ಆಭರಣ ಪ್ರಿಯರ ಬಹು ನಿರೀಕ್ಷಿತ ಹಬ್ಬ ಅಕ್ಷಯ ತೃತೀಯ ಬಂದೇ ಬಿಡ್ತು.. ಸಾಲು ಸಾಲು ಆಫರ್ ತಂದೆ ಬಿಡ್ತು.. ಹೌದು, ಏಪ್ರಿಲ್ 30 ರಂದು ದೇಶದಾದ್ಯಂತ ಅಕ್ಷಯ ತೃತೀಯ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಚಿನ್ನ ಖರೀದಿ ಮಾಡಿ ಮನೆ ತಂದರೆ ಶುಭಕರ ಎಂಬ ನಂಬಿಕೆ ಇದೆ.ಎಲ್ಲರೂ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಹಾಗಾಗಿ ಚಿನ್ನದ ವ್ಯಾಪಾರಿಗಳು ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡಿ ಗ್ರಾಹಕರನ್ನು ತನ್ನ ಕಡೆ ಸಳೆಯುವಂತಹ ಪ್ರಯತ್ನ ಮಾಡುತ್ತಾರೆ.
ಚಿನ್ನದ ವ್ಯಾಪಾರಿಗಳು ಅಕ್ಷಯ ತೃತೀಯದಂದು ತಮ್ಮ ಅಂಗಡಿಯಲ್ಲಿ ಹೆಚ್ಚಾಗಿ ಜನರು ಖರೀದಿ ಮಾಡಲಿ ಎಂದು ವಿಶೇಷ ಆಫರ್ ಗಳನ್ನು ನೀಡುತ್ತಾರೆ.ಅದರಲ್ಲೂ ಮೇಕಿಂಗ್ ಚಾರ್ಜ್ ಮತ್ತು ಚಿನ್ನದ ಬೆಲೆ ಮೇಲೆಗಳ ಮೇಲೆ ಭಾರೀ ರಿಯಾತಿಯನ್ನು ನೀಡಿರುತ್ತಾರೆ.

ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಲ್ಲೇ ಇದೆ. ಅದರೂ ಸಹ ಜನರು ಚಿನ್ನ ವನ್ನು ಖರೀದಿ ಮಾಡುವುದಂತೂ ಬಿಡುವುದೇ ಇಲ್ಲ. ಅದರಲ್ಲೂ ಅಕ್ಷಯ ತೃತೀಯಕ್ಕೆ ಚಿನ್ನ ಮನೆಗೆ ಬಂದರೆ ಸಾಕ್ಷತ್ ಲಕ್ಷ್ಮೀದೇವಿಯೇ ಮನೆಗೆ ಬರುತ್ತಾಳೆ ಇದರಿಂದ ನಮ್ಮ ಮನೆಯ ಸಂಪತ್ತು ಹೆಚ್ಚಾಗುತ್ತದೆ ಎಮದು ಜನರು ಬಂಗಾರವನ್ನು ಕೊಂಡುಕೊಳ್ಳಲುತ್ತಾರೆ. ಇವರು ಕೇವಲ ಅಲಂಕಾರಕ್ಕೆ ಮಾತ್ರ ಚಿನ್ನವನ್ನು ಖರೀದಿ ಮಾಡುವುದಿಲ್ಲ ಕಷ್ಟದ ಸಮಯಕ್ಕೆ ಆಗುತ್ತದೆ ಎಂದು ಕೊಂಡು ಖರೀದಿ ಮಾಡುತ್ತಾರೆ, ಇನ್ನೂ ಕೆಲವೊಂದಿಷ್ಟು ಮಂದಿ ಹೂಡಿಕೆ ರೂಪದಲ್ಲಿ ಚಿನ್ನವನ್ನು ಉಪಯೋಗ ಮಾಡಿಕೊಳ್ಳತ್ತಾರೆ.
ಅಕ್ಷಯ ತೃತೀಯಯ ಸಮಯದಲ್ಲಿ ಚಿನ್ನ ಮಾರಾಟದ ತನಿಷ್ಕ್, ಸೆಂಕೊ ಗೋಲ್ಡ್, ಎಂಪಿ ಜ್ಯುವೆಲ್ಲರ್ಸ್ ಮತ್ತು ಪಿಸಿ ಚಂದ್ರ ಜ್ಯುವೆಲ್ಲರ್ಸ್‌ನಂತಹ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಅಂಗಡಿಗಳ ಮಾರಾಟ ಹೆಚ್ಚಿಸಲು ಆಫರ್ ಘೋಷಿಸಿವೆ.
