ಅಕ್ಷಯ ತೃತೀಯವು ಜನಪ್ರಿಯವಾದ ಹಿಂದೂ ಹಬ್ಬವಾಗಿದೆ. ಈ ದಿನದಂದು ಹಿಂದೂಗಳು ಹಾಗೂ ಜೈನರು ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳ ಮೂರನೇ ದಿನವೇ ಅಕ್ಷಯ ತೃತೀಯ ದಿನವಾಗಿದೆ. ಈ ದಿನಕ್ಕೂ ಒಂದು ವಾರಕ್ಕೂ ಮುನ್ನವೇ ಚಿನ್ನದ ಬೆಲೆಯು ಏರಿಳಿತವಾಗುತ್ತದೆ. ಅಕ್ಷಯ ತೃತೀಯಕ್ಕೂ ಮುಂಚಿನ ದಿನ ಚಿನ್ನದ ಬೆಲೆ ಹೇಗಿದೆ ಎಂಬ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.
ಅಕ್ಷಯ ಎಂದರೇ ಶಾಶ್ವತ ಎಂದಾದರೆ ತೃತೀಯ ಎಂದರೆ ಮೂರು ಎಂದು ಅರ್ಥವಾಗಿದೆ. ಅಕ್ಷಯ ತೃತೀಯವು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಯಾವುದೇ ದೇಶದಲ್ಲಿದ್ದರೂ ಕೂಡಾ ಹಿಂದೂಗಳು ಹಾಗೂ ಜೈನರು ಈ ಹಬ್ಬವನ್ನು ಆಚರಣೆಯ ಭಾಗವಾಗಿ ಚಿನ್ನವನ್ನು ಖರೀದಿ ಮಾಡುವುದು ಒಂದು ಪ್ರತೀತಿಯಾಗಿದೆ. ಈ ದಿನದಂದು ಚಿನ್ನವನ್ನು ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಈ ಅಕ್ಷಯ ತೃತೀಯ ದಿನ ನೀವು ಚಿನ್ನ ಖರೀದಿ ಮಾಡಲು ಬಯಸಿದ್ದರೆ, ಅದಕ್ಕೂ ಮುಂಚಿನ ದಿನದ ಚಿನ್ನದ ಬೆಲೆಯ ಬಗ್ಗೆಯೂ ಮಾಹಿತಿ ಹೊಂದಿರುವುದು ಉತ್ತಮವಾಗಿದೆ. ಶುಕ್ರವಾರ ಏಪ್ರಿಲ್ 21ರಂದು ಅಂದರೆ ಅಕ್ಷಯ ತೃತೀಯಕ್ಕೂ ಒಂದು ದಿನ ಮುನ್ನ ಚಿನ್ನದ ಬೆಲೆಯು ಏರಿಕೆಯಾಗಿದೆ. ನಿನ್ನೆ ದರವು ಇಳಿಕೆಯಾಗಿದ್ದು, ಇಂದು ಮತ್ತೆ ಹೆಚ್ಚಳವಾಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 21ರಂದು ಈ ಸಮಯದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 60025.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗಿದ್ದು 74748.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.04ರಷ್ಟು ಇಳಿದಿದ್ದು 1,984.37 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.15ರಷ್ಟು ಕುಸಿತ ಕಂಡಿದ್ದು 24.96 ಯುಎಸ್ ಡಾಲರ್ ಆಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?
ಕಳೆದ 10 ದಿನದಲ್ಲಿ 4 ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಉಳಿದ ಆರು ದಿನಗಳ ಪೈಕಿ ನಾಲ್ಕು ಬಾರಿ ಇಳಿಕೆಯಾಗಿದ್ದರೆ, ಕೇವಲ ಒಂದು ಬಾರಿ ಮಾತ್ರ (ಏಪ್ರಿಲ್ 17) ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಹಲವಾರು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಾ ಸಾಗುತ್ತಿದೆ ಎಂಬುವುದು ಗಮನಾರ್ಹ.
ಏಪ್ರಿಲ್ 21ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 56,050 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 230 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,150 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಏರಿಕೆಯಾಗ್ಗಿದ್ದು ಪ್ರಸ್ತುತ 77,600 ರೂಪಾಯಿ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,180 ರೂಪಾಯಿ (+200 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 56,050 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,150 ರೂಪಾಯಿ (+200 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 56,200 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,280 ರೂಪಾಯಿ (+200 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 56,050 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,150 ರೂಪಾಯಿ (+220 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,180 ರೂಪಾಯಿ (+200 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 61,180 ರೂಪಾಯಿ (+200 ರೂಪಾಯಿ)


Click it and Unblock the Notifications