ನೀವು ಇನ್ನೂ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಈ ಸುದ್ದಿಯನ್ನು ಓದಬೇಕು. ಏಕೆಂದರೆ ಪ್ಯಾನ್ ಹಾಗೂ ಆಧಾರ್‌ಗೆ ಲಿಂಕ್ ಮಾಡದಿದ್ದರೆ 10 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಲು ಸಿದ್ಧರಾಗಿರಿ. ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ನಿಮ್ಮ ಕಾರ್ಡ್ ನಿಷ್ಕ್ರಿಯವಾಗಲಿದೆ. ಆನಂತರ ಒಂದು ವೇಳೆ ಪ್ಯಾನ್ ಕಾರ್ಡ್ ಬಳಸಿದರೆ 10,000 ರುಪಾಯಿ ದಂಡ ತೆರಬೇಕಾಗುತ್ತದೆ.
31 ಮಾರ್ಚ್ 2021 ಆಧಾರ್ ಮತ್ತು ಪ್ಯಾನ್ ಲಿಂಕ್‌ಗೆ ಕೊನೆಯ ದಿನಾಂಕವಾಗಿದೆ. ಈ ಗಡುವಿನ ಮೊದಲು ನಿಮ್ಮ ಪ್ಯಾನ್-ಆಧಾರ್ ಅನ್ನು ನೀವು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಹ ನಿಷ್ಕ್ರಿಯಗೊಳಿಸಬಹುದು.
10,000 ರೂ. ದಂಡ ವಿಧಿಸಲಾಗುವುದು!
2021 ಮಾರ್ಚ್ 31 ರೊಳಗೆ ಲಿಂಕ್ ಮಾಡುವ ಕೆಲಸ ಪೂರ್ಣಗೊಳ್ಳದಿದ್ದರೆ, ನೀವು ಆದಾಯ ತೆರಿಗೆ ಕಾಯ್ದೆಯಡಿ 10,000 ರೂ.ಗಳ ದಂಡವನ್ನು ಸಹ ಎದುರಿಸಬೇಕಾಗುತ್ತದೆ. ಮೊದಲ ಪ್ಯಾನ್‌ಗೆ ಆಧಾರ್ ಅನ್ನು ಜೋಡಿಸುವ ಕೊನೆಯ ದಿನಾಂಕವನ್ನು 30 ಜೂನ್ 2020ಕ್ಕೆ ನಿಗದಿಪಡಿಸಿತ್ತು. ನಂತರ ಇದನ್ನು ಸರ್ಕಾರವು 20 ಮಾರ್ಚ್ 2021ಕ್ಕೆ ವಿಸ್ತರಿಸಿತು.
ಈ ದಿನಾಂಕದ ಒಳಗೆ ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡದವರು, ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಐಟಿಆರ್‌ನೊಂದಿಗೆ ಜಿಎಸ್‌ಟಿ ಇತ್ಯಾದಿಗಳನ್ನು ಸಲ್ಲಿಸಲು ಮತ್ತು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಅವರಿಗೆ ತೊಂದರೆಯಾಗುತ್ತದೆ.
ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿ
ಮನೆಯಲ್ಲಿ ಕುಳಿತುಕೊಂಡೇ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬಹುದು. ಇದಕ್ಕಾಗಿ, ನೀವು ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ.
* ಮೊದಲು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://www.incometaxindiaefiling.gov.in/home.
* ಮುಖಪುಟದಲ್ಲಿ ಎಡಭಾಗದಲ್ಲಿ ಲಿಂಕ್ ಆಧಾರ್ ಆಯ್ಕೆಯನ್ನು ನೀವು ನೋಡುತ್ತೀರಿ. ನೀವು ಅದರ ಮೇಲೆ ಕ್ಲಿಕ್ ಮಾಡಿ.
* ಇದರ ನಂತರ, ನಿಮ್ಮ ಮುಂದೆ ಒಂದು ಪೇಜ್ ಕಾಣಿಸುತ್ತದೆ, ಇದರಲ್ಲಿ ನೀವು ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ಆಧಾರ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ನೀಡಿದರೆ, ನೀವು ಅದರ ಮೇಲೆ ಕ್ಲಿಕ್ ಮಾಡಬೇಕು.
