ಯಾಲ್ಯೂ ಕೊಡುಗೆಯ ಅಡಿಯಲ್ಲಿ 1,599 ರೂಪಾಯಿಯ ವಿಮಾನ ಟಿಕೆಟ್ ದರಗಳನ್ನು ಘೋಷಣೆ ಮಾಡಿದೆ.
ಈ ಆಫರ್ ನ್ನು ಪಡೆದುಕೊಳ್ಳಲು ಜನವರಿ 5ರವರೆಗೆ ಬುಕ್ಕಿಂಗ್ ಮಾಡಕೊಳ್ಳಬಹುದು. ಸೀಮಿತ ಸೀಟುಗಳು ಮತ್ತು ಮರುಪಾವತಿಸಲಾಗದ ನಿಬಂಧನೆಗಳನ್ನು ಈ ಬುಕ್ಕಿಂಗ್ ಒಳಗೊಂಡಿದೆ. 2025ರಲ್ಲಿ ಆಯ್ದ ಪ್ರಯಾಣದ ದಿನಾಂಕಗಳಿಗೆ ಟಿಕೆಟ್ ಗಳನ್ನು ಕಾಯ್ದಿರಿಸಲು ಮಾತ್ರ ಅವಕಾಶ ನೀಡಲಾಗಿದೆ.
ನೀವು ಈ ಆಫರ್ ಯಾವಾಗ ಪಡೆಯಬಹುದು?
ಜನವರಿ 5ರ ಮೊದಲು ಬುಕ್ಕಿಂಗ್ ಮಾಡಿರುವವರಿಗೆ ಜನವರಿ 8, 2025 ರಿಂದ ಸೆಪ್ಟೆಂಬರ್ 20, 2025ರವರೆಗೆ ಪ್ರಯಾಣ ಮಾಡುವವರಿಗೆ ಈ ಆಫರ್ ನೀಡಲಾಗುತ್ತದೆ. ಜನವರಿ ರವರೆಗೆ ಬುಕ್ಕಿಂಗ್ ಮಾಡಿದವರಿಗೆ ಲೈಟ್ ಆಫರ್ ಅಡಿಯಲ್ಲಿ 1,448 ರೂ. ಮತ್ತು ವ್ಯಾಲ್ಯೂ ಕೊಡುಗೆಯ ಅಡಿಯಲ್ಲಿ 1,599 ರೂ.ಗೆ ಟಿಕೆಟ್ ದೊರಕಲಿದೆ.
ಈ ಆಫರ್ ಪಡೆಯುವುದು ಹೇಗೆ?
ನೀವು ಮೊದಲು ಅಧೀಕೃತ ವೆಬ್ ಸೈಟ್ www.airindiaexpress.com ಅಥವಾಮೊಬೈಲ್ ಅಪ್ಲಿಕೇಶನ್ ಮೂಲಕ ಲಾಯಲ್ಟಿ ಸದಸ್ಯರಿಗೆ ಲೈಟ್ ಕೊಡುಗೆ ಲಭ್ಯವಿದೆ. ಆಫರ್‌ಗಳಲ್ಲಿ ಮೂಲ ದರಗಳು, ತೆರಿಗೆಗಳು ಮತ್ತು ವಿಮಾನ ನಿಲ್ದಾಣ ಶುಲ್ಕಗಳು ಸೇರಿವೆ. ಆದರೆ, ಕೆಲವೊಂದು ಶುಲ್ಕಗಳು ಇರಬಹುದು. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ನೀಡಲಾದ ಹೊಸ ವರ್ಷದ ಆಫರ್‌ನ ನಿಯಮಗಳನ್ನು ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲೈಟ್ ಸೇಲ್
ಈ ಮಾರಾಟದ ಅಡಿಯಲ್ಲಿ ಸೀಟುಗಳು ಸೀಮಿತವಾಗಿವೆ ಮತ್ತು ಮೊದಲು ಬಂದವರಿಗೆ ಮೊದಲು ಸಿಗುತ್ತದೆ. ರಿಯಾಯಿತಿಗಳು ಅತ್ಯುತ್ತಮ ಮೌಲ್ಯವನ್ನು ನೀಡುತ್ತವೆಯಾದರೂ, ರಿಯಾಯಿತಿಯ ಸೀಟುಗಳು ಎಲ್ಲಾ ವಿಮಾನಗಳು, ಮಾರ್ಗಗಳು ಅಥವಾ ದಿನಾಂಕಗಳಲ್ಲಿ ಲಭ್ಯವಿಲ್ಲದಿರಬಹುದು.