ಮೇಕಿಂಗ್ ಚಾರ್ಜ್ ಮೇಲೆ ಭರ್ಜರಿ ರಿಯಾಯಿತಿ
ಅಕ್ಷಯ ತೃತೀಯ ಹಬ್ಬದ ನಿಮಿತ್ತ ಚಿನ್ನದ ಅಂಗಡಿಗಳು ಗ್ರಾಹಕರನ್ನು ಆಕರ್ಷಿಸಲು ಮೇಕಿಂಗ್ ಚಾರ್ಜ್ ಹಾಗೂ ಚಿನ್ನದ ಬೆಲೆಗಳಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸಿವೆ.
ತನಿಷ್ಕ್ (Tanishq) ಮೇಕಿಂಗ್ ಚಾರ್ಜ್ ಮೇಲೆ ಶೇ. 20 ರಿಯಾಯಿತಿ ನೀಡುತ್ತಿದೆ.
ಸೆಂಕೊ ಗೋಲ್ಡ್ (Senco Gold) ಚಿನ್ನದ ದರದ ಮೇಲೆ 350 ರಿಯಾಯಿತಿ, ಜೊತೆಗೆ ಮೇಕಿಂಗ್ ಚಾರ್ಜ್‌ನಲ್ಲಿ ಶೇ. 30 ರಿಯಾಯಿತಿಯನ್ನು ಘೋಷಣೆ ಮಾಡಿದೆ.
ವಜ್ರದ ಆಭರಣ (Diamond Jewellery) ಖರೀದಿಸಿದರೆ, ಮೇಕಿಂಗ್ ಚಾರ್ಜ್ ಏನೂ ವಿಧಿಸಲಾಗುತ್ತಿಲ್ಲ. ಇದರ ಜೊತೆಗೆ ಖರೀದಿಯ ಮೇಲೆ ಶೇ. 15 ರಿಯಾಯಿತಿ ಲಭ್ಯವಿದೆ.
ಇಂತಹ ಆಫರ್‌ಗಳು ಅಕ್ಷಯ ತೃತೀಯದಂದು ಚಿನ್ನ ಅಥವಾ ವಜ್ರಾಭರಣ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಒಂದು ಒಳ್ಳೆಯ ಅವಕಾಶ.
ಅಕ್ಷಯ ತೃತೀಯದ ಮಹತ್ವ:
"ಅಕ್ಷಯ" ಎಂದರೆ ಕ್ಷಯವಿಲ್ಲದದು, ಎಂದರೆ ಯಾವಾಗಲೂ ಹೆಚ್ಚಾಗುವದು. ಆದ್ದರಿಂದ ಈ ದಿನ ಮಾಡಿದ ದಾನ, ಪుణ್ಯ, ಹೂಡಿಕೆಗಳು ಶಾಶ್ವತ ಲಾಭವನ್ನು ತರುತ್ತವೆ ಎನ್ನುವ ನಂಬಿಕೆ ಇದೆ. ಈ ದಿನವು ವಿಶೇಷವಾಗಿ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಆರಾಧನೆಗೆ ಮೀಸಲಾಗಿರುತ್ತದೆ.
ಕೆಲವು ಪುರಾಣಕಥೆ ಗಳ ಪ್ರಕಾರ ಈ ದಿನ ದ್ರೌಪದಿಗೆ ಅಕ್ಷಯಪಾತ್ರೆ ದೊರೆತ ದಿನ, ಅಥವಾ ಪಾರಸುರಾಮನ ಜನ್ಮದಿನ ಎನ್ನಲಾಗುತ್ತದೆ.
ಅಕ್ಷಯ ತೃತೀಯದಂದು ಜನಪ್ರಿಯ ಆಚರಣೆಗಳು ಯಾವುವು..?
- ಚಿನ್ನ ಅಥವಾ ಬೆಳ್ಳಿ ಖರೀದಿ (ಶುಭ ಸಂಕೇತವಾಗಿ)
- ಭಕ್ತಿ ಪೂಜೆ, ಹವನ, ಜಪ ತಪಗಳನ್ನು ಮಾಡುತ್ತಾರೆ
- ಹೂಡಿಕೆಗಳು: ರಿಯಲ್ ಎಸ್ಟೇಟ್, ಚಿನ್ನ, ಷೇರುಗಳು ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು
- ವಾಣಿಜ್ಯ ಪ್ರಾರಂಭ: ಹೊಸ ವ್ಯವಹಾರ ಆರಂಭಿಸುವುದಕ್ಕೆ ಈ ದಿನವನ್ನು ಅತಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಜನರು ಚಿನ್ನವನ್ನು ಖರೀದಿ ಮಾಡಲು ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ.


Click it and Unblock the Notifications