ಖುಷಿ ಸುದ್ದಿ! ಅಮೆಜಾನ್ ಭರಪೂರ ಆಫರ್‌.. ಐಫೋನ್ 16, 16 ಪ್ರೊ ಮತ್ತು 16 ಪ್ರೊ ಮ್ಯಾಕ್ಸ್ ಬೆಲೆ ಭಾರೀ ಕುಸಿತ

ಐಫೋನ್‌ ಪ್ರಿಯರಿಗೆ ಸಿಹಿಸುದ್ದಿ! ಹೌದು, ಐಫೋನ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ! ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬ ಬಯಕೆ ಇರುತ್ತದೆ. ಇಂಥಾ ಆಸೆ ನಿಮಗೂ ಇದ್ಯಾ? ಹಾಗಿದ್ರೆ, ಈ ಅವಕಾಶ ಮಿಸ್‌ ಮಾಡಿಕೊಳ್ಳಬೇಡಿ.

ಹೌದು, ಇತ್ತೀಚಿನ ಐಫೋನ್ 16 ಪ್ರೊ ಅಥವಾ ಐಫೋನ್ ಪ್ರೊ ಮ್ಯಾಕ್ಸ್ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ನೀವು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಐಫೋನ್‌ಗಳನ್ನು ಬಿಡುಗಡೆ ಬೆಲೆಗಿಂತ ಕಡಿಮೆಗೆ ಖರೀದಿಸಬಹುದು. ಬನ್ನಿ, ಈ ಆಫರ್‌ಗಳನ್ನು ಹೇಗೆ ಪಡೆಯಬೇಕು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಭರಪೂರ ಆಫರ್‌.. ಐಫೋನ್ 16, 16 ಪ್ರೊ ಮತ್ತು 16 ಪ್ರೊ ಮ್ಯಾಕ್ಸ್ ಬೆಲೆ

ಐಫೋನ್ 16 ಪ್ರೊ ಮ್ಯಾಕ್ಸ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ನೀವು 256GB, 512GB, ಮತ್ತು 1TB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಸಬಹುದು. ಇವುಗಳ ಬೆಲೆಗಳು ಕ್ರಮವಾಗಿ 1,44,900 ರೂ., 1,64,900 ರೂ. ಮತ್ತು 1,84,900 ರೂ. ಆಗಿದೆ. ಪ್ರಸ್ತುತ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ ಪ್ರತಿ ರೂಪಾಂತರದ ಮೇಲೆ 7,000 ರೂ. ರಿಯಾಯಿತಿ ಲಭ್ಯವಿದೆ. ನೀವು, ಪ್ರಸ್ತುತ 1,37,900 ರೂ.,1,57,900 ರೂ. ಮತ್ತು 1,77,900 ರೂ.ಗೆ ಬೆಲೆಗೆ ಖರೀದಿಸಬಹುದು.

ಐಫೋನ್ 16 ಪ್ರೊ ಆಫರ್‌ಗಳು

ಐಫೋನ್ 16 ಪ್ರೊ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನ್ 128GB, 256GB, 512GB ಮತ್ತು 1TB ಸ್ಟೋರೇಜ್ ಹೊಂದಿದೆ. ಇದರ ಮೂಲ ಮಾದರಿಯ ಬೆಲೆ 1,19,900 ರೂ. ಮತ್ತು ಟಾಪ್ ವೇರಿಯಂಟ್ ಬೆಲೆ 1,69,900 ರೂ. ಆಗಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿನ ಎಲ್ಲಾ ರೂಪಾಂತರಗಳಲ್ಲಿ 7,000 ರೂ.ಗಳ ರಿಯಾಯಿತಿ ಲಭ್ಯವಿದೆ. ನೀವು, ಈಗ ಮೂಲ ಮಾದರಿಯನ್ನು 1,12,900 ರೂ. ಮತ್ತು ಟಾಪ್ ವೇರಿಯಂಟ್ ಅನ್ನು 1,62,900 ರೂ.ಗೆ ಕೊಳ್ಳಬಹುದು.

