For Quick Alerts
ALLOW NOTIFICATIONS  
For Daily Alerts

ರೈತರಿಗೆ ಸಾಲ ಒದಗಿಸುವ ಏರ್‌ಟೆಲ್ ಪೇಮೆಂಟ್ ಬ್ಯಾಂಕ್

|

ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಸಾಲ ಸೇರಿದಂತೆ ಇತರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಏರ್‌ಟೆಲ್ ಪಾವತಿ ಬ್ಯಾಂಕ್ ಮಾಸ್ಟರ್‌ಕಾರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಬ್ಯಾಂಕುಗಳ ಸೌಲಭ್ಯ ಕಡಿಮೆ ಇರುವ ಅಥವಾ ಬ್ಯಾಂಕಿಂಗ್ ಸೌಲಭ್ಯ ಹೊಂದಿರದ ಪ್ರದೇಶಗಳಲ್ಲಿ ಏರ್‌ಟೆಲ್ ಪಾವತಿ ಬ್ಯಾಂಕ್ ಸೇವೆಗಳನ್ನು ಒದಗಿಸುತ್ತದೆ.

 

ಏರ್‌ಟೆಲ್ ಬ್ಯಾಂಕ್ ಪ್ರಕಾರ ಈ ಒಪ್ಪಂದದ ಅಡಿಯಲ್ಲಿ ವಿಶೇಷ ರೀತಿಯ ಹಣಕಾಸು ಉತ್ಪನ್ನವನ್ನು ತಯಾರಿಸಲಾಗುತ್ತದೆ. ಬ್ಯಾಂಕಿಂಗ್ ಸೌಲಭ್ಯಗಳು ಅಥವಾ ಕಡಿಮೆ ಬ್ಯಾಂಕ್ ಸೌಲಭ್ಯಗಳಿಂದ ವಂಚಿತ ಪ್ರದೇಶಗಳಲ್ಲಿ ರೈತರಿಗೆ ನೆರವಾಗುವನಿಟ್ಟಿನ ಉದ್ದೇಶದಿಂದ ಈ ಉತ್ಪನ್ನವನ್ನು ಉತ್ತೇಜಿಸಲಾಗುತ್ತದೆ.

 
ರೈತರಿಗೆ ಸಾಲ ಒದಗಿಸುವ ಏರ್‌ಟೆಲ್ ಪೇಮೆಂಟ್ ಬ್ಯಾಂಕ್

ಏರ್‌ಟೆಲ್ ಪಾವತಿ ಬ್ಯಾಂಕ್ ಇತರ ಬ್ಯಾಂಕಿಂಗ್ ಸಂಸ್ಥೆಗಳಂತೆ ಯಾವಾಗ ಬೇಕಾದರೂ ನೆಫ್ಟ್ ಸೌಲಭ್ಯವನ್ನು ಬಳಸುವ ಸೇವೆಯನ್ನು ಒದಗಿಸುತ್ತದೆ. ಗ್ರಾಹಕರು ದಿನದ 24 ಗಂಟೆಯೂ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ರಜಾದಿನಗಳಲ್ಲಿ ಸಹ ನೀವು ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಬಹುದು. ನೆಫ್ಟ್‌ಗಾಗಿ ಬ್ಯಾಂಕ್ ಸ್ವಲ್ಪ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಎರಡು ಕಂಪನಿಗಳ ಹೇಳಿಕೆಯ ಪ್ರಕಾರ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ (APBL) ಮಾಸ್ಟರ್‌ಕಾರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿಶೇಷವಾಗಿ ಬ್ಯಾಂಕ್ ಸೇವೆಗಳಿಂದ ವಂಚಿತವಾಗಿರುವ ಪ್ರದೇಶಗಳಿಗೆ ಹಣಕಾಸು ಉತ್ಪನ್ನಗಳನ್ನು ಸಿದ್ಧಪಡಿಸುವುದು ಇದರ ಉದ್ದೇಶ. ಇವುಗಳಲ್ಲಿ ರೈತರು ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳು ಸೇರಿವೆ.

ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಪ್ರಸ್ತುತ 5 ಲಕ್ಷ ಬ್ಯಾಂಕಿಂಗ್ ಪಾಯಿಂಟ್‌ಗಳಲ್ಲಿ 4 ಕೋಟಿ ಗ್ರಾಹಕರಿಗೆ ಆತಿಥ್ಯ ವಹಿಸಿದೆ.

English summary

Airtel Payment Bank Releases New Campaign

Airtel Payment Bank will give loans to farmers
Story first published: Saturday, May 30, 2020, 12:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X