* ಇದರ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ, ನಿಮ್ಮ ಮುಂದೆ ಒಂದು ಪುಟ ತೆರೆಯುತ್ತದೆ, ಇದರಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್‌ಗೆ ಲಿಂಕ್ ಮಾಡುವ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ.
ಎಸ್‌ಎಂಎಸ್ ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಕೇವಲ ಒಂದು ಸಂದೇಶವನ್ನು ಕಳುಹಿಸುವ ಮೂಲಕ ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಬಹುದು.
* ಎಸ್‌ಎಂಎಸ್ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567678 ಅಥವಾ 56161 ಗೆ ಸಂದೇಶ ಕಳುಹಿಸಿ.
* UIDPAN ಸ್ಪೇಸ್ 12 ಅಂಕಿಗಳ ಆಧಾರ್ ಸಂಖ್ಯೆ ನಂತರ ಸ್ಪೇಸ್ ನೀಡಿ 10 ಸಂಖ್ಯೆ ಪ್ಯಾನ್ ನಂಬರ್ ಅನ್ನು ಟೈಪ್ ಮಾಡಿ ಈ ಮೇಲ್ಕಂಡ ನಂಬರ್‌ಗೆ ಎಸ್‌ಎಂಎಸ್ ಮಾಡಿ
* ಅದರ ನಂತರ, ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ವಿನಂತಿಯ ರಶೀದಿಯ ಸಂದೇಶವನ್ನು ಪಡೆಯುತ್ತಾರೆ.
* ವಿನಂತಿಯನ್ನು ಮಾಡಿದ ಕೆಲವು ದಿನಗಳ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಎಸ್‌ಎಂಎಸ್ ಮೂಲಕ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ.
ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
-ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ www.incometaxindiaefiling.gov.in ನ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ.
-ಅಲ್ಲಿ ಮೇಲ್ಭಾಗದ 'ಕ್ವಿಕ್ ಲಿಂಕ್ಸ್' ಮೇಲೆ 'ಲಿಂಕ್ ಆಧಾರ್' ಕ್ಲಿಕ್ ಮಾಡಿ. ನಂತರ ಸ್ಕ್ರೀನ್ ಮೇಲೆ ಹೊಸ ಪೇಜ್ ತೆರೆಯುತ್ತದೆ.
-ಈ ಪುಟದ ಮೇಲ್ಭಾಗದಲ್ಲಿ ಹೈಪರ್ಲಿಂಕ್ ಇರುತ್ತದೆ, ಅದನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ, ನೀವು ಈಗಾಗಲೇ ಆಧಾರ್ ಲಿಂಕ್ ಮಾಡಲು ವಿನಂತಿಸಿದ್ದರೆ ಸ್ಟೇಟಸ್ ಪರಿಶೀಲಿಸಿ ಮೇಲೆ ಕ್ಲಿಕ್ ಮಾಡಿ.
-ಈ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
-'ವ್ಯೂ ಲಿಂಕ್ ಆಧಾರ್ ಸ್ಥಿತಿ' ಕ್ಲಿಕ್ ಮಾಡಿ. ಅದರ ಫಲಿತಾಂಶದಲ್ಲಿ ಪ್ಯಾನ್ ನಿಮ್ಮ ಆಧಾರ್ ಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯುತ್ತದೆ.
ನಿಷ್ಕ್ರಿಯಗೊಂಡರೂ ಐಡಿ ಪ್ರೂಫ್ ಆಗಿ ಬಳಸಬಹುದು
ಒಂದು ವೇಳೆ ನಿಮ್ಮ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅದನ್ನು ವ್ಯಹವಾರಕ್ಕೆ ಬಳಸುವಂತಿಲ್ಲ. ಆದರೆ ಅದನ್ನು ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದು. ಉದಾಹರಣೆಗೆ ಬ್ಯಾಂಕ್ ಖಾತೆ ತೆರೆಯಲು ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಳಸಿದರೆ ನಿಮಗೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಕ್ರಿಯ ಪ್ಯಾನ್ ಕಾರ್ಡ್ ಅವಶ್ಯಕತೆ ಇದೆ. ಹಣ ಡೆಪಾಸಿಟ್ ಮಾಡಲು, ಹಣ ವರ್ಗಾವಣೆಗೆ ಪ್ಯಾನ್ ಕಾರ್ಡ್ ಬಳಕೆ ಅತ್ಯವಶ್ಯಕ.


Click it and Unblock the Notifications