ಏರ್ಟೆಲ್ ಸಿಮ್ ಕಾರ್ಡ್‌ದಾರರಿಗೆ ಸಿಹಿಸುದ್ದಿ.. ಕೇವಲ 189 ರೂ.ಗೆ ರಿಚಾರ್ಜ್ ಪ್ಲಾನ್.. ಹೌದು, ಭಾರತೀಯ ಏರ್ಟೆಲ್ ಕೇವಲ 189 ರೂ.ಗಳಿಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯ ಮಾಡಿದೆ. ಬಳಕೆದಾರು ಅನ್ ಲಿಮಿಟೆಡ್
ಧ್ವನಿ ಕರೆ ಮತ್ತು ಕೆಲವು ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆ ಈಗಾಗಲೇ ಲೈವ್ ಆಗಿದೆ. ನೀವು ಏರ್‌ಟೆಲ್ ಅಧೀಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿಕೊಂಡು ಓ ಸೇವೆಯನ್ನು ಆನಂದಿಸಬಹುದು.
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಹೆಚ್ಚಿನ ಹಣದ ಡೇಟಾ ಪ್ಯಾಕ್‌ಗಳನ್ನು ಹಾಕಿಸಿಕೊಳ್ಳದೇ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಡಲು ಬಯಸುವವರನ್ನು ಬಳಕೆದಾರನ್ನು ಗುರಿಯಾಗಿಸಿಕೊಂಡು ಈ ರಿಚಾರ್ಜ್ ಪ್ಲಾನ್‌ನ್ನು ಬಿಡುಗಡೆಯನ್ನು ಮಾಡಿದೆ.
189 ರೂ.ಗೆ ರಿಚಾರ್ಜ್ ಪ್ಲಾನ್‌ನಲ್ಲಿ ಏನೆಲ್ಲಾ ಸೇವೆಗಳು ಲಭ್ಯ?
ಏರ್ಟೆಲ್‌ನ ಹೊಸ ರಿಚಾರ್ಜ್ ಪ್ಲಾನ್ 189 ಯೋಜನೆಯು 21 ದಿನಗಳವರೆಗೂ ವ್ಯಾಲಿಡಿಟಿಯನ್ನು ಹೊಂದಿದೆ.ಅನ್‌ಲಿಮಿಟಿಟ್ ಕರೆ, 1ಜಿಬಿ ಮೊಬೈಲ್ ಡೇಟಾ ಜೊತಗೆ 300 ಎಸ್‌ಎಂಎಸ್ ( ಸಂದೇಶಗಳು) ಗಳನ್ನು ಒಳಗೊಂಡಿದೆ. ಈಯೋಜನೆಯು ಕಡಿಮೆ ಡೇಟಾವನ್ನು ಬಳಕೆ ಮಾಡವರಿಗಾಗಿ ಈ ಹೊಸ ರಿಚಾರ್ಜ್ ಪ್ಲಾನ್‌ನ್ನು ಕಡಿಮೆ ಬೆಲೆ ನೀಡಲಾಗಿದೆ.
ಈ ಯೋಜನೆಯು ವಿಶೇಷವಾಗಿ ತನ್ನ ಸರಾಸರಿ ಪ್ರತಿ ಬಳಕೆದಾರ ಆದಾಯವನ್ನು (ARPU) ಹೆಚ್ಚಿಸಲು ಮತ್ತು ಕಡಿಮೆ ಖರ್ಚು ಮಾಡುವ ಗ್ರಾಹಕರನ್ನು ಉಳಿಸಿಕೊಳ್ಳಲು ರೂಪಿಸಲಾಗಿರುವ ಯೋಜನೆ ಎಂದೇ ಹೇಳಬಹುದು. ಈ ಹೊಸ ಯೋಜನೆಯು ಕಂಪನಿಯು ಬಳಕೆದಾರರ ಆಧಾರದ ನಿಷ್ಠೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಯೋಜನೆ ಮತ್ತು ರಿಲಯನ್ಸ್ ಜಿಯೋದಂತಹ ರಿಚಾರ್ಜ್ ಪ್ಲಾನ್‌ಗಳಿಗೆ ಪೈಪೋಟಿ ಕೊಡಬಹುದು. 200 ರೂ.ಗಿಂತ ಕಡಿಮೆ ರೀಚಾರ್ಜ್ ಬಯಸುವಂತಹ ಬಳಕೆದಾರಿಗೆ ಈ ಯೋಜನೆ ಹೇಳಿಮಾಡಿಸಿದ ಆಗಿದೆ. ಏರ್‌ಟೆಲ್ ಈಗ ಎರಡು ಪ್ರಮುಖ ಆಯ್ಕೆಗಳನ್ನು ನೀಡುತ್ತದೆ, ಹೊಸದಾಗಿ ಪ್ರಾರಂಭಿಸಲಾದ189 ರೂ ರಿಚಾರ್ಜ್ ಪ್ಲಾನ್ ಹಾಗೂ 28 ದಿನಗಳವರೆಗೂ ಮಾನ್ಯವಿರುವ 199 ರೂ ರಿಚಾರ್ಜ್ ಪ್ಲಾನ್‌ಗಳು ಬಳಕೆದಾರಿಗೆ ಹೆಚ್ಚಿನ ಕಾಲದವರೆಗೂ ಪ್ರಯೋಜನವನ್ನು ನೀಡುತ್ತದೆ.
ಏರ್‌ಟೆಲ್ ತನ್ನ ಪ್ರಿಪೇಯ್ಡ್ ರೀಚಾರ್ಜ್ ಪೋರ್ಟ್‌ಫೋಲಿಯೊವನ್ನು ಒಟಿಟಿ ಪ್ಲಾಟ್ ಫಾರ್ಮ್ ಬಳಕೆದಾರಿಗಾಗಿ ಹೆಚ್ಚಿನ ಆಫರ್ ಗಳನ್ನು ಬಿಡುಗಡೆ ಮಾಡಿತ್ತು. ಇತ್ತೀಚೆಗೆ, ಟೆಲಿಕಾಂ ಆಪರೇಟರ್ 279 ರೂ.ಗಳಿಂದ ಪ್ರಾರಂಭವಾಗುವ ಹೊಸ ಯೋಜನೆಗಳನ್ನು ಪರಿಚಯಿಸಿತು, ಇದು ನೆಟ್‌ಫ್ಲಿಕ್ಸ್, Zee5 ಮತ್ತು ಜಿಯೋ ಹಾಟ್ ಸ್ಟಾರ್ ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿತ್ತು. ಇದು ಇಂಟರ್ ನೆಟ್ , ವಾಯ್ಸ್ ಕರೆ ಮನರಂಜನೆಯನ್ನು ಬಯಸುವ ವಿಭಿನ್ನ ವಿಭಾಗದ ಬಳಕೆದಾರರನ್ನು ಗುರಿಯಾಗಿರಿಸಿಕೊಂಡು ಈ ಪ್ಲಾನ್‌ನ್ನು ಬಿಡುಗಡೆ ಮಾಡಿತ್ತು. ಏರ್ಟೆಲ್‌ನ 189 ರೂ.ನ ಹೊಸ ರಿಚಾರ್ಜ್ ಪ್ಲಾನ್ ಬಜೆಟ್ ಸ್ನೇಹಿ ಪ್ಲಾನ್ ಆಗಿದೆ.


Click it and Unblock the Notifications