ಇ-ಕಾಮರ್ಸ್ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಅಮೆಜಾನ್ ತನ್ನ ಉದ್ಯೋಗಿಗಳ ಆತಂಕವನ್ನು ಹೆಚ್ಚಿಸಿದೆ. ಅಮೆಜಾನ್ 2025 ರ ಆರಂಭದ ವೇಳೆಗೆ ಸುಮಾರು 14,000 ಮ್ಯಾನೇಜರ್ ಹುದ್ದೆಗಳನ್ನು ತೆಗೆಯುವ ಬಗ್ಗೆ ತಿಳಿದು ಬಂದಿದೆ. ಇದರಿಂದ ಕಂಪನಿಯು ವಾರ್ಷಿಕವಾಗಿ 3 ಬಿಲಿಯನ್ ಡಾಲರ್ ಉಳಿಸಬಹುದು ಎಂದು ಅಂದಾಜಿಸಲಾಗಿದೆ. ಮೋರ್ಗನ್ ಸ್ಟಾನ್ಲಿ ಅವರ ವಿಶ್ಲೇಷಣೆಯಲ್ಲಿ ಇದನ್ನು ಹೇಳಲಾಗಿದೆ.
ಈ ನಿಲುವು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರ ನಿಯಮದಂತೆ ನಡೆಯಲಿದೆ. 2025 ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವುದು ಕಂಪನಿಯ ಉದ್ದೇಶವಾಗಿದೆ. ಕಡಿಮೆ ಮ್ಯಾನೇಜರ್ ಅವರನ್ನು ಇಟ್ಟುಕೊಂಡು ಕೆಲಸ ಮಾಡಿ ಸಂಸ್ಥೆ ಬೆಳೆಯಬಹುದು ಎಂದು ಮೋರ್ಗನ್ ಸ್ಟಾನ್ಲಿ ತಿಳಿಸಿದೆ.

ಅಮೆಜಾನ್ ಸಿಇಒ ಹೇಳಿದ್ದೇನು?
2025ರ ತ್ರೈಮಾಸಿಕದಲ್ಲಿ ಪ್ರತಿಯೋಬ್ಬ ಉದ್ಯೋಗಿಯೂ ತನಗೆ ಮ್ಯಾನೇಜರ್ ನಿಗದಿ ಪಡಿಸಿದ ಗುರಿಗಿಂತ ಶೇಕಡಾ 15 ರಷ್ಟು ಹೆಚ್ಚಿನ ಗುರಿಯನ್ನು ಮುಟ್ಟಿದರೆ ಕಂಪನಿಗೆ, ಇದರಿಂದ 25206 ಕೋಟಿ ಉಳಿಸಲು ಸಾಧ್ಯವಾಗುತ್ತದೆ. ಕಂಪನಿಯಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯ. ಈ ಬದಲಾವಣೆಗಳು ವೇಗವಾಗಿ ನಿರ್ಧಾರ ಕೈಗೊಳ್ಳುವುದು, ವೆಚ್ಚಕ್ಕೆ ಕಡಿವಾಣ ಹಾಕುವುದಕ್ಕೆ ಆದ್ಯತೆ ನೀಡುತ್ತದೆ ಎಂದು ಎಂದು ಅಮೆಜಾನ್ ಸಿಇಒ ಆಂಡಿ ಜಸ್ಸಿ ತಿಳಿಸಿದ್ದಾರೆ.
ಇನ್ನು ಅಮೆಜಾನ್ ಸಿಇಒ ಜಾಸ್ಸಿ ಮುಂದಿನ ವರ್ಷದ ಜನವರಿಯಿಂದ ಉದ್ಯೋಗಿಗಳು ಪೂರ್ಣಾವಧಿಗೆ ಕಚೇರಿಗೆ ಬರುವಂತೆ ತಿಳಿಸಿದ್ದಾರೆ. ಅಮೆಜಾನ್ ಒಟ್ಟಾರೆ 1.5 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದ್ದು. ಈ ಉದ್ಯೋಗಿಗಳಲ್ಲಿ ಹೆಚ್ಚಿನವರು ಲಾಜಿಸ್ಟಿಕ್ಸ್ ಮತ್ತು ಗೋದಾಮಿನ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ.
ಮೋರ್ಗಾನ್ ಸ್ಟಾನ್ಲಿ ವಿಶ್ಲೇಷಣೆಯ ಪ್ರಕಾರ, ಪ್ರತಿ ಮ್ಯಾನೇಜರ್ ಅಂದಾಜು ವೆಚ್ಚವು ವರ್ಷಕ್ಕೆ 200,000 ಡಾಲರ್ ದಿಂದ 350,000 ಡಾಲರ್ ವರೆಗೆ ಇರುತ್ತದೆ. ಈ ಅಂದಾಜಿನ ಆಧಾರದ ಮೇಲೆ, ಅಮೆಜಾನ್ 13,834 ಮ್ಯಾನೇಜರ್ ಉದ್ಯೋಗಗಳನ್ನು ಕಡಿತಗೊಳಿಸಿದ ನಂತರ, ಸರಿಸುಮಾರು 2.1 ಶತಕೋಟಿಯಿಂದ 3.6 ಶತಕೋಟಿ ಡಾಲರ್ ಉಳಿಸುತ್ತದೆ. ಈ ಉಳಿತಾಯವು ಮುಂದಿನ ವರ್ಷ ಕಂಪನಿಯ ಹಾಕಿಕೊಂಡ ಕಾರ್ಯಾಚರಣೆಯ ಲಾಭದ ಸುಮಾರು 3 ಪ್ರತಿಶತದಿಂದ 5 ಪ್ರತಿಶತದವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.
2024 ರ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ, ಅಮೆಜಾನ್ ಕಂಪನಿ ಜಾಗತಿಕವಾಗಿ ಸುಮಾರು 1,05,770 ಮ್ಯಾನೇಜರ್‌ನ್ನು ಹೊಂದಿದೆ. ಈ ಸಂಖ್ಯೆ 2025ರ ಮೊದಲ ತ್ರೈಮಾಸಿಕದಲ್ಲಿ 91,936 ಕ್ಕೆ ಇಳಿಯುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ಅಂದಾಜಿಸಿದೆ.
ಅಮೆಜಾನ್ ಕಂಪನಿ ಈಗಾಗಲೇ ಹೆಚ್ಚು ಮ್ಯಾನೇಜರ್ ಹುದ್ದೆಗಳನ್ನು ನೇಮಿಸಿಕೊಂಡಿದೆ. ಈಗ ವಾರ್ಷಿಕ ವೆಚ್ಚಗಳ ಅನುಗುಣವಾಗಿ ಹುದ್ದೆಗಳಿಗೆ ಕತ್ತರಿ ಬೀಳಲಿದೆ. ಯಾವ ತಂಡದಲ್ಲಿ ಎಷ್ಟು ಉದ್ಯೋಗಿಗಳು ಇರಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಂಡಿ ಜಸ್ಸಿ ತಿಳಿಸಿದ್ದಾರೆ.


Click it and Unblock the Notifications