ಪ್ರಸ್ತುತ 5ಜಿ ಯುಗದಲ್ಲಿ ಗೂಗಲ್ ಇಲ್ಲದೆ ಕಲ್ಪಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಜನರು ಇಂಟರ್ನೆಟ್ ಅನ್ನು ಪ್ರವೇಶಿಸಲು ಗೂಗಲ್ ಅನ್ನು ಸರ್ಚ್ ಎಂಜಿನ್ ಆಗಿ ಬಳಸುತ್ತಾರೆ. ಗೂಗಲ್‌ನ ಉಚಿತ ಸೇವೆಯು ಇದರಿಂದ ಕೋಟ್ಯಾಂತರ ಜನರ ಬಳಕೆಗೆ ಕಾರಣಾಗಿದೆ.
ಆದರೆ, ಈಗ ಗೂಗಲ್ ತನ್ನ ಬಳಕೆದಾರರಿಗೆ ಆಘಾತ ನೀಡಿದೆ. ವಾಸ್ತವವಾಗಿ, ಜೂನ್ 1 ರಿಂದ, ಗೂಗಲ್ ತನ್ನ ವಿಶೇಷ ಉಚಿತ ಸೇವೆಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ. ಗೂಗಲ್‌ನ ಸೇವೆಗಾಗಿ ನೀವು ಪ್ರತಿ ತಿಂಗಳು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಗೂಗಲ್ ಫೋಟೋಸ್ ಉಚಿತ ಸೇವೆ ಮುಕ್ತಾಯ
ಗೂಗಲ್ ಫೋಟೋಗಳಲ್ಲಿ ಉಚಿತ ಕ್ಲೌಡ್ ಸಂಗ್ರಹವು ಜೂನ್ 1 ರಿಂದ ಮುಕ್ತಾಯಗೊಳ್ಳಲಿದೆ. ಟೆಕ್ ದೈತ್ಯ ತನ್ನ ಶೇಖರಣಾ ಸೇವೆಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸುವ ಯೋಜನೆಯನ್ನು ಪ್ರಕಟಿಸಿದೆ. ಗೂಗಲ್ ಫೋಟೋಗಳು ಪ್ರಸ್ತುತ ತನ್ನ ಎಲ್ಲ ಬಳಕೆದಾರರಿಗೆ ಅನ್‌ಲಿಮಿಟೆಡ್ ಸ್ಟೋರೇಜ್ ಒದಗಿಸುತ್ತಿದ್ದು, ಇನ್ಮುಂದೆ ನೀಡುವುದಿಲ್ಲ.
ಕೇವಲ 15 ಜಿಬಿ ಸಂಗ್ರಹಕ್ಕೆ ಮಾತ್ರ ಅವಕಾಶ
ಜೂನ್ 1 ರಿಂದ ಗ್ರಾಹಕರು ಗೂಗಲ್ ಫೋಟೋಗಳಲ್ಲಿ ಕೇವಲ 15 ಜಿಬಿ ಸ್ಟೋರೇಜ್ ಮಾತ್ರ ಉಚಿತವಾಗಿ ಪಡೆಯುತ್ತಾರೆ. ಇದರರ್ಥ ಈ ಮಿತಿಯನ್ನು ಮೀರಿ ಗೂಗಲ್ ಫೋಟೋ ಸ್ಟೋರೇಜ್ ಬಳಸಲು ಅವರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೂ ಸದ್ಯ ನಿಮ್ಮ ಖಾತೆಯಲ್ಲಿ ಈಗಾಗಲೇ ಸಂಗ್ರಹವಾಗಿರುವ ಎಲ್ಲಾ ಹಳೆಯ ಫೋಟೋಗಳು ಮತ್ತು ವೀಡಿಯೊಗಳು ಸುರಕ್ಷಿತವಾಗಿವೆ. ಜೂನ್ 1 ರಿಂದ ನೀವು ಸಂಗ್ರಹಿಸುವ ಎಲ್ಲಾ ಫೋಟೋಗಳಿಗೆ 15 ಜಿಬಿ ಮಿತಿ ಅನ್ವಯಿಸುತ್ತದೆ.
ಹೆಚ್ಚುವರಿ ಸ್ಟೋರೇಜ್‌ಗೆ ಹಣ ಪಾವತಿಸಬೇಕು
ಗೂಗಲ್‌ನ ಚಂದಾದಾರಿಕೆಯಡಿಯಲ್ಲಿ ನೀವು 15 ಜಿಬಿ ಸ್ಟೋರೇಜ್ ಉಚಿತ ಮಿತಿಯನ್ನು ಮೀರಿದರೆ, ಹೊಸ ಫೋಟೋಗಳನ್ನು ಕ್ಲೌಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲು ಗೂಗಲ್ ಪ್ರತಿ ತಿಂಗಳು $1.99 (ಪ್ರಸ್ತುತ ದರದಲ್ಲಿ 146 ರೂ.) ವಸೂಲಿ ಮಾಡುತ್ತದೆ. ನೀವು ವಾರ್ಷಿಕ ಸದಸ್ಯತ್ವವನ್ನು ಸಹ ತೆಗೆದುಕೊಳ್ಳಬಹುದು, ಇದಕ್ಕಾಗಿ ನಿಮಗೆ ವಾರ್ಷಿಕವಾಗಿ $19.99 ವಿಧಿಸಲಾಗುತ್ತದೆ (ಪ್ರಸ್ತುತ ದರದಲ್ಲಿ 1464 ರೂ.).
2020ರಲ್ಲಿ ಮೊದಲೇ ಘೋಷಣೆಯಾಗಿತ್ತು!
1 ಜೂನ್ 2021 ರಿಂದ ಗೂಗಲ್ ಫೋಟೋಗಳಲ್ಲಿ "ಉತ್ತಮ ಗುಣಮಟ್ಟದ" ಫೋಟೋಗಳಿಗಾಗಿ ಕಂಪನಿಯು ಅನಿಯಮಿತ ಉಚಿತ ಸ್ಟೋರೇಜ್ ನೀಡುವುದಿಲ್ಲ ಎಂದು ಗೂಗಲ್ ನವೆಂಬರ್ 2020 ರಲ್ಲಿ ಘೋಷಿಸಿತು. ಗೂಗಲ್ ಪಿಕ್ಸೆಲ್ 2 ಸ್ಮಾರ್ಟ್‌ಫೋನ್ ಗ್ರಾಹಕರು ಉಚಿತ 'ಉತ್ತಮ ಗುಣಮಟ್ಟದ' ಫೋಟೋ ಬ್ಯಾಕಪ್ ಪಡೆಯುವುದನ್ನು ಮುಂದುವರಿಸುತ್ತಾರೆ. ಇದಲ್ಲದೆ, ಗೂಗಲ್ ಪಿಕ್ಸೆಲ್ 2, 3, 4 ಮತ್ತು 5 ಸ್ಮಾರ್ಟ್‌ಫೋನ್ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳನ್ನು ಉಚಿತವಾಗಿ ಸಂಗ್ರಹಿಸುವ ಪ್ರಯೋಜನವನ್ನು ಸಹ ಪಡೆಯುತ್ತಾರೆ.


Click it and Unblock the Notifications