ಅಮೆಜಾನ್ ಪ್ರೈಮ್ ಸದಸ್ಯರು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ, ಈ ಐಫೋನ್ ಕೊಂಡರೆ ಹೆಚ್ಚುವರಿಯಾಗಿ 3,000 ರೂ. ರಿಯಾಯಿತಿ ಲಭ್ಯವಿದೆ. ಐಫೋನ್ ಪ್ರೊ ಮ್ಯಾಕ್ಸ್ ಖರೀದಿ ಮೇಲೆ 5,337 ರೂ. ಅಥವಾ ಐಫೋನ್ ಪ್ರೊ ಸ್ಮಾರ್ಟ್‌ಫೋನ್‌ ಖರೀದಿಸಿದರೆ 3,387 ರೂ. ವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಎಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 5,000 ರೂ. ರಿಯಾಯಿತಿ ಲಭ್ಯವಿದೆ. ಎಸ್‌ಬಿಐ ಮತ್ತು ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 3,000 ರೂ. ರಿಯಾಯಿತಿ ಸಹ ಪಡೆಯಬಹುದು.

43,150 ರೂ.ಗಳ ಎಕ್ಸ್‌ಚೇಂಜ್ ಆಫರ್‌

ನೀವು ಹಳೆಯ ಐಫೋನ್‌ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಲು ಬಯಸಿದರೆ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ನೀವು 43,150 ರೂ. ವರೆಗೆ ಡಿಸ್ಕೌಂಟ್ ಲಭ್ಯವಿದೆ. ಆದರೆ, ಅಮೆಜಾನ್‌ ಸೈಟ್‌ನಲ್ಲಿ 22,800 ರೂ. ವರೆಗೆ ರಿಯಾಯಿತಿ ಸಿಗುತ್ತದೆ. ಈ ಆಫರ್‌ಗಳೊಂದಿಗೆ ಐಫೋನ್ 16 ಪ್ರೊ ಮ್ಯಾಕ್ಸ್‌ ಬೆಲೆ 88,750 ರೂ.ಗೆ ಇಳಿಕೆಯಾಗಲಿದೆ. ಇನ್ನೂ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಲ್ಲಿನ ಎಕ್ಸ್‌ಚೇಂಜ್ ಆಫರ್‌ಗಳೊಂದಿಗೆ ಐಫೋನ್ 16 ಪ್ರೊ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ನೀವು ಮೂಲ ಮಾದರಿಯನ್ನು 64,750 ರೂ. ಖರೀದಿಸಬಹುದು.

ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ ವೈಶಿಷ್ಟ್ಯಗಳು

ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ 6.3 ಇಂಚಿನ ಮತ್ತು 6.9 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 2,000 ನಿಟ್ಸ್‌ ವರೆಗೆ ಗರಿಷ್ಠ ಬ್ರೈಟ್‌ನೆಸ್‌ ಮತ್ತು ಆಪಲ್‌ನ ಅಪ್‌ಗ್ರೇಡ್ ಮಾಡಿದ ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ಹೊಂದಿದೆ.

ಎರಡೂ ಐಫೋನ್ 16 ಪ್ರೊ ಮಾದರಿಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿವೆ. ಇದು 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ. 12 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮರಾ ಮತ್ತು 5x ಆಪ್ಟಿಕಲ್ ಜೂಮ್ ಕಾರ್ಯಕ್ಷಮತೆಯನ್ನು ನೀಡುವ 'ಟೆಟ್ರಾಪ್ರಿಸಂ' ಪೆರಿಸ್ಕೋಪ್ ಲೆನ್ಸ್, 12 ಮೆಗಾಪಿಕ್ಸೆಲ್ TrueDepth ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 4K 120fps ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+