ವಿಮಾನ ಪ್ರಯಾಣ ಪೂರ್ಣಗೊಳಿಸಿದ ಬಳಿಕ ಪಿಎನ್‌ಆರ್ ಹೊಂದಿರುವ ಸದಸ್ಯರಿಗೆ NeuCoins ನೀಡಲಾಗುತ್ತದೆ. ಯಾರು ಬುಕ್ಕಿಂಗ್ ಮಾಡಿದ್ದಾರೆಯೋ ಅವರಿಗೆ ನ್ಯೂ ಕಾಯಿನ್ ನೀಡಲಾಗುವುದಿಲ್ಲ, ಯಾರ ಹೆಸರಲ್ಲಿ ಪಿಎನ್‌ಆರ್ ಇರುವುದೋ ಅವರಿಗೆ ಈ ನಿಯು ಕಾಯಿನ್ ನೀಡಲಾಗುತ್ತದೆ.
ಈ ಕೊಡುಗೆಯು ಪೂರ್ಣಗೊಂಡಿರುವ ಮತ್ತು ರದ್ದುಗೊಳಿಸದ ಬುಕಿಂಗ್‌ಳಿಗೆ ಮಾತ್ರ ಅನ್ವಯವಾಗುತ್ತದೆ. ನೀವು ನಿಮ್ಮ ವಹಿವಾಟನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಬುಕಿಂಗ್ ಆಫರ್‌ಗೆ ಅರ್ಹವಾಗಿರುವುದಿಲ್ಲ. ಈ ಕೊಡುಗೆಯು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ಟಿಕೆಟ್ ಲಭ್ಯವಿದೆ. ಹಾಗೂ ಈ ಸೇವೆಗಳು ಏರ್ ಇಂಡಿಯಾ ವಿಮಾನಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಸೀಮಿತ ಸೀಟುಗಳಿಗೆ ಮಾತ್ರ ಹೊಸ ವರ್ಷದ ಆಫರ್ ಕೂಡ ಸಿಗುತ್ತದೆ.
ಮರುಪಾವತಿಯನ್ನು ನೀಡುವುದಿಲ್ಲ
ಹೊಸ ವರ್ಷದ ಆಫರ್‌ನಡಿ ಟಿಕೆಟ್ ಖರೀದಿಸಿ, ಪಾವತಿಗಳನ್ನು ಮಾಡಿದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮರುಪಾವತಿಯನ್ನು ನೀಡುವುದಿಲ್ಲ. ರದ್ದತಿ ಶುಲ್ಕವು ಏರ್‌ಲೈನ್ಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ನಮೂದಿಸಲಾದ ಶುಲ್ಕಗಳಿಗೆ ಮಾತ್ರ ಒಳಪಟ್ಟಿರುತ್ತದೆ. ಯಾವುದೇ ಪೂರ್ವ ಸೂಚನೆ ಅಥವಾ ಕಾರಣವಿಲ್ಲದೆ ಆಫರ್ ಅನ್ನು ರದ್ದುಗೊಳಿಸುವ ಮತ್ತು ಹೊಸ ವರ್ಷದ ಆಫರ್‌ನಡಿ ಟಿಕೆಟ್ ಖರೀದಿಸಿ, ಪಾವತಿಗಳನ್ನು ಮಾಡಿದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮರುಪಾವತಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ.
ರದ್ದತಿ ಶುಲ್ಕವು ಏರ್‌ಲೈನ್ಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ನಮೂದಿಸಲಾದ ಶುಲ್ಕಗಳಿಗೆ ಒಳಪಟ್ಟಿರುತ್ತದೆ.


Click it and Unblock the Notifications