ಚೀನಾದ ಇ-ಕಾಮರ್ಸ್ ದೈತ್ಯ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ನೂತನ ಚೇರ್‌ಮನ್ ಹಾಗೂ ಸಿಇಒ ಘೋಷಣೆ ಮಾಡಿದೆ. ನೂತನ ಸಿಇಒ ಆಗಿ ಅಲಿಬಾಬಾ ಗ್ರೂಪ್ ಎಡ್ಡಿ ಯೋಂಗ್ಮಿಂಗ್ ಅನ್ನು ನೇಮಕ ಮಾಡಿದೆ. ಈ ಹಿಂದೆ ಡೇನಿಯಲ್ ಜಾಂಗ್ ಅಲಿಬಾಬಾ ಗ್ರೂಪ್‌ನ ಸಿಇಒ ಆಗಿದ್ದರು. ಆದರೆ ಮಂಗಳವಾರ ಅಲಿಬಾಬಾ ಗ್ರೂಪ್ ಈ ನೂತನ ಚೇರ್‌ಮನ್ ಹಾಗೂ ಸಿಇಒ ಬಗ್ಗೆ ಘೋಷಣೆ ಮಾಡಿದೆ.
ಡೇನಿಯಲ್ ಜಾಂಗ್ ಕ್ಲೌಡ್ ಇಂಟೆಲಿಜೆನ್ಸ್ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಅಲಿಬಾಬಾ ಸಂಸ್ಥೆ ಹೇಳಿದೆ. ಜಾಂಗ್ ಡಿಸೆಂಬರ್‌ನಿಂದ ಅಲಿಬಾಬಾ ಗ್ರೂಪ್‌ನ ಸಿಇಒ ಮತ್ತು ಚೇರ್‌ಮನ್ ಆಗಿದೆ, ಅದರ ಕ್ಲೌಡ್ ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಸ್ತುತ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಜೋಸೆಫ್ ತ್ಸೈ ಈಗ ಅಲಿಬಾಬಾ ಗ್ರೂಪ್‌ನ ಚೇರ್‌ಮನ್ ಆಗಿ ನೇಮಕಗೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಂಸ್ಥೆಯು ಆರು ಘಟಕಗಳಾಗಿ ಪುನರ್‌ರಚನೆ ಮಾಡಲಾಗುವುದು ಎಂದು ಹೇಳಿದೆ. ಹಾಗೆಯೇ ಪ್ರತಿಯೊಂದಕ್ಕೂ ತಮ್ಮದೇ ಆದ ಸಿಇಒಗಳು ಹಾಗೂ ಬೋರ್ಡ್ ಅನ್ನು ಹೊಂದಿರಲಿದೆ ಎಂದು ಹೇಳಿತ್ತು. ಇನ್ನು ಈ ಹಿಂದೆ ಅಲಿಬಾಬಾ ಗ್ರೂಪ್ ನೇಮಕಾತಿಯನ್ನು ಕೂಡಾ ಘೋಷಣೆ ಮಾಡಿದೆ. ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಿರುವಾಗ ಅಲಿಬಾಬಾ ಗ್ರೂಪ್ ನೇಮಕಾತಿ ಘೋಷಿಸಿದೆ.
"ಕಾರ್ಪೊರೇಟ್ ಆಡಳಿತದ ದೃಷ್ಟಿಕೋನದಿಂದ, ಕ್ಲೌಡ್ ಇಂಟೆಲಿಜೆನ್ಸ್ ಗ್ರೂಪ್ ಸ್ವತಂತ್ರ ಸಾರ್ವಜನಿಕ ಕಂಪನಿಯಾಗುವ ಹಾದಿಯಲ್ಲಿ ಮುಂದುವರಿಯುತ್ತಿದೆ. ಆದ್ದರಿಂದಾಗಿ ನಮಗೆ ಬೋರ್ಡ್ ಹಾಗೂ ನಿರ್ವಹಣಾ ತಂಡದ ನಡುವೆ ಪ್ರತ್ಯೇಕತೆಯ ಅಗತ್ಯವಿದೆ," ಎಂದು ಈ ಹಿಂದೆ ಸಂಸ್ಥೆ ಹೇಳಿದೆ. "ಎರಡು ಸಂಸ್ಥೆಗಳ ಸಿಇಒ ಹಾಗೂ ಚೇರ್‌ಮನ್ ಆಗಿ ಒಂದೇ ಸಂದರ್ಭದಲ್ಲಿ ಕಾರ್ಯನಿರ್ವಹಣೆ ಮಾಡಲು ಕಷ್ಟ," ಎಂದು ಕೂಡಾ ಹೇಳಿದೆ.
