ಟಾಟಾ ಗ್ರೂಪ್ ಮಾಲೀಕತ್ವದ ಏರ್‌ಇಂಡಿಯಾ ಸಂಸ್ಥೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾವು ಸುಮಾರು 14,000 ಕೋಟಿ ರೂಪಾಯಿ ಸಾಲವನ್ನು ಪಡೆದಿದೆ ಎಂದು ವರದಿಯಾಗಿದೆ. ಇದು ಹೊಸ ಸಾಲ ಹಾಗೂ ಈಗಾಗಲೇ ಪಡೆದಿರುವ ಸಾಲದ ಒಟ್ಟು ಲೆಕ್ಕಾಚಾರ ಎಂದು ಕೂಡಾ ಮಾಧ್ಯಮ ವರದಿ ಮಾಡಿದೆ. ಸಾಲಗಳಿಗೆ ಮರುಹಣಕಾಸು ಮಾಡಲು 12,500 ಕೋಟಿ ರೂಪಾಯಿಗಳನ್ನು ಮತ್ತು ಸಾಂಕ್ರಾಮಿಕ ಸಂದರ್ಭದಲ್ಲಿನ ಎಮರ್ಜನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ 1,500 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಈ ಸಾಲದ ಮೊತ್ತವು ಏರ್‌ಲೈನ್ ಸಂಸ್ಥೆಯು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಮಾರುಕಟ್ಟಯನ್ನು ವಿಸ್ತರಣೆ ಮಾಡಲು, ಹೊಸದಾಗಿ ವಿಮಾನಗಳನ್ನು ಲೀಸ್‌ಗೆ ಪಡೆಯಲು ಸಹಾಯಕವಾಗಲಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ಏರ್‌ಇಂಡಿಯಾವು ಇತ್ತೀಚೆಗೆ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಪಡೆಯುವ ಆಫರ್ ನೀಡಿದೆ. ಈ ಆಫರ್ ಸ್ವೀಕರಿಸಿ ಸ್ವಯಂ ನಿವೃತ್ತಿ ಪಡೆಯುವವರಿಗೆ ನಿವೃತ್ತಿ ಮೊತ್ತವನ್ನು ಪಾವತಿಸಲು ಕೂಡಾ ಈ ಸಾಲದ ಮೊತ್ತ ಬಳಸುವ ಸಾಧ್ಯತೆಯಿದೆ. ಈ ಯೋಜನೆಯಡಿಯಲ್ಲಿ ಏರ್‌ಇಂಡಿಯಾಕ್ಕೆ ಸುಮಾರು 200 ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆಯಿದೆ.

ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಪಡೆಯುವ ಆಫರ್
ಟಾಟಾ ಗ್ರೂಪ್ ಕಳೆದ ವರ್ಷ 2022ರ ಜನವರಿಯಲ್ಲಿ ನಷ್ಟದಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ. ಇದಾದ ಬಳಿಕ ಎರಡನೇ ಬಾರಿಗೆ ಟಾಟಾ ಗ್ರೂಪ್ ಏರ್ ಇಂಡಿಯಾದ ವಿಮಾನದಲ್ಲಿರುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಪಡೆಯುವ ಆಫರ್ ಅನ್ನು ನೀಡಿದೆ. 40 ವರ್ಷ ವಯಸ್ಸಿನವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪರ್ಮನೆಂಟ್ ಜನರಲ್ ಕ್ಯಾಡೇಟ್ ಆಫೀಸರ್‌ಗಳಿಗೆ ಈ ಆಫರ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸಿಬ್ಬಂದಿಗಳು ಏರ್‌ಲೈನ್‌ನಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಸಲ್ಲಿಸಿರಬೇಕು ಎಂಬುವುದನ್ನು ಹೇಳಿಕೆಯಲ್ಲಿ ತಿಳಿಸಲಾಗಿದೆ.
