ಏರ್ ಟೆಲ್ ನಿಂದ 179 ರುಪಾಯಿಯ ಪ್ರೀಪೇಯ್ಡ್ ಪ್ಲಾನ್, ಜತೆಗೆ ಇನ್ಷೂರೆನ್ಸ್

ಟೆಲಿಕಾಂ ಕಂಪೆನಿ ಭಾರ್ತಿ ಏರ್ ಟೆಲ್ 179 ರುಪಾಯಿಯ ಪ್ರೀಪೇಯ್ಡ್ ಪ್ಲಾನ್ ಅನ್ನು ಭಾನುವಾರ ಘೋಷಣೆ ಮಾಡಿದೆ. ಈ ಪ್ರೀಪೇಯ್ಡ್ ಪ್ಲಾನ್ ಜತೆಗೆ ಭಾರ್ತಿ ಆಕ್ಸಾ ಲೈಫ್ ಇನ್ಷೂರೆನ್ಸ್ ನಿಂದ 2 ಲಕ್ಷ ರುಪಾಯಿಯ ಟರ್ಮ್ ಲೈಫ್ ಕವರ್ ಆಗುತ್ತದೆ.

"179 ರುಪಾಯಿಯ ಏರ್ ಟೆಲ್ ನ ಪ್ರೀಪೇಯ್ಡ್ ಪ್ಲಾನ್ ನಲ್ಲಿ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಕರೆ ಮಾಡಬಹುದು. 2 ಜಿ.ಬಿ. ಡೇಟಾ, 300 ಎಸ್ಸೆಮ್ಮೆಸ್ ಮತ್ತು ಭಾರ್ತಿ ಆಕ್ಸಾ ಲೈಫ್ ಇನ್ಷೂರೆನ್ಸ್ ನಿಂದ 2 ಲಕ್ಷ ರುಪಾಯಿಯ ಟರ್ಮ್ ಲೈಫ್ ಕವರ್ ಆಗಲಿದೆ" ಎಂದು ಕಂಪೆನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ಯಾಕ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಇದೆ. ಸ್ಮಾರ್ಟ್ ಫೋನ್ ಬಳಸುವ ಆರಂಭಿಕ ಹಂತದವರಿಗಾಗಿ ಹಾಗೂ ಅರೆ ನಗರ ಮತ್ತು ಗ್ರಾಮೀಣ ಪ್ರದೇಶದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಏರ್ ಟೆಲ್ ನಿಂದ 179 ರುಪಾಯಿ ಪ್ರೀಪೇಯ್ಡ್ ಪ್ಲಾನ್, ಜತೆ ಇನ್ಷೂರೆನ್ಸ್

18ರಿಂದ 54 ವರ್ಷದೊಳಗಿನವರಿಗೆ ಇನ್ಷೂರೆನ್ಸ್ ಕವರ್ ಆಗುತ್ತದೆ. ವೈದ್ಯಕೀಯ ಪರೀಕ್ಷೆ ಅಥವಾ ಯಾವುದೇ ಕಾಗದ- ಪತ್ರಗಳ ಅಗತ್ಯ ಕೂಡ ಇರುವುದಿಲ್ಲ ಎನ್ನಲಾಗಿದೆ. ಇನ್ಷೂರೆನ್ಸ್ ಪಾಲಿಸಿ ಅಥವಾ ಪ್ರಮಾಣಪತ್ರವನ್ನು ತಕ್ಷಣವೇ ಡಿಜಿಟಲ್ ಫಾರ್ಮಾಟ್ ನಲ್ಲಿ ವಿತರಿಸಲಾಗುತ್ತದೆ. ಫಿಸಿಕಲ್ ಕಾಪಿ ಬೇಕೆಂದರೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+