ಇನ್ನು ಈ ಕ್ಲೌಡ್ ಘಟಕವು 41 ಬಿಲಿಯನ್ ಡಾಲರ್‌ನಿಂದ 60 ಬಿಲಿಯನ್ ಡಾಲರ್‌ವರೆಗಿನ ಮೌಲ್ಯವನ್ನು ಹೊಂದಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಡೇನಿಯಲ್ ಜಾಂಗ್ 2015ರಿಂದ ಅಲಿಬಾಬಾ ಗ್ರೂಪ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಾ ಬಂದಿದ್ದಾರೆ. 2019ರಲ್ಲಿ ಚೇರ್‌ಮನ್ ಹುದ್ದೆ ಪಡೆದುಕೊಂಡಿದ್ದಾರೆ.
ವರ್ಷದಲ್ಲಿ 15,000 ನೇಮಕಾತಿ ಮಾಡಲಿದೆ ಅಲಿಬಾಬಾ!
ಚೀನಾದ ಬಹುರಾಷ್ಟ್ರೀಯ ಟೆಕ್ ದೈತ್ಯ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಈ ವರ್ಷ 15,000 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ಹೇಳಿದೆ. ಈ ಹಿಂದೆ ಸಂಸ್ಥೆಯು ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ. ಈ ವರದಿಯನ್ನು ಅಲಿಬಾಬಾ ಗ್ರೂಪ್ ತಳ್ಳಿಹಾಕಿ, ನೇಮಕಾತಿಯನ್ನು ಘೋಷಣೆ ಮಾಡಿದೆ.
ಅಲಿಬಾಬಾ ಗುರುವಾರ ವೈಬೊದಲ್ಲಿ ತನ್ನ "ಆರು ಪ್ರಮುಖ ವ್ಯಾಪಾರ ವಿಭಾಗಗಳು ಒಟ್ಟು 15,000 ಹೊಸ ನೇಮಕಾತಿಗಳನ್ನು ಮಾಡುವ ಅಗತ್ಯವಿದೆ," ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು 3,000 ವಿಶ್ವವಿದ್ಯಾನಿಲಯ ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿಯು ಹೇಳಿದೆ.
ಸಂಸ್ಥೆಯು ಈ ಉದ್ಯೋಗ ಕಡಿತವನ್ನು ವದಂತಿ ಎಂದು ಹೇಳಿದೆ. ಹಾಗೆಯೇ ಈ ಉದ್ಯೋಗಿಗಳ ಕಡಿತವು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ. ಒಂದು ವಾರಗಳ ಹಿಂದೆ ಬ್ಲ್ಯೂಬರ್ಗ್ ವರದಿ ಮಾಡಿದೆ. ಅಲಿಬಾಬಾ ಸಂಸ್ಥೆಯಲ್ಲಿ ಒಟ್ಟಾಗಿ ಸುಮಾರು ಶೇಕಡ 7ರಷ್ಟು ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ ಎಂದು ಹೇಳಿದೆ.
ಕಂಪನಿಯು ಅಲಿಬಾಬಾ ಸಾಮ್ರಾಜ್ಯದ ಇತರ ಭಾಗಗಳಿಗೆ ತೆರಳಲು ಪ್ಯಾಕೇಜ್‌ಗಳನ್ನು ಅಥವಾ ವರ್ಗಾವಣೆಗಳನ್ನು ನೀಡುತ್ತಿದೆ ಎಂದು ಕೂಡಾ ವರದಿಯಾಗಿದೆ. ಇನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಡೇನಿಯಲ್ ಜಾಂಗ್ ಮೇ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಕಡಿತದ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಪ್ರತ್ಯೇಕ ಘಟಕಗಳಲ್ಲಿ ಸಿಬ್ಬಂದಿಗಳ ಮಾಹಿತಿ ನೀಡಿದ ಗುಂಪು ಮಾರ್ಚ್‌ನ ವೇಳೆಗೆ 235,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ.


Click it and Unblock the Notifications