Ajit Pawar Plan Crash: ಜನವರಿ 28, ಬುಧವಾರದಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಎಎನ್‌ಐ ವರದಿ ಪ್ರಕಾರ, ಈ ಘಟನೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ (Maharashtra DCM), ಇಬ್ಬರು ಸಿಬ್ಬಂದಿ, ಒಬ್ಬ ಅಟೆಂಡೆಂಟ್ ಮತ್ತು ಒಬ್ಬ ಪರ್ಸನಲ್ ಸೆಕ್ಯುರಿಟ್ ಆಫೀಸರ್ ಇದ್ದರು ಎನ್ನಲಾಗಿದೆ. ಡಿಜಿಸಿಎ (DGCA) ತಿಳಿಸಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ.

ದುರಂತದಲ್ಲಿ ಸಾವನ್ನಪ್ಪಿದ 'ಮಹಾ' ನಾಯಕ!
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಾಗುತ್ತಿದ್ದ ಖಾಸಗಿ ವಿಮಾನ, ಜನವರಿ 28, 2026ರ ಬುಧವಾರ ಬಾರಾಮತಿ ವಿಮಾನ ನಿಲ್ದಾಣದಲ್ಲಿ (Baramati Plane Crash) ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಸುಮಾರು 9 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ಡಿಜಿಸಿಎ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಅಜಿತ್ ಪವಾರ್ ಸೇರಿದಂತೆ ಐವರೂ ಮೃತಪಟ್ಟಿದ್ದಾರೆ.
ಅಜಿತ್ ಪವಾರ್ ಜೊತೆ ಒಬ್ಬ ಅಟೆಂಡೆಂಟ್, ಒಬ್ಬ ಭದ್ರತಾ ಅಧಿಕಾರಿ ಹಾಗೂ ಇಬ್ಬರು ಸಿಬ್ಬಂದಿ ವಿಮಾನದಲ್ಲಿದ್ದರು ಎನ್ನಲಾಗಿದೆ. ಅಪಘಾತಾನಂತರ ರನ್‌ವೇ ಬಳಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯ ದೃಶ್ಯಾವಳಿಗಳಲ್ಲಿ ವಿಮಾನದ ಅವಶೇಷಗಳು ಮತ್ತು ಜ್ವಾಲೆಗಳು ಕಂಡುಬಂದಿವೆ. ದುರ್ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು, ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡಗಳು ಕೂಡಲೇ ಸ್ಥಳಕ್ಕೆ ಧಾವಿಸಿವೆ. ಸದ್ಯ ಅಧಿಕಾರಿಗಳು ಪ್ರದೇಶವನ್ನು ಸೀಲ್ ಮಾಡಿದ್ದು, ಬಾರಾಮತಿ ವಿಮಾನ ನಿಲ್ದಾಣದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು ಎನ್ನಲಾಗಿದೆ.
ವಿಮಾನದಲ್ಲಿದ್ದ ಅಜಿತ್ ಪವಾರ್
ಜುಲೈ 22, 1959 ರಂದು ಜನಿಸಿದ ಅಜಿತ್ ಅನಂತ್‌ರಾವ್ ಪವಾರ್ ವಿಮಾನದಲ್ಲಿದ್ದರು ಎಂದು ಪಿಟಿಐ ದೃಢಪಡಿಸಿದೆ. ಇನ್ನು ಅಜಿತ್ ಪವಾರ್ ಡಿಸೆಂಬರ್ 2024 ರಿಂದ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಏಕನಾಥ್ ಶಿಂಧೆ ಜೊತೆ ಮಹಾರಾಷ್ಟ್ರದ 8ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಘಟನೆ ಕುರಿತು ತನಿಖೆ ನಡೆಸುವ ನಿರೀಕ್ಷೆಯಿದೆ. ಮಹಾರಾಷ್ಟ್ರ ಸರ್ಕಾರ, ಅಜಿತ್ ಪವಾರ್ ಕಚೇರಿ ಅಥವಾ ವಿಮಾನ ನಿಲ್ದಾಣ ಅಧಿಕಾರಿಗಳಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದು ಸದ್ಯದ ಸುದ್ದಿಯಾಗಿದ್ದು, ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.
ರಾಜಕೀಯದಲ್ಲಿ ಛಾಪು ಮೂಡಿಸಿದ್ದ ಅಜಿತ್ ಪವಾರ್!
ಅಜಿತ್ ಪವಾರ್ 1991 ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಬಾರಾಮತಿಯಿಂದ ಮಹಾರಾಷ್ಟ್ರ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ವಿಶೇಷ ಅಂದರೆ ಅಂದಿನಿಂದ 7 ಬಾರಿ ಸತತವಾಗಿ ಅದೇ ವಿಧಾನಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅದೇ ಸಂದರ್ಭದಲ್ಲಿ ಲೋಕಸಭೆಗೂ ಆಯ್ಕೆಯಾಗಿದ್ದರು. ರಾಜಕೀಯ ವೃತ್ತಿ 2004 ರಿಂದ ಪ್ರಾರಂಭವಾಗಿ, ಜಲಸಂಪನ್ಮೂಲ, ಸಿಂಚಾಯಿ, ಇಂಧನ ಮತ್ತು ಹಣಕಾಸು ಇಲಾಖೆಗಳಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅಜಿತ್ ಪವಾರ್ ಅವರಿಗಿದೆ. ಇನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ 6 ಬಾರಿ ಸೇವೆ ಸಲ್ಲಿಸಿರುವ ಗೌರವ ಇವರಿಗೆ ಸಲ್ಲುತ್ತದೆ.


Click it and Unblock the Notifications