ವ್ಯಾಪಾರ-ವಹಿವಾಟು ನಡೆಸುವವರಿಗೆ ಪ್ರಮುಖ ಸುದ್ದಿ ಇಲ್ಲಿದೆ. ನಾಳೆ ಅಂದರೆ ಏಪ್ರಿಲ್ 1ರಿಂದ ಅನೇಕ ನಿಯಮಗಳು ಬದಲಾಗುತ್ತಿವೆ. ಅದರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೂಡ ಹೊರತಾಗಿಲ್ಲ. 50 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುವವರು ಜಿಎಸ್‌ಟಿ ಇ-ಇನ್‌ವಾಯ್ಸ್ ಕಡ್ಡಾಯವಾಗಲಿದೆ.
ಇ-ಇನ್ವಾಯ್ಸಿಂಗ್ ಅನ್ನು ಎಲೆಕ್ಟ್ರಾನಿಕ್ ಇನ್‌ವಾಯ್ಸಿಂಗ್ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಜಿಎಸ್‌ಟಿ ಬಿ 2 ಬಿ ಇನ್‌ವಾಯ್ಸ್‌ಗಳನ್ನು ಪ್ರಮಾಣಿತ ಜಿಎಸ್‌ಟಿ ಪೋರ್ಟಲ್‌ನಲ್ಲಿ ಬಳಸಲು ಅನುಮತಿಸುವ ಮೊದಲು ಡಿಜಿಟಲ್ ಆಗಿ ದೃಢೀಕರಿಸುತ್ತದೆ.

ಜಿಎಸ್‌ಟಿ ನಿರ್ವಹಿಸುವ ಸರಕುಪಟ್ಟಿ ನೋಂದಣಿ ಪೋರ್ಟಲ್(ಐಆರ್‌ಪಿ), ಎಲೆಕ್ಟ್ರಾನಿಕ್ ಇನ್‌ವಾಯ್ಸಿಂಗ್ ಸಿಸ್ಟಮ್ ಅಡಿಯಲ್ಲಿ ಪ್ರತಿ ಇನ್‌ವಾಯ್ಸ್ ವಿರುದ್ಧ ಗುರುತಿನ ಸಂಖ್ಯೆಯನ್ನು ನಿಗದಿಪಡಿಸುತ್ತದೆ. ಎಲ್ಲಾ ಇನ್‌ವಾಯ್ಸ್ ವಿವರಗಳನ್ನು ನೈಜ ಸಮಯದಲ್ಲಿ ಈ ಪ್ಲಾಟ್‌ಫಾರ್ಮ್‌ನಿಂದ ಜಿಎಸ್‌ಟಿ ಮತ್ತು ಇ-ವೇ ಬಿಲ್ ಪೋರ್ಟಲ್‌ಗೆ ರವಾನಿಸಲಾಗುತ್ತದೆ.
2017-18 ರಿಂದ 2019-20ರ ಹಿಂದಿನ ಪ್ರತಿಯೊಂದು ಹಣಕಾಸು ವರ್ಷಗಳಲ್ಲಿ 500 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ವ್ಯವಹಾರಗಳು ಇ-ಇನ್ವಾಯ್ಸಿಂಗ್ ಅನ್ನು ಬಳಸಬೇಕಾಗಿತ್ತು.
ಆದರೆ 2017-18 ರಿಂದ 2019-20ರ ಹಣಕಾಸು ವರ್ಷಗಳಲ್ಲಿ 100 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಇ-ಇನ್ವಾಯ್ಸಿಂಗ್ ಅನ್ನು ಜನವರಿ 1, 2021 ರಿಂದ ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಮತ್ತೆ ಪರಿಷ್ಕರಿಸಲಾಗಿದ್ದು, ಏಪ್ರಿಲ್ 1, 2021ರಿಂದ 50 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಇ-ಇನ್ವಾಯ್ಸಿಂಗ್ ಕಡ್ಡಾಯ ಎಂದು ಸಿಬಿಐಸಿ ಮಾರ್ಚ್ 8, 2021 ರಂದು ಘೋಷಿಸಿತು.
ಸಾರಿಗೆ, ವಿಮೆ ಮತ್ತು ಹಣಕಾಸು ಕಂಪನಿಗಳನ್ನು ಇ-ಇನ್ವಾವಾಯ್ಸಿಂಗ್‌ನಿಂದ ಹೊರಗಿಡಲಾಗಿದೆ. ಹಣಕಾಸು ಸಂಸ್ಥೆಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಸರಕು ಸಾರಿಗೆ ಸಂಸ್ಥೆಗಳು ಮತ್ತು ಪ್ರಯಾಣಿಕರ ಸಾರಿಗೆ ಸೌಲಭ್ಯಗಳು ಒಳಗೊಂಡಿವೆ.


Click it and Unblock the Notifications