For Quick Alerts
ALLOW NOTIFICATIONS  
For Daily Alerts

ಆತ್ಮ ನಿರ್ಭರ್ ಭಾರತ್: ಎಲ್ಲ ವಲಯಗಳೂ ಖಾಸಗಿಗೆ ಮುಕ್ತ ಮುಕ್ತ ಮುಕ್ತ...

|

ಎಲ್ಲ ವಲಯಗಳೂ ಖಾಸಗಿ ಕಂಪೆನಿಗಳಿಗೆ ಮುಕ್ತವಾಗಲಿದೆ. ಇದರ ಜತೆಗೆ ಸಾರ್ವಜನಿಕ ವಲಯದ ಸಂಸ್ಥೆಗಳೂ ಪ್ರಮುಖ ಪಾತ್ರ ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ತಿಳಿಸಿದರು. ಆತ್ಮನಿರ್ಭರ್ ಭಾರತ್ ಆರ್ಥಿಕ ಪ್ಯಾಕೇಜ್ ಅಂತಿಮ ಹಂತದ ಘೋಷಣೆ ವೇಳೆ ಈ ವಿಚಾರ ತಿಳಿಸಿದರು.

ನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳುನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳು

ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲೆಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇರಬೇಕು ಎಂಬ ಬಗ್ಗೆ ನಿರ್ದಿಷ್ಟವಾದ ಹೊಸ ನೀತಿಯನ್ನು ರಚಿಸಲಾಗುವುದು. ಆ ಅಧಿಸೂಚಿತ ವಲಯದಲ್ಲಿ ಕನಿಷ್ಠ ಒಂದು ಸಾರ್ವಜನಿಕ ವಲಯದ ಸಂಸ್ಥೆಯು ಇರುತ್ತದೆ. ಅದರ ಜತೆಗೆ ಖಾಸಗಿ ವಲಯದ ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಆತ್ಮ ನಿರ್ಭರ್ ಭಾರತ್: ಎಲ್ಲ ವಲಯಗಳೂ ಖಾಸಗಿಗೆ ಮುಕ್ತ ಮುಕ್ತ ಮುಕ್ತ...

ಕೊರೊನಾ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರುಪಾಯಿಯ ಆರ್ಥಿಕ ಪ್ಯಾಕೇಜ್ ಹಾಗೂ ಹಲವು ಸುಧಾರಣಾ ಕ್ರಮಗಳ ಘೋಷಣೆ ಮಾಡಿದ್ದಾರೆ. ಅದರ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಈ ಮಾಹಿತಿ ನೀಡಿದ್ದಾರೆ.

English summary

'All Sectors Open To Private Sector, Except Notified Ones'

All sectors will be opened to private companies while state-owned enterprises will play an important role in defined areas, the Finance Minister Nirmala Sitharaman said on Sunday.
Story first published: Sunday, May 17, 2020, 13:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X