ಇಂದು (ಏಪ್ರಿಲ್ 22) ನಾವು ದೇಶದಲ್ಲಿ ಅಕ್ಷಯ ತೃತೀಯ ಮತ್ತು ಈದ್ ಉಲ್ ಫಿತರ್ ಹಬ್ಬದ ಆಚರಣೆಯಲ್ಲಿದ್ದೇವೆ. ಈ ದಿನ ಚಿನ್ನ ಖರೀದಿ ಮಾಡುವುದು ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ. ಕೆಲವು ದಿನಗಳ ಹಿಂದೆಯೇ ಅಕ್ಷಯ ತೃತೀಯ ದಿನವೇ ಚಿನ್ನ ಖರೀದಿ ಮಾಡಬೇಕೆಂದು ಹಣವನ್ನು ಜೋಪಾನ ಮಾಡಿಕೊಂಡು ಬಂದಿರುವವರು ಹಲವಾರು ಮಂದಿ ಇದ್ದಾರೆ. ಈ ನಡುವೆ ಇಂದು ಚಿನ್ನ ಖರೀದಿ ಮಾಡುವುದಕ್ಕೂ ಮುನ್ನ ನೀವು ಇಂದಿನ ದರ ಪರಿಶೀಲಿಸುವುದು ಉತ್ತಮ.
ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡುವವರಿಗೆ ಸಿಹಿಸುದ್ದಿಯಿದೆ. ಹೌದು, ಇಂದು ಹತ್ತು ಗ್ರಾಂ ಚಿನ್ನದ ದರದಲ್ಲಿ 300 ರೂಪಾಯಿ ಇಳಿಕೆ ಕಂಡು ಬಂದಿದೆ. ಕೆಲವು ದಿನಗಳ ಹಿಂದೆ ಚಿನ್ನದ ದರವು ಸಾರ್ವಕಾಲಿಕವಾಗಿ ಏರಿಕೆ ಕಂಡು ಬಂದಿದೆ. ಅದಾದ ಬಳಿಕ ಏರುಗತಿಯಲ್ಲೇ ಸಾಗಿದ ಗೋಲ್ಡ್ ರೇಟ್ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದೆ. ಏರಿಕೆಗೆ ಸಮವಾಗಿ ಇಳಿಕೆ ಕಂಡು ಬರುತ್ತಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 21ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 59855.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗಿದ್ದು 74670.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.10ರಷ್ಟು ಇಳಿದಿದ್ದು 1,983.19 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.69ರಷ್ಟು ಕುಸಿತ ಕಂಡಿದ್ದು 25.08 ಯುಎಸ್ ಡಾಲರ್ ಆಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?
ಕಳೆದ 10 ದಿನದಲ್ಲಿ 3 ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಉಳಿದ 7 ದಿನಗಳ ಪೈಕಿ 6 ಬಾರಿ ಇಳಿಕೆಯಾಗಿದ್ದರೆ, ಕೇವಲ ಒಂದು ಬಾರಿ ಮಾತ್ರ (ಏಪ್ರಿಲ್ 17) ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಹಲವಾರು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಾ ಸಾಗುತ್ತಿದೆ ಎಂಬುವುದು ಗಮನಾರ್ಹ. ಅಕ್ಷಯ ತೃತೀಯ ದಿನ ಮಾತ್ರ ಬಂಗಾರ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ರಿಲೀಫ್ ನೀಡಿದೆ.
ಏಪ್ರಿಲ್ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 55,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಕುಗ್ಗಿದ್ದು ಪ್ರಸ್ತುತ 60,820 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂಪಾಯಿ ಇಳಿಕೆಯಾಗ್ಗಿದ್ದು ಪ್ರಸ್ತುತ 76,900 ರೂಪಾಯಿ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,800 ರೂಪಾಯಿ (-300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,870 ರೂಪಾಯಿ (-310 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (-300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,820 ರೂಪಾಯಿ (-330 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,900 ರೂಪಾಯಿ (-300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,970 ರೂಪಾಯಿ (-310 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (-300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,820 ರೂಪಾಯಿ (-310 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,800 ರೂಪಾಯಿ (-300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,870 ರೂಪಾಯಿ (-310 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,800 ರೂಪಾಯಿ (-300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,870 ರೂಪಾಯಿ (-310 ರೂಪಾಯಿ)


Click it and Unblock the Notifications