Air India: ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಪಡೆಯುವ ಆಫರ್ ನೀಡಿದ ಏರ್‌ಇಂಡಿಯಾ
ಈ ಆಫರ್ ಏಪ್ರಿಲ್ 30ರವರೆಗೆ ಇರಲಿದೆ. ಈ ಸ್ವಯಂ ನಿವೃತ್ತಿ ಪಡೆಯುವ ಆಫರ್ ಅನ್ನು ಒಟ್ಟಾಗಿ 2,100 ಉದ್ಯೋಗಿಗಳು ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೂನ್ 2022ರಲ್ಲಿ ಮೊದಲ ಬಾರಿಗೆ ಏರ್‌ಇಂಡಿಯಾ ಸ್ವಯಂ ನಿವೃತ್ತಿ ಪಡೆಯುವ ಆಫರ್ ನೀಡಿದೆ. ಅದುವೇ ಮೊದಲ ಹಂತದ ಆಫರ್ ಆಗಿದೆ. ಪ್ರಸ್ತುತ ಏರ್ ಇಂಡಿಯಾದಲ್ಲಿ ಒಟ್ಟು 11,000 ಮಂದಿ ಸಿಬ್ಬಂದಿಗಳು ಇದ್ದಾರೆ.
ಏರ್‌ಇಂಡಿಯಾದ ಮಲ್ಟಿ ಬಿಲಿಯನ್ ಡಾಲರ್ ಡೀಲ್
ಟಾಟಾ ಗ್ರೂಪ್‌ನ ಏರ್ ಇಂಡಿಯಾ ಇತಿಹಾಸದಲ್ಲೇ ಅತೀ ದೊಡ್ಡ ಮಲ್ಟಿ ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಫ್ರಾನ್ಸ್‌ನ ಏರ್‌ಬಸ್ ಮತ್ತು ಅಮೆರಿಕಾದ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ಜೊತೆ ಏರ್ ಇಂಡಿಯಾ ಈ ಒಪ್ಪಂದವನ್ನು ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳಿಂದ ಒಟ್ಟು 470 ಪ್ರಯಾಣಿಕ ವಿಮಾನ ಖರೀದಿಯ ಡೀಲ್ ಕುದುರಿಸುವ ಮೂಲಕ ಇತಿಹಾಸದಲ್ಲೇ ಅತೀ ದೊಡ್ಡ ಒಪ್ಪಂದಕ್ಕೆ ಏರ್‌ಇಂಡಿಯಾ ಮುಂದಾಗಿದೆ. 470 ವಿಮಾನಗಳ ಸಂಪೂರ್ಣ ಡೀಲ್ 70ರಿಂದ 80 ಬಿಲಿಯನ್ ಡಾಲರ್‌ನಲ್ಲಿ ನಡೆಯಲಿದೆ.
ಏರ್‌ಇಂಡಿಯಾದ ಸಾಲ
ಹಣಕಾಸು ವರ್ಷ 2022ರಲ್ಲಿ ಏರ್‌ಇಂಡಿಯಾದ ಒಟ್ಟು ಸಾಲ 15,317 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2021ರಲ್ಲಿ ಏರ್‌ಇಂಡಿಯಾದ ಒಟ್ಟು ಸಾಲ 45,037 ಕೋಟಿ ರೂಪಾಯಿ ಆಗಿತ್ತು. ಅದರ ಲೆಕ್ಕಾಚಾರದಲ್ಲಿ ಇದು ಕಡಿಮೆ ಮೊತ್ತದ ಸಾಲವಾಗಿದೆ. ಜನವರಿ 2022ರಲ್ಲಿ ಟಾಟಾ ಗ್ರೂಪ್ ಏರ್‌ಇಂಡಿಯಾವನ್ನು ಖರೀದಿ ಮಾಡಿದೆ. ಅದಾದ ಬಳಿಕ ಏರ್‌ಇಂಡಿಯಾದಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ.


Click it and Unblock